ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಕಮಿಷನರ್ಗೆ ದೂರು ನೀಡಿದ ಮಹಿಳೆಯರು
ಕಮ್ಮನಹಳ್ಳಿಯ ನಿವಾಸಿಗಳಾಗಿರುವ ವಾಣಿ, ವಲರಾಮತಿ ಎಂಬ ಮಹಿಳೆಯರು ಈ ಬಗ್ಗೆ ಕಮಿಷನರ್ಗೆ ದೂರು ಸಲ್ಲಿಸಿದ್ದಾರೆ. ಏಪ್ರಿಲ್ 26ರಂದು ನಿವೇಶನದ ವಿಚಾರಕ್ಕೆ ದುಷ್ಕರ್ಮಿಗಳು ಗಲಾಟೆ ಮಾಡಿದ್ದರು. 40ಕ್ಕೂ ಹೆಚ್ಚು ಜನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು.
ಬೆಂಗಳೂರು: ಹೆಣ್ಣೂರು ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮಹಿಳೆಯರು ದೂರು ಸಲ್ಲಿಸಿದ್ದಾರೆ. ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾಗಿ ಹೆಣ್ಣೂರು ಠಾಣೆಗೆ ಮಹಿಳೆಯರು ದೂರು ನೀಡಿದ್ದರು. ಆದ್ರೆ ಇನ್ಸ್ಪೆಕ್ಟರ್ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕ್ರಮಕ್ಕೆ ಮಹಿಳೆಯರು ಮನವಿ ಮಾಡಿದ್ದಾರೆ.
ಕಮ್ಮನಹಳ್ಳಿಯ ನಿವಾಸಿಗಳಾಗಿರುವ ವಾಣಿ, ವಲರಾಮತಿ ಎಂಬ ಮಹಿಳೆಯರು ಈ ಬಗ್ಗೆ ಕಮಿಷನರ್ಗೆ ದೂರು ಸಲ್ಲಿಸಿದ್ದಾರೆ. ಏಪ್ರಿಲ್ 26ರಂದು ನಿವೇಶನದ ವಿಚಾರಕ್ಕೆ ದುಷ್ಕರ್ಮಿಗಳು ಗಲಾಟೆ ಮಾಡಿದ್ದರು. 40ಕ್ಕೂ ಹೆಚ್ಚು ಜನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು.
ಸ್ಥಳೀಯ ಬಿಜೆಪಿ ನಾಯಕ ಕೃಷ್ಣ ಆನಂದ್, ಸರಿತಾ ಬಾಯಿ, ಪುಷ್ಪಾ, ಮಹೇಂದ್ರ ಸೇರಿದಂತೆ 40 ಜನ ಹಲ್ಲೆ ಮಾಡಿದ್ದರು. ಜೊತೆಗೆ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಹೆಣ್ಣೂರು ಪೊಲೀಸ್ ಠಾಣೆಗೆ ಮಹಿಳೆಯರು ದೂರು ನೀಡಿದ್ದರು. ಆದರೆ, ಇದುವರೆಗೂ ಕ್ರಮಕೈಗೊಂಡಿಲ್ಲ. ಇನ್ಸ್ಪೆಕ್ಟರ್ ವಸಂತ್ ಕುಮಾರ್ FIR ಸಹ ದಾಖಲಿಸಿಲ್ಲ. ಆರೋಪಿಗಳೊಂದಿಗೆ ಪಿಐ ಶಾಮೀಲಾಗಿದ್ದಾರೆಂದು ಮಹಿಳೆಯರು ಆರೋಪಿಸಿದ್ದಾರೆ.
ಇನ್ನು ಇನ್ಸ್ಪೆಕ್ಟರ್ ಮತ್ತು ಬಿಜೆಪಿ ನಾಯಕನ ವಿರುದ್ಧ ದೂರು ನೀಡಿದಕ್ಕಾಗಿ ಅವರು ಸಮಸ್ಯೆ ತರಬಹುದು ಹೀಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಕಮಲ್ ಪಂತ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Virbhadra Singh: ಹಿಮಾಚಲ ಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್ ನಿಧನ
Published On - 8:03 am, Thu, 8 July 21