AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Tech Summit 2023: ಬೆಂಗಳೂರಿನಲ್ಲಿ ಊಬರ್ ಗ್ರೀನ್ ಕಾರ್ಯಾರಂಭ

ಕ್ಯಾಬ್ ಅಗ್ರಿಗೇಟರ್ ಉಬರ್ ನಗರದಲ್ಲಿ ಎಲೆಕ್ಟ್ರಿಕ್ ವಾಹನ ಸೇವೆ "ಉಬರ್ ಗ್ರೀನ್" (ವಾಹನ) ಅನ್ನು ಪ್ರಾರಂಭಿಸಿದೆ. ಗುರುವಾರ (ನ.30) ರಂದು ಅರಮನೆ ಮೈದಾನದಲ್ಲಿ ಆರಂಭವಾದ ಬೆಂಗಳೂರು ಟೆಕ್ ಸಮ್ಮಿಟ್​ 2023ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಊಬರ್​ ಗ್ರೀನ್​​ಗೆ ಚಾಲನೆ ನೀಡಿದರು.

Bengaluru Tech Summit 2023: ಬೆಂಗಳೂರಿನಲ್ಲಿ ಊಬರ್ ಗ್ರೀನ್ ಕಾರ್ಯಾರಂಭ
ಉಬರ್ ಗ್ರೀನ್​
ವಿವೇಕ ಬಿರಾದಾರ
|

Updated on:Dec 01, 2023 | 9:19 AM

Share

ಬೆಂಗಳೂರು ಡಿ.01: ಕ್ಯಾಬ್ ಅಗ್ರಿಗೇಟರ್ ಊಬರ್ (Uber) ನಗರದಲ್ಲಿ ಎಲೆಕ್ಟ್ರಿಕ್ ವಾಹನ ಸೇವೆ “ಉಬರ್ ಗ್ರೀನ್” (ವಾಹನ) ಅನ್ನು ಪ್ರಾರಂಭಿಸಿದೆ. ಗುರುವಾರ (ನ.30) ರಂದು ಅರಮನೆ ಮೈದಾನದಲ್ಲಿ ಆರಂಭವಾದ ಬೆಂಗಳೂರು ಟೆಕ್ ಸಮ್ಮಿಟ್​ 2023ರಲ್ಲಿ (Bengaluru Tech Summit) ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಊಬರ್​ ಗ್ರೀನ್​​ಗೆ ಚಾಲನೆ ನೀಡಿದರು. ಮಧ್ಯ ಬೆಂಗಳೂರು (Bengaluru) ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಊಬರ್​ ಗ್ರೀನ್ ಈಗ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು ನಗರದ ಹೆಚ್ಚಿನ ಭಾಗಗಳಿಗೆ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಊಬರ್​ ಗ್ರೀನ್​ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ. ಈ ಸೇವೆಯು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕಂಪನಿ ಹೇಳಿದೆ.

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಉಬರ್‌ನ ಈ ಕ್ರಮ ಶ್ಲಾಘನೀಯ. ನಾವು ದೀರ್ಘಾವಧಿಯಲ್ಲಿ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಮತ್ತು ಸುಸ್ಥಿರತೆಯ ಸಂಸ್ಕೃತಿಯನ್ನು ಬೆಳೆಸುವ ಸ್ಪಷ್ಟವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಿಯಾಂಕ್​ ಖರ್ಗೆ ಹೇಳಿದರು.

ಊಬರ್ ಇಂಡಿಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಮಾತನಾಡಿ ಊಬರ್ ಸುಸ್ಥಿರತೆಗೆ “ಅಚಲವಾದ ಬದ್ಧತೆಯನ್ನು” ಹೊಂದಿದೆ ಮತ್ತು ಉಬರ್ ಗ್ರೀನ್ ಅದರತ್ತ ಒಂದು ಹೆಜ್ಜೆಯಾಗಿದೆ. ಬೆಂಗಳೂರಿನಲ್ಲಿ ಊಬರ್ ಗ್ರೀನ್‌ ಆರಂಭವಾಗಿರುವುದು ದೇಶದಲ್ಲಿ ನಮ್ಮದು ಎರಡನೇ ಹೆಜ್ಜೆಯಾಗಿದೆ. ಇದು ಈಗಾಗಲೇ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಅನೇಕ ಜನರು ಊಬರ್​ ಗ್ರೀನ್​​ ಬಳಸುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:10 am, Fri, 1 December 23