ಜಮೀನು ವಿವಾದ ಹಿನ್ನೆಲೆ ಮಹಿಳೆಯ ಹತ್ಯೆ | ಆಕಸ್ಮಿಕ ಬೆಂಕಿ ತಗುಲಿ 2  ಎಕರೆ ಅಡಿಕೆ ತೋಟ ನಾಶ

| Updated By: ವಿವೇಕ ಬಿರಾದಾರ

Updated on: May 31, 2022 | 4:20 PM

ಜಮೀನು ವಿವಾದ ಹಿನ್ನೆಲೆ ಮಹಿಳೆಯೋರ್ವಳನ್ನು ಕಲ್ಲು, ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೆಳಗಳಹಟ್ಟಿ ಗ್ರಾಮದಲ್ಲಿ ನಡೆದಿದೆ.

ಜಮೀನು ವಿವಾದ ಹಿನ್ನೆಲೆ ಮಹಿಳೆಯ ಹತ್ಯೆ | ಆಕಸ್ಮಿಕ ಬೆಂಕಿ ತಗುಲಿ 2  ಎಕರೆ ಅಡಿಕೆ ತೋಟ ನಾಶ
ಸಾಂಕೇತಿಕ ಚಿತ್ರ
Follow us on

ಚಿತ್ರದುರ್ಗ: ಜಮೀನು ವಿವಾದ ಹಿನ್ನೆಲೆ ಮಹಿಳೆಯೋರ್ವಳನ್ನು ಕಲ್ಲು, ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕೆಳಗಳಹಟ್ಟಿ ಗ್ರಾಮದಲ್ಲಿ ನಡೆದಿದೆ. ಭಾಗ್ಯಮ್ಮ(55) ಕೊಲೆಯಾದ ಮಹಿಳೆ. ಮಕ್ಕಳಾದ ಸಂತೋಷ್, ಪುರುಷೋತ್ತಮ ಮತ್ತು ಪರುಷೋತ್ತಮ ಪತ್ನಿ ವೃಷಮ್ಮ ಮತ್ತಿತರರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ 2  ಎಕರೆ ಅಡಿಕೆ ತೋಟ ನಾಶ

ಕಾರವಾರ: 2 ಎಕರೆ ಅಡಿಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ರೈತ ಮೃತ್ಯುಂಜಯ ತೋಟ ಹಾಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ ಭಾಸಿಗ್ರಾಮದ ಬಳಿ ನಡೆದಿದೆ.  ಒಂದೂವರೆ ಲಕ್ಷ ಮೌಲ್ಯದ ಪೈಪ್​ಲೈನ್ ಬೆಂಕಿಗಾಹುತಿಯಾಗಿದೆ. ರೈತ ಮೃತ್ಯುಂಜಯ ಸಾಲ ಮಾಡಿ ಅಡಿಕೆ ತೋಟ ಮಾಡಿದ್ದನು.  ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ ಶಿವಕುಮಾರಗೆ ಸಮನ್ಸ್ ನೀಡಿದ ನ್ಯಾಯಾಲಯ

ಟೈರ್ ಬ್ಲಾಸ್ಟ್ ಆಗಿ ಚಲಿಸುತ್ತಿದ್ದ ಟ್ರಾಕ್ಟರ್ ಪಲ್ಟಿ

ಬೆಂಗಳೂರು: ಚಲಿಸುತ್ತಿದ್ದ ಟ್ರಾಕ್ಟರ್ ಟೈರ್ ಬ್ಲಾಸ್ಟ್ ಆಗಿ ಟ್ರಾಕ್ಟರ್ ಪಲ್ಟಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಬಳಿ ನಡೆದಿದೆ. ಕಲ್ಲಿನ‌ ಲೋಡ್ ತುಂಬಿಕೊಂಡು ಹೆದ್ದಾರಿಯಲ್ಲಿ ಟ್ಯಾಕ್ಟರ್​ ಸಾಗುತ್ತಿತ್ತು. ಈ ವೇಳೆ ಏಕಾಏಕಿ ಟೈರ್ ಬ್ಲಾಸ್ಟ್ ಆಗಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಟ್ರಾಕ್ಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ವತ್ರೆಗೆ ದಾಖಲಿಸಲಾಗಿದೆ.

ದುರಾದೃಷ್ಟಕ್ಕೆ ಪಲ್ಟಿಯಾದ ಟ್ಯಾಕ್ಟರ್​ನ್ನು ತಪ್ಪಿಸಲು ಹೋಗಿ ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್ ಚಾಲಕನ ಚಾಣಕ್ಷ್ಯತನದಿಂದ ಭಾರಿ‌ ಅನಾಹುತ ತಪ್ಪಿದೆ. ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರ ಚಿಕ್ಕಸಣ್ಣೆ‌ಬಳಿ  ನಡೆದಿದೆ. ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಂಪೇಗೌಡ ಏರ್ಪೊಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ಇದನ್ನು ಓದಿ: ಶಿಮ್ಲಾದಿಂದ ಮರಳುತ್ತಿದ್ದಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಬಾಲಕಿ ಚಿತ್ರಿಸಿದ ಅಮ್ಮನ ಪೇಟಿಂಗ್ ಸ್ವೀಕರಿಸಿದ ಪ್ರಧಾನಿ ಮೋದಿ

2 ಬೈಕ್​​ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

ಬೆಂಗಳೂರು: 2 ಬೈಕ್​​ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿಜಯನಗರದ ಪ್ರಶಾಂತನಗರದಲ್ಲಿ ನಡೆದಿದೆ. ಕಾವೇರಿಪುರ ವಾರ್ಡ್ ನಿವಾಸಿ ಮಿಥುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬನ ಯುವಕ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರಗೆ ದಾಖಲಿಸಿದ್ದಾರೆ. ಕಿರಣ್ ಎಂಬ ಯುವಕ ಬೈಕ್ ಮೇಲೆ ಬರುತ್ತಿರುವಾಗ ಮಿಥುನ್ ಅಪ್ರಾಪ್ತ ಹುಡುಗನನ್ನ ಕೂರಿಸಿಕೊಂಡು ಬರ್ತಿದ್ದನು. ಈ ವೇಳೆ ಎದುರಿನಿಂದ ಬರ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಮಿಥನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಾಳು ಅಪ್ರಾಪ್ತ ಬಾಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಮೇ 30) ಮಧ್ಯಾಹ್ನ 12:30ಕ್ಕೆ ಅಪಘಾತ ಸಂಭವಿಸಿದೆ. ಘಟನೆಯ ಭಯಾನಕ‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹೆಣ್ಣಾನೆ ಸಾವು

ಕೊಡಗು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹೆಣ್ಣಾನೆ ಸಾವನ್ನಪ್ಪಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮರಂದೋಡ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅರವಳಿಕೆ ನೀಡಿದ ಬಳಿಕ ಕಾಡಾನೆ ಸಾವನ್ಬಪ್ಪಿದೆ. ಕಳೆದ ಮೂರು ದಿನಗಳಿಂದ‌  ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು.  ಹೃದಯಾಘಾತದಿಂದ ಸಾವನ್ಬಪ್ಪಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ  ಈಗಾಗಲೆ ಒಂದು ಕಾಡಾನೆಯನ್ನು  ಸೆರೆ ಹಿಡದಿದ್ದಾರೆ.  ಒಟ್ಟು ನಾಲ್ಕು ಕಾಡಾನೆ ಸೆರೆಗೆ ಸರ್ಕಾರ ಅನುಮತಿ ನೀಡಿತ್ತು. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳ ಭೇಟಿ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.