ಯಾದಗಿರಿ: ಜಿಲ್ಲೆಯ ವಡಗೇರಾ(Wadgera) ತಾಲೂಕಿನ ಬೆಂಡೆಬೆಂಬಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದ ಕಾರಣ, ರಾತ್ರಿ ವೇಳೆ ಆಸ್ಪತ್ರೆಗೆ ಬೀಗ ಹಾಕಲಾಗುತ್ತಿದೆ. ಅದರಂತೆ ನಿನ್ನೆ ರಾತ್ರಿ ವೇಳೆ ರಾಯಚೂರು(Raichur)ಜಿಲ್ಲೆಯ ದೇವದುರ್ಗ ಮೂಲದ ಸವಾರ ರವಿಚಂದ್ರ ಎಂಬಾತ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ಯುವಕನನ್ನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆಸ್ಪತ್ರೆಗೆ ಬೀಗ ಹಾಕಿದ ಕಾರಣ ಅಪಘಾತಕ್ಕೊಳಗಾದ ಯುವಕ ಆಸ್ಪತ್ರೆ ಬಳಿಯೇ ಒಂದು ಗಂಟೆಯ ಕಾಲ ನರಳಾಡಲು ಶುರು ಮಾಡಿದ್ದಾನೆ. ಕೊನೆಗೆ ಆ್ಯಂಬುಲೆನ್ಸ್ ಮೂಲಕ ಬೇರೆ ಆಸ್ಪತ್ರೆಗೆ ಗಾಯಾಳುವನ್ನ ರವಾನೆ ಮಾಡಲಾಗಿದೆ.
ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿ ಕೊರತೆ ರಾಜ್ಯದಲ್ಲಿ ಇದೆ ಮೊದಲಲ್ಲ. ಮೇ.31 ರಂದು ಆಪರೇಷನ್ ಮಾಡಲು ಬಂದ ವೈದ್ಯ, ಮದ್ಯಸೇವಿಸಿದ ಆರೋಪ ಕಳಸ ತಾಲೂಕು ಆಸ್ಪತ್ರೆಯಲ್ಲಿ ಕೇಳಿಬಂದಿತ್ತು. ಶಸ್ತ್ರಚಿಕಿತ್ಸೆಯ ವೇಳೆ ಫುಲ್ ಟೈಟಾಗಿ ವೈದ್ಯ ಬಾಲಕೃಷ್ಣ ಎಂಬುವವರು ಕುಸಿದು ಬಿದ್ದಿದ್ದರು. ಈ ವೇಳೆ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಅನಸ್ತೇಷಿಯಾ ಇಂಜೆಕ್ಷನ್ ಪಡೆದಿದ್ದ 9 ಮಹಿಳೆಯರ ಪರದಾಟ ಹೇಳತೀರದು. ಈ ಕುರಿತು ರೋಗಿಗಳ ಸಂಬಂಧಿಕರಿಂದ ಆಸ್ಪತ್ರೆಯಲ್ಲೇ ವೈದ್ಯನಿಂದ ಮಧ್ಯಪಾನ ಮಾಡಿರುವ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ:ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದಲ್ಲಾ ಎರಡಲ್ಲಾ ಸಮಸ್ಯೆ: ಅಧಿಕಾರಿಗಳ ನಿರ್ಲಕ್ಷಕ್ಕೆ ಅಸುನೀಗುತ್ತಿವೆ ಬಡ ಜೀವಗಳು
ಶಸ್ತ್ರ ಚಿಕಿತ್ಸೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳುವ ವೇಳೆ ಆಪರೇಷನ್ ಥಿಯೇಟರ್ನಲ್ಲಿ ವೈದ್ಯ ಬಾಲಕೃಷ್ಣ ಕುಸಿದು ಬಿದ್ದಿದ್ದ. ಅಸ್ವಸ್ಥಗೊಂಡ ವೈದ್ಯನನ್ನ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇತ ಬೆಳಗ್ಗೆ 8 ಗಂಟೆಗೆ ಅನಸ್ತೇಷಿಯಾ ನೀಡಿ ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಿರಲಿಲ್ಲ. ಹೋಗಿ ನೋಡಿದಾಗ ಬೆಳಗ್ಗೆಯಿಂದ ಆಪರೇಷನ್ ಥಿಯೇಟರ್ನಲ್ಲೆ ವೈದ್ಯ ನಿದ್ರೆ ಮಾಡಿದ್ದ. ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಅನಸ್ತೇಷಿಯಾ ಪಡೆದ ಮಹಿಳೆಯರ ಪರದಾಡುತ್ತಿದ್ದರು. ಬಳಿಕ ವೈದ್ಯ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮಕ್ಕೆ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದರು. ಬಳಿಕ ಆತನನ್ನ ವಜಾಗೊಳಿಸಲಾಯಿತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ