ಕೊರೊನಾದಿಂದ ಪತಿಯ ಸಾವು; ಮನನೊಂದ 3 ತಿಂಗಳ ಗರ್ಭಿಣಿ ಪತ್ನಿ ನೇಣಿಗೆ ಶರಣು

ಪತಿ ಸತೀಶ್ ಕೊರೊನಾದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸತೀಶ್​ ಅಂತ್ಯಸಂಸ್ಕಾರ ಬಳಿಕ ನಂದಿನಿಗೆ ವಿಚಾರ ತಿಳಿಸಲಾಗಿತ್ತು. ಈ ಆಘಾತಕಾರಿ ಸಂಗತಿ ತಿಳಿದು, ಮನನೊಂದು ಪತ್ನಿ ನಂದಿನಿ ನೇಣಿಗೆ ಶರಣಾಗಿದ್ದಾರೆ.

ಕೊರೊನಾದಿಂದ ಪತಿಯ ಸಾವು; ಮನನೊಂದ 3 ತಿಂಗಳ ಗರ್ಭಿಣಿ ಪತ್ನಿ ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ganapathi bhat

Aug 21, 2021 | 10:05 AM

ರಾಮನಗರ: ಕೊರೊನಾದಿಂದ ಪತಿ ಮರಣಿಸಿದ ಸುದ್ದಿ ಕೇಳಿ ಪತ್ನಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ ಕನಕಪುರದ ಬಸವೇಶ್ವರನಗರದಲ್ಲಿ ನಡೆದಿದೆ. ಪತಿಯ ಸಾವಿನ ಸುದ್ದಿ ತಿಳಿದು ಮನನೊಂದು ಪತ್ನಿ, 3 ತಿಂಗಳ ಗರ್ಭಿಣಿ ನಂದಿನಿ(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಸತೀಶ್ ಕೊರೊನಾದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸತೀಶ್​ ಅಂತ್ಯಸಂಸ್ಕಾರ ಬಳಿಕ ನಂದಿನಿಗೆ ವಿಚಾರ ತಿಳಿಸಲಾಗಿತ್ತು. ಈ ಆಘಾತಕಾರಿ ಸಂಗತಿ ತಿಳಿದು, ಮನನೊಂದು ಪತ್ನಿ ನಂದಿನಿ ನೇಣಿಗೆ ಶರಣಾಗಿದ್ದಾರೆ. ಕನಕಪುರ ಟೌನ್​ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕ ಕೊರೊನಾ ಸೋಂಕಿತರ ವಿವರ ಕರ್ನಾಟಕದಲ್ಲಿ ಇಂದು ಒಂದೇ ದಿನ ಒಂದೇ ದಿನ 32,218 ಜನರಿಗೆ ಕೊವಿಡ್ ಸೋಂಕು ತಗುಲಿರುವುದು ಖಚಿತವಾಗಿದ್ದು, 353 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 9,591 ಜನರಿಗೆ ಕೊವಿಡ್ ಡೃಢಪಟ್ಟಿದ್ದು, 129 ಜನರು ಅಸುನೀಗಿದ್ದಾರೆ. ಜತೆಗೆ ಕರ್ನಾಟಕದಲ್ಲಿ ಇಂದು ಒಂದೇ ದಿನ 52,581 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.

ರಾಜ್ಯದಲ್ಲಿಂದು ಹೊಸದಾಗಿ 32218 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆ 9591, ಮೈಸೂರು 2355, ಹಾಸನ 2071, ತುಮಕೂರು 1773, ಬಳ್ಳಾರಿ 1650, ಬೆಳಗಾವಿ 1138, ಶಿವಮೊಗ್ಗ 892, ದಕ್ಷಿಣ ಕನ್ನಡ 864, ಉಡುಪಿ 854, ಚಿಕ್ಕಬಳ್ಳಾಪುರ 845, ಚಿತ್ರದುರ್ಗ 838, ಧಾರವಾಡ 809, ಉತ್ತರ ಕನ್ನಡ 768, ದಾವಣಗೆರೆ 681, ಚಿಕ್ಕಮಗಳೂರು 672, ಬೆಂಗಳೂರು ಗ್ರಾಮಾಂತರ 641, ಕೊಪ್ಪಳ 598, ರಾಯಚೂರು 558, ಗದಗ 530, ಯಾದಗಿರಿ 520, ಕೊಡಗು 512, ಕೋಲಾರ 479, ಚಾಮರಾಜನಗರ 470, ಹಾವೇರಿ 387, ರಾಮನಗರ 375, ಕಲಬುರಗಿ 352, ವಿಜಯಪುರ 349, ಮಂಡ್ಯ 296, ಬಾಗಲಕೋಟೆ ಜಿಲ್ಲೆ 275, ಬೀದರ್ ಜಿಲ್ಲೆಯಲ್ಲಿ 75 ಸೋಂಕಿತರು ಪತ್ತೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ

Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada