ಮುಖ್ಯಮಂತ್ರಿ ಕಾರಿನ ಎದುರು ಕಪ್ಪು ಬಾವುಟ ಪ್ರದರ್ಶಿಸಿದ ಮಹಿಳೆಯರು: ಪೊಲೀಸ್ ಭದ್ರತೆ ನಡುವೆಯೂ ರಸ್ತೆಗೆ ಓಡಿದರು
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಿಎಂ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದರು. ಮಳವಳ್ಳಿ ಬಳಿ ಸಿಎಂ ಕಾರಿನ ಎದುರು ಜನವಾದಿ ಸಂಘಟನೆಯ ಮಹಿಳೆಯರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.
ಮಂಡ್ಯ: ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಳವಳ್ಳಿ ಬಳಿ ಮಹಿಳಾ ಸಂಘಟನೆಯೊಂದರ ಸದಸ್ಯೆಯರು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಿಎಂ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದರು. ಮಳವಳ್ಳಿ ಬಳಿ ಸಿಎಂ ಕಾರಿನ ಎದುರು ಜನವಾದಿ ಸಂಘಟನೆಯ ಮಹಿಳೆಯರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.
ಲವ್ ಜಿಹಾದ್ ಕಾಯ್ದೆ, ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ, ಕಪ್ಪು ಬಾವುಟ ಹಿಡಿದು ಕಾರಿಗೆ ಅಡ್ಡ ಬರಲು ಯತ್ನಿಸಿದ್ದಾರೆ. ಘೋಷಣೆ ಕೂಗುತ್ತ ಬಂದ ಮಹಿಳೆಯರನ್ನು ಪೊಲೀಸರು ತಡೆದಿದ್ದಾರೆ.