ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್.. ಅಂತ್ಯಸಂಸ್ಕಾರಕ್ಕೆ ಗೇಟ್​ ಮುಂದೆ ಕಾದು ಕುಳಿತ ಕುಟುಂಬಸ್ಥರು

|

Updated on: Apr 21, 2021 | 10:18 AM

ಸಿಬ್ಬಂದಿ ಚಿತಾಗಾರದ ಮುಖ್ಯ ಗೇಟ್ ಕ್ಲೋಸ್ ಮಾಡಿದ್ದು ಸೋಂಕಿನಿಂದ ಮೃತಪಟ್ಟವರ ದೇಹವನ್ನು ಸುಡಲು ಕಾಯುವಂತಾಗಿದೆ. ನಾವು ಇಡೀ ರಾತ್ರಿ ಚಿತಾಗಾರದಲ್ಲಿ ಕೆಲಸ ಮಾಡಿದ್ದೇವೆ.

ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್.. ಅಂತ್ಯಸಂಸ್ಕಾರಕ್ಕೆ ಗೇಟ್​ ಮುಂದೆ ಕಾದು ಕುಳಿತ ಕುಟುಂಬಸ್ಥರು
ಸಂಗ್ರಹ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾದಿಂದ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ 13,782 ಜನರಿಗೆ ಸೋಂಕು ತಗಲಿದ್ದು, ಬೆಂಗಳೂರಿನಲ್ಲಿ ನಿನ್ನೆ ಕೊರೊನಾ ಸೋಂಕಿಗೆ 92 ಜನರ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಚಿತಾಗಾರ ಸಿಬ್ಬಂದಿಯ ಕೆಲಸ ಹೆಚ್ಚಾಗಿದ. ಚಿತಾಗಾರದ ಮುಂದೆ ಜನ ಕ್ಯೂನಲ್ಲಿ ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್ ಮಾಡಿ ಬೆಳ್ಳಂ ಬೆಳಗ್ಗೆ ಚಿತಾಗಾರ ಸಿಬ್ಬಂದಿ ಶಾಕ್ ಕೊಟ್ಟಿದ್ದಾರೆ.

ಸಿಬ್ಬಂದಿ ಚಿತಾಗಾರದ ಮುಖ್ಯ ಗೇಟ್ ಕ್ಲೋಸ್ ಮಾಡಿದ್ದು ಸೋಂಕಿನಿಂದ ಮೃತಪಟ್ಟವರ ದೇಹವನ್ನು ಸುಡಲು ಕಾಯುವಂತಾಗಿದೆ. ನಾವು ಇಡೀ ರಾತ್ರಿ ಚಿತಾಗಾರದಲ್ಲಿ ಕೆಲಸ ಮಾಡಿದ್ದೇವೆ. ನಾವೂ ಮನುಷ್ಯರೇ, ನಮಗೂ ರೆಸ್ಟ್ ಬೇಕು. ಯಂತ್ರ ಕೆಟ್ಟೋಗಿದೆ ಬೇರೆ ಕಡೆ ಹೋಗಿ ಎಂದು ಮೃತರ ಸಂಬಂಧಿಕರಿಗೆ ಸಬೂಬು ನೀಡಿದ್ದಾರೆ.

ಚಿತಾಗಾರ ಸಿಬ್ಬಂದಿಗಳ ಮಾತಿಗೆ ಮೃತರ ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿದ್ದು ಗೇಟ್ ಮುಂಭಾಗವೇ ಮೃತದೇಹವನ್ನಿಟ್ಟುಕೊಂಡು ಕಾಯುತ್ತಿರುವ ದೃಶ್ಯ ಕಂಡು ಬಂದಿದೆ. ಆರೋಗ್ಯ ಸಚಿವ ಸುಧಾಕರ್ ಆಸ್ಪತ್ರೆಗಳಿಗೆ ಭೇಟಿ ಕೊಡ್ತಾರೆ. ಇಲ್ಲಿಗೆ ಬಂದು ನಮ್ಮ ಕಷ್ಟ ಏನೆಂದು ಗಮನ ಹರಿಸಲಿ ಎಂದು ಸಚಿವರು, ಅಧಿಕಾರಿಗಳ ವಿರುದ್ಧ ಚಿತಾಗಾರ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದಾಗಿ ಎದುರಿಸಬಾರದಿಂದಂತಹ ಪರಿಸ್ಥಿತಿ ಈಗ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಆದಷ್ಟು ಬೇಗ ಸೋಂಕಿತರ ಅಂತ್ಯಸಂಸ್ಕಾರಕ್ಕೂ ಒಂದು ನಿಯಮವನ್ನು ಸರ್ಕಾರ ಕೈಗೊಳ್ಳಬೇಕಿದೆ.

ಇದನ್ನೂ ಓದಿ: ಬಿಡುವಿಲ್ಲದೆ ಶವ ಸಂಸ್ಕಾರ ನಡೆಸಿ ಸುಸ್ತಾದ ಚಿತಾಗಾರದ ಸಿಬ್ಬಂದಿ; ಮನೆಗೆ ಹೋಗಲೂ ಸಮಯವಿಲ್ಲ