Wall Collapse ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿತ: ಮಹಿಳೆ ಸ್ಥಳದಲ್ಲೇ ಸಾವು

|

Updated on: Feb 13, 2021 | 6:50 PM

Wall Collapse: ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತೌಡನಹಳ್ಳಿಯಲ್ಲಿ ನಡೆದಿದೆ. ಗೋಡೆ ಕುಸಿದು 55 ವರ್ಷದ ಲಕ್ಷ್ಮಮ್ಮ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Wall Collapse ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿತ: ಮಹಿಳೆ ಸ್ಥಳದಲ್ಲೇ ಸಾವು
ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿತ
Follow us on

ಚಿಕ್ಕಬಳ್ಳಾಪುರ: ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತೌಡನಹಳ್ಳಿಯಲ್ಲಿ ನಡೆದಿದೆ. ಗೋಡೆ ಕುಸಿದು 55 ವರ್ಷದ ಲಕ್ಷ್ಮಮ್ಮ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ನೀರಿನ ಸಂಪ್ ನಿರ್ಮಾಣ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸಿಮೆಂಟ್ ಇಟ್ಟಿಗೆಯಿಂದ ಸಂಪಿನ ಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಸಂಪಿನ ಗೋಡೆಯ ಗ್ಯಾಪ್​ಗೆ ಮಣ್ಣು ತುಂಬಿದಾಗ ಗೋಡೆ ಕುಸಿತ ಸಂಭವಿಸಿದೆ. ಈ ವೇಳೆ, ಸಂಪಿನೊಳಗೆ ಕೆಲಸ ಮಾಡ್ತಿದ್ದ ನಾಲ್ವರ ಮೇಲೆ ಗೋಡೆ ಬಿದ್ದಿದೆ. 

ಇನ್ನು ಘಟನೆಯಲ್ಲಿ, ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ 6 ಕಾರುಗಳ ನಡುವೆ ಡಿಕ್ಕಿ
ಇತ್ತ, ಕೋಲಾರದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ 6 ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವರದಿಯಾಗಿದೆ. ಜಿಲ್ಲೆಯ ಆರಾಭಿಕೊತ್ತನೂರು ಗೇಟ್ ಬಳಿ ಅವಘಡ ನಡೆದಿದೆ.

ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸೋಮವಾರವೇ ಪರೀಕ್ಷೆ; Fees ಕಟ್ಟದಿದ್ರೆ ಹಾಲ್ ​ಟಿಕೆಟ್​ ಕೊಡಲ್ವಂತೆ – ಅಮಿರ್ತಾ ಇನ್​ಸ್ಟಿಟ್ಯೂಟ್ ವಿರುದ್ಧ ಕಿರುಕುಳದ ಆರೋಪ

Published On - 6:47 pm, Sat, 13 February 21