World Aids Day: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್​ಐವಿ ಹರಡುವಿಕೆಯ ಪ್ರಮಾಣ ಹೆಚ್ಚಳ

ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್​ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದರು.

World Aids Day: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್​ಐವಿ ಹರಡುವಿಕೆಯ ಪ್ರಮಾಣ ಹೆಚ್ಚಳ
ಏಡ್ಸ್​​ (ಸಾಂದರ್ಭಿಕ ಚಿತ್ರ)
Follow us
ವಿವೇಕ ಬಿರಾದಾರ
|

Updated on:Dec 01, 2023 | 8:43 AM

ಬೆಂಗಳೂರು ಡಿ.01: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್​ (HIV) ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ದ ಅಂಕಿಅಂಶಗಳ ಪ್ರಕಾರ ಏಡ್ಸ್​ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು (Karnataka) ಒಂಬತ್ತನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ ನಂತರ ಮಿಜೋರಾಂನಲ್ಲಿ ಶೇ 1.13, ಮೇಘಾಲಯದಲ್ಲಿ ಶೇ 0.58, ದೆಹಲಿಯಲ್ಲಿ ಶೇ 0.41, ತ್ರಿಪುರ ಮತ್ತು ಚಂಡೀಗಢ ತಲಾ ಶೇ 0.38, ಆಂಧ್ರ ಪ್ರದೇಶದಲ್ಲಿ ಶೇ 0.37, ಮಣಿಪುರದಲ್ಲಿ ಶೇ 0.33, ಮತ್ತು ಕರ್ನಾಟಕದಲ್ಲಿ ಶೇ 0.29 ರಷ್ಟು ಜನರಿಗೆ ಹೆಚ್​ಐವಿ ಸೋಂಕು ತಗುಲಿದೆ. ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಸಲಾಗುತ್ತದೆ.

ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್​ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದರು. ಹೆಚ್ಚಾಗಿ ಈಶಾನ್ಯ ರಾಜ್ಯಗಳ ವಯಸ್ಕರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ. ಮಿಜೋರಾಂನಲ್ಲಿ ಶೇ2.70, ನಾಗಾಲ್ಯಾಂಡ್‌ನಲ್ಲಿ ಶೇ1.36 ಮತ್ತು ಮಣಿಪುರದಲ್ಲಿ ಶೇ1.05 ರಷ್ಟು ಜನರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ.

ನಂತರದ ಸ್ಥಾನದಲ್ಲಿ ದಕ್ಷಿಣ ಭಾರತ ರಾಜ್ಯಗಳಿವೆ. 2021ರ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಶೇ 0.67ರಷ್ಟು, ತೆಲಂಗಾಣದಲ್ಲಿ ಶೇ 0.47 ರಷ್ಟು ಮತ್ತು ಕರ್ನಾಟಕದಲ್ಲಿ ಶೇ0.46 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್​ಐವಿ ಟೆಸ್ಟ್​ ಪಾಸಿಟಿವಿಟಿ ರೇಟ್​ (TPR) ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್​ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

ಇದನ್ನೂ ಓದಿ: World AIDS Day 2023: ವಿಶ್ವ ಏಡ್ಸ್ ದಿನದ ಇತಿಹಾಸ, ಮಹತ್ವ

ಪ್ರಸವಪೂರ್ವ ಆರೈಕೆ (ANC) ಅಡಿಯಲ್ಲಿ 2017-2018 ರಲ್ಲಿ ಶೇ0.06 ರಷ್ಟು, 2023-2024 ರಲ್ಲಿ (ಅಕ್ಟೋಬರ್ ಅಂತ್ಯದವರೆಗೆ) ಶೇ 0.03 ಮಹಿಳೆಯರಲ್ಲಿ ಹೆಚ್​ಐವಿ ರೋಗ ಪತ್ತೆಯಾಗಿದೆ. ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್‌ಗಳಲ್ಲಿ (ICTC) ಪ್ರಕಾರ 2017-2018 ರಲ್ಲಿ ಶೇ0.85 ರಷ್ಟು ಜನರು ಮತ್ತು 2023-2024 (ಅಕ್ಟೋಬರ್ ಅಂತ್ಯದವರೆಗೆ) ಶೇ 0.36 ರಷ್ಟು ಜನರಲ್ಲಿ ಏಡ್ಸ್​ ರೋಗ ಪತ್ತೆಯಾಗಿದೆ.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಡೇಟಾ ಪ್ರಕಾರ (KSAPS) 2022-2023 ರಲ್ಲಿ, 33,23,365 (ಶೇ0.39) ರಷ್ಟು ಜನರು ರೋಗದಿಂದ ಬಳಲಿದ್ದರು. ಎಎನ್​ಸಿ ಪರೀಕ್ಷಾ ವರದಿ ಪ್ರಕಾರ 2023-24 (ಅಕ್ಟೋಬರ್ ಅಂತ್ಯದವರೆಗೆ) 14,26,667 (ಶೇ0.04) ರಷ್ಟು ಮಹಿಳೆಯರಲ್ಲಿ ಏಡ್ಸ್​ ರೋಗ ಪತ್ತೆಯಾಗಿದೆ.

ಕೆಎಸ್​ಎಪಿಎಸ್​ ಜಂಟಿ ನಿರ್ದೇಶಕ ಅನ್ಸಾರ್ ಅಹ್ಮದ್ ಪ್ರಸ್ತುತ 81 ಆಂಟಿ-ರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆ ಕೇಂದ್ರಗಳಲ್ಲಿ, 71 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 10 ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಗಳ ಅಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ ಮಂಜೂರಾದ ಕೇಂದ್ರಗಳಾಗಿವೆ. ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ. ಇದಲ್ಲದೆ, ನಾವು 303 ಕ್ರಿಯಾತ್ಮಕ ಲಿಂಕ್ ಎಆರ್​ಟಿ ಕೇಂದ್ರಗಳನ್ನು ಹೊಂದಿದ್ದೇವೆ ಎಂದು ಹೇಳಿದರು.

ಎಆರ್​ಟಿ ಕೇಂದ್ರಗಳಲ್ಲಿ ಅಕ್ಟೋಬರ್ 2023 ರವರೆಗೆ 3,86,056 ಹೆಚ್​ಐವಿ ಪ್ರಕರಣಗಳು ದಾಖಲಾಗಿವೆ. 1,85,536 ಪ್ರಕರಣಗಳು ಜೀವಂತವಾಗಿವೆ ಮತ್ತು ಎಆರ್​ಟಿ ಚಿಕಿತ್ಸೆ ನೀಡಲಾಗುತ್ತಿವೆ. ಕರ್ನಾಟಕದಲ್ಲಿ ಇದುವರೆಗೆ ರೋಗದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದಾಗ್ಯೂ, ನಮ್ಮ ಹರಡುವಿಕೆಯ ಪ್ರಮಾಣವು ಇಳಿಮುಖವಾಗುತ್ತಿದ್ದು, 2019 ರಲ್ಲಿ 16ನೇ ಸ್ಥಾನದಿಂದ 2021 ರಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. 2030 ರ ವೇಳೆಗೆ ಶೂನ್ಯ ಸಾಧಿಸುವುದು ರಾಜ್ಯದ ಗುರಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:22 am, Fri, 1 December 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ