ವರದಕ್ಷಿಣೆ ಕಿರುಕುಳ ಆರೋಪ; ನಿದ್ದೆ ಮಾತ್ರೆ ಸೇವಿಸಿ ಗೃಹಿಣಿ ಆತ್ಮಹತ್ಯೆ
ಮೂರು ವರ್ಷದ ಹಿಂದೆ ಆಲನಹಳ್ಳಿಯ ಗೌತಮ್ ಎಂಬುವವರ ಜೊತೆ ಸೌಮ್ಯಾ ವಿವಾಹವಾಗಿತ್ತು. ಸಾಲ ಮಾಡಿ ಚಿನ್ನ, ಬೆಳ್ಳಿ ವಸ್ತು ಕೊಟ್ಟು ಮದುವೆ ಮಾಡಿದ್ದರು. ಮದುವೆ ಬಳಿಕ ಅತ್ತೆ ಮತ್ತು ಗಂಡ ಮತ್ತೆ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ.
ಮೈಸೂರು: ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಬಳಿ ನಡೆದಿದೆ. ಸೌಮ್ಯಾ(26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬಿಳಿಗೆರೆಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಸೌಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ವರ್ಷದ ಹಿಂದೆ ಆಲನಹಳ್ಳಿಯ ಗೌತಮ್ ಎಂಬುವವರ ಜೊತೆ ಸೌಮ್ಯಾ ವಿವಾಹವಾಗಿತ್ತು. ಸಾಲ ಮಾಡಿ ಚಿನ್ನ, ಬೆಳ್ಳಿ ವಸ್ತು ಕೊಟ್ಟು ಮದುವೆ ಮಾಡಿದ್ದರು. ಮದುವೆ ಬಳಿಕ ಅತ್ತೆ ಮತ್ತು ಗಂಡ ಮತ್ತೆ ಹಣಕ್ಕಾಗಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಸೌಮ್ಯಾ 6 ತಿಂಗಳಿಂದ ತವರುಮನೆಯಲ್ಲೇ ಇದ್ದಳು. ಆದ್ರೂ ಬಿಡದೆ ಫೋನ್ ಮಾಡಿ ಗಂಡ ಕಿರುಕುಳ ನೀಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತು ಸೌಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಮೃತ ಸೌಮ್ಯಾ ಪೋಷಕರು ಅಳಿಯನ ವಿರುದ್ಧ ಆರೋಪ ಮಾಡಿದ್ದಾರೆ.
ಸಾಲ ಮಾಡಿ ಅದ್ದೂರಿಯಾಗಿ ಮದುವೆಯನ್ನು ಮಾಡುದ್ವಿ. ಮದುವೆ ವೇಳೆ ಚಿನ್ನ, ಬೆಳ್ಳಿ ಮೂರು ಲಕ್ಷ ಹಣವನ್ನು ನೀಡಿದ್ವಿ. ಆದ್ರೆ ಇದೀಗಾ ಗೌತಮ್ ಮತ್ತೆ ಒಂದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಗಂಡ, ಅತ್ತೆ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೌಮ್ಯ ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ಅಮ್ಮನಿಗೆ ಸಲಗ ನೋಡೋಕೆ ಆಗಲ್ಲ’; ತಾಯಿ ಆರೋಗ್ಯ ನೆನೆದು ಭಾವುಕರಾದ ದುನಿಯಾ ವಿಜಯ್