ವಿಶ್ವ ಮಾನವ ದಿನ: ಕುವೆಂಪು ಜನ್ಮದಿನ ಸ್ಮರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

|

Updated on: Dec 29, 2024 | 7:46 PM

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತಿ ಪ್ರಯುಕ್ತ ಶುಭಾಶಯ ತಿಳಿಸಿದ್ದಾರೆ. ಕುವೆಂಪು ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವವನ್ನು ಕುವೆಂಪು ಅವರ ಕವಿತೆಗಳು ಎತ್ತಿ ತೋರಿಸುತ್ತವೆ ಎಂದು ಅವರು ಉಲ್ಲೇಖಿಸಿದ್ದಾರೆ.

ವಿಶ್ವ ಮಾನವ ದಿನ: ಕುವೆಂಪು ಜನ್ಮದಿನ ಸ್ಮರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
ವಿಶ್ವ ಮಾನವ ದಿನ: ಕುವೆಂಪು ಜನ್ಮದಿನ ಸ್ಮರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
Follow us on

ಬೆಂಗಳೂರು, ಡಿಸೆಂಬರ್​ 29: ಮನುಜಪಥ, ವಿಶ್ವಪಥವೆಂದು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತದೆ. ಇಂದು ಕರ್ನಾಟಕದಲ್ಲಿ ಎಲ್ಲೆಡೆ ಕುವೆಂಪು ಅವರ 120ನೇ ಜಯಂತಿ ಆಚರಣೆ ಮಾಡಲಾಗಿದೆ. ಈ ಪ್ರಯುಕ್ತ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (pawan kalyan) ಕೂಡ ರಾಷ್ಟ್ರಕವಿ ಕುವೆಂಪು ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪದ್ಮವಿಭೂಷಣ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ಜನ್ಮದಿನದಂದು ಕರ್ನಾಟಕವು ವಿಶ್ವ ಮಾನವ ದಿನವನ್ನು ಅವರ ಗೌರವಾರ್ಥವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ನಮನ ಸಲ್ಲಿಸಿದ್ದಾರೆ.

ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್​ ಟ್ವೀಟ್​

ಕನ್ನಡ ಸಾಹಿತ್ಯಕ್ಕೆ ಅವರ ಅಗಾಧ ಸೇವೆ ಕನ್ನಡ ನಾಡಿನಲ್ಲಿ ಅಜರಾಮರ. ನನಗೆ ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ಹೇಳಿಕೊಟ್ಟ ಮತ್ತು ಪ್ರಕೃತಿಗೆ ಸಂಬಂಧಿಸಿದಂತೆ ಅವರ ಶಕ್ತಿಯುತ ಕವಿತೆವನ್ನು ನಾನು ನೆನಪಿಸಿಕೊಳ್ಳುತ್ತೇನೆ.

ಅರಣ್ಯ, ನಿನ್ನ ಸಡಿಲ ಚಂದನವಾಯು

ನನ್ನ ಚಿತ್ತವೇತ್ತಿ ಬಿಸಿದುಕೊಂಡಿತು!

ನಿನ್ನ ತೊರೆಗಳ ಪಾದಕಲಸ ಜಲವು

ನನ್ನ ದೇಹವನ್ನೂ ಧೋಯಿತು! ​

ಇದನ್ನೂ ಓದಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಜನ್ಮದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದು ಏಕೆ?

ಈ ಸಾಲುಗಳ ಮೂಲಕ ಕುವೆಂಪು ಅವರು ಪ್ರಕೃತಿಯ ಗುಣಪಡಿಸುವ ಶಕ್ತಿಯನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ. ಇನ್ನು ಅವರ ಕೃತಿಯನ್ನು ಓದುವ ಎಲ್ಲರ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸುತ್ತಾರೆ. ಅವರ ಪರಂಪರೆಯು ಪರಿಸರವನ್ನು ರಕ್ಷಿಸುವ ಮತ್ತು ಪಾಲಿಸಲು ನಮಗೆ ಸದಾ ಸ್ಫೂರ್ತಿ ನೀಡುತ್ತದೆ ಎಂದು ಪವನ್ ಕಲ್ಯಾಣ್​ ಬರೆದುಕೊಂಡಿದ್ದಾರೆ.

ಇನ್ನು ಪವನ್ ಕಲ್ಯಾಣ್​ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಕನ್ನಡ ಭಾಷೆ ಮತ್ತು ಕುವೆಂಪು ಅವರ ಕವಿತೆಯನ್ನು ಹೇಳಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:43 pm, Sun, 29 December 24