ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಬ್ಬು ಚಿತ್ರ; ಜನರ ಜಾಗೃತಿಗಾಗಿ ವಿಶಿಷ್ಟ ಪ್ರಯೋಗ

ಡಿಎಚ್‌ಒ ಡಾ.ಇಂದುಮತಿ ಕಾಮಶೆಟ್ಟಿ ಅವರು ಆರೋಗ್ಯ ಕುರಿತು ಜಾಗೃತಿ ಮೂಡಿಸುವ ವಿಷಯಗಳು ಶಾಶ್ವತವಾಗಿ ಇರುವಂತೆ ಇರಬೇಕು ಎಂದು ಆಲೋಚಿಸಿ ಉಬ್ಬು ಚಿತ್ರ, ಬರಹದ ಕಲೆಯನ್ನು ಆಯ್ಕೆ ಮಾಡಿಕೊಂಡು ಇದನ್ನು ಅನುಷ್ಠಾನಕ್ಕೆ ತಂದಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಬ್ಬು ಚಿತ್ರ; ಜನರ ಜಾಗೃತಿಗಾಗಿ ವಿಶಿಷ್ಟ ಪ್ರಯೋಗ
ಉಬ್ಬು ಚಿತ್ರ

ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಉಬ್ಬು ಚಿತ್ರ ಮತ್ತು ಬರಹದಿಂದ ಆರೋಗ್ಯ ಜಾಗೃತಿಯ ವಿಶಿಷ್ಟ ಪ್ರಯೋಗ ಮಾಡಲಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಈ ಉಬ್ಬು ಚಿತ್ರಗಳನ್ನು ನೋಡಿ ವಿವಿಧ ಆರೋಗ್ಯ ಇಲಾಖೆಗಳ ಮಾಹಿತಿ ಪಡೆಯಲು ಅನುಕೂಲವಾಗುವಂತೆ ವಿಶಿಷ್ಟ ಪ್ರಯೋಗ ಮಾಡಲಾಗಿದೆ.

ಡಿಎಚ್‌ಒ ಡಾ.ಇಂದುಮತಿ ಕಾಮಶೆಟ್ಟಿ ಅವರು ಆರೋಗ್ಯ ಕುರಿತು ಜಾಗೃತಿ ಮೂಡಿಸುವ ವಿಷಯಗಳು ಶಾಶ್ವತವಾಗಿ ಇರುವಂತೆ ಇರಬೇಕು ಎಂದು ಆಲೋಚಿಸಿ ಉಬ್ಬು ಚಿತ್ರ, ಬರಹದ ಕಲೆಯನ್ನು ಆಯ್ಕೆ ಮಾಡಿಕೊಂಡು ಇದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಈಗಾಗಲೇ ಭಿತ್ತಿಪತ್ರ, ಗೋಡೆ ಬರಹ, ಪೋಸ್ಟರ್‌, ಬ್ಯಾನರ್‌ ಮೂಲಕ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲಾಗಿದೆ. ಆದರೆ, ಯಾವುದೋ ಕಾರಣಕ್ಕಾಗಿ ಅವು ಅಳಸಿ ಹೋಗುತ್ತಿದ್ದವು. ಇದನ್ನು ಮನಗಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಶ್ವತವಾಗಿ ಉಳಿಯುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಎರಡು ತಿಂಗಳು ಕಾಮಗಾರಿ
ಕಲಬುರಗಿಯ ಕಲಾವಿದ ಚಂದನ್‌ ಸಿಂಗ್‌ ಮೂಲಕ ಈ ಉಬ್ಬುಚಿತ್ರ, ಬರಹಗಳು ಜೀವಂತಿಕೆ ಪಡೆದಿವೆ. ಕಳೆದ ಎರಡು ತಿಂಗಳಿಂದ ಉಬ್ಬು ಚಿತ್ರ, ಬರಹಗಳ ರಚನೆ ಸಾಗಿ ಬಂದಿದೆ. ಈ ಎಲ್ಲಾ ಚಿತ್ರಗಳು ಸಿಮೆಂಟ್‌ ಮೂಲಕ ಮೂಡಿ ಬಂದಿವೆ. ಒಂದು ವಿಭಾಗದ ಕೆಲಸ ಮಾಡಲು 10 ದಿನ ತೆಗೆದುಕೊಳ್ಳಲಾಗಿದೆ.

picture

ಆರೋಗ್ಯ ಇಲಾಖೆಗಳ ಮಾಹಿತಿ ಪಡೆಯಲು ಅನುಕೂಲ

12 ಇಲಾಖೆಯಗಳ ಚಿತ್ರಗಳು
ಆರೋಗ್ಯ ಇಲಾಖೆಗೆ ಸಂಬಂಧಿಸಿದ 12 ಇಲಾಖೆಗಳ ಚಿತ್ರ, ಬರಹಗಳನ್ನು ಸಿಮೆಂಟ್‌ ಮೂಲಕ ರಚನೆ ಮಾಡಲಾಗಿದೆ. ಇನ್ಫರ್‌ಮೇಶನ್‌ ಎಜುಕೇಶನ್‌ ಅಂಡ್ ಕಮ್ಯುನಿಕೇಶನ್ (ಐಇಸಿ) ಮೂಲಕ ಈ ಪ್ರಯೋಗವನ್ನು ಕೈಗೆತ್ತಿಕೊಳ್ಳಲಾಗಿದೆ. ಆ ವಿಭಾಗಗಳ ಮುಖ್ಯಸ್ಥರು ತಮ್ಮ ಇಲಾಖೆಗಳಲ್ಲಿರುವ ಮಾಹಿತಿಯನ್ನು ಪ್ರಚುರ ಪಡಿಸಿದ್ದಾರೆ.

ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಆಗಮಿಸುವ ಸಾರ್ವಜನಿಕರು, ವೈದ್ಯರು, ದಾದಿಯರು ಈ ಬರಹಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ:
2 ವರ್ಷದಿಂದ ವೇತನ ಸಿಕ್ಕಿಲ್ಲ ಎಂದು 104 ಆರೋಗ್ಯವಾಣಿ ಸಿಬ್ಬಂದಿಗಳಿಂದ ಪ್ರತಿಭಟನೆ, ಆರೋಗ್ಯ ಇಲಾಖೆ ಆಯುಕ್ತ ಹೇಳಿದ್ದೇನು?

ಮೈಸೂರು ಘಟನೆ ಹಿನ್ನೆಲೆ ಮಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತೆಗಾಗಿ ಜಾಗೃತಿ ಕಾರ್ಯಕ್ರಮ, ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ

Click on your DTH Provider to Add TV9 Kannada