ಯಾದಗಿರಿ: ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನೂ ವಿತರಣೆ ಆಗದ ಶಾಲಾ ಸಮವಸ್ತ್ರ; ಕೆಲ ಮಕ್ಕಳಿಗೆ ಪಠ್ಯ ಪುಸ್ತಕವೂ ಇಲ್ಲ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 10, 2024 | 10:51 PM

ಸರ್ಕಾರಿ ಸೇರಿದಂತೆ ಖಾಸಗಿ ಶಾಲೆಗಳು ಆರಂಭವಾಗಿ ಒಂದುವರೆ ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ, ಈ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ಇನ್ನುವವರೆಗೆ ಸಮವಸ್ತ್ರ ಪೂರೈಸುವ ಕೆಲಸಕ್ಕೆ ಮುಂದಾಗಿಲ್ಲ. ಸಮವಸ್ತ್ರ ನೀಡದ ಕಾರಣಕ್ಕೆ ವಿದ್ಯಾರ್ಥಿಗಳು ಕಲರ್ ಬಟ್ಟೆಗಳನ್ನ ಧರಿಸಿಕೊಂಡು ಬರುವಂತಾಗಿದೆ. ಕೆಲ ಮಕ್ಕಳಂತೂ ಕಳೆದ ವರ್ಷದ ಹರಿದಿದ್ದ ಸಮವಸ್ತ್ರಗಳನ್ನೇ ಧರಿಸಿಕೊಂಡು ಬರುತ್ತಿದ್ದಾರೆ. ಇನ್ನು ಕೆಲ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನೂ ಸಹ ಶಿಕ್ಷಣ ಇಲಾಖೆ ವಿತರಣೆ ಮಾಡದೆ, ಆ ಜಿಲ್ಲೆಗೆ ಶೈಕ್ಷಣಿಕವಾಗಿ ಹಿಂದುಳಿಯುವುದಕ್ಕೆ ಅನುಕೂಲ ಮಾಡಿಕೊಡುತ್ತಿದೆ.

ಯಾದಗಿರಿ: ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನೂ ವಿತರಣೆ ಆಗದ ಶಾಲಾ ಸಮವಸ್ತ್ರ; ಕೆಲ ಮಕ್ಕಳಿಗೆ ಪಠ್ಯ ಪುಸ್ತಕವೂ ಇಲ್ಲ!
ಯಾದಗಿರಿ: ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನೂ ವಿತರಣೆ ಆಗದ ಶಾಲಾ ಸಮವಸ್ತ್ರ
Follow us on

ಯಾದಗಿರಿ, ಜು.10: 2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಒಂದುವರೆ ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ, ಇನ್ನುವರೆಗೂ ಸರ್ಕಾರಿ ಶಾಲೆ(Government School)ಯ ಮಕ್ಕಳಿಗೆ ಸರ್ಕಾರ ಶಾಲಾ ಸಮವಸ್ತ್ರ ವಿತರಣೆ ಮಾಡುವ ಕೆಲಸ ಮಾಡಿಲ್ಲ. ಇದೆ ಕಾರಣಕ್ಕೆ ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳು ಕಲರ್ ಬಟ್ಟೆಗಳನ್ನ ಧರಿಸಿಕೊಂಡು ಶಾಲೆಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಮಕ್ಕಳು ಕಳೆದ ವರ್ಷ ನೀಡಿದ್ದ ಸಮವಸ್ತ್ರಗಳನ್ನೇ ಧರಿಸಿಕೊಂಡು ಬರುತ್ತಿದ್ದಾರೆ.

ಇನ್ನು ಕಳೆದ ವರ್ಷದಲ್ಲಿ ಕೊಟ್ಟ ಸಮವಸ್ತ್ರಗಳು ಬಹುತೇಕ ವಿದ್ಯಾರ್ಥಿಗಳ ಬಳಿ ಇಲ್ಲ. ಬೇಸಿಗೆ ಮುಗಿಯುವ ಹೊತ್ತಿನಲ್ಲೇ  ಹರಿದು ಹೋಗಿವೆ. ಇನ್ನು ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳ ಬಳಿ ಶಾಲಾ ಸಮವಸ್ತ್ರ ಇಲ್ಲ, ಹೀಗಾಗಿ ಕಲರ್​ ಬಟ್ಟೆಗಳನ್ನ ಕಳೆದ ಒಂದುವರೆ ತಿಂಗಳಿನಿಂದ ಧರಿಸಿಕೊಂಡು ಬರುತ್ತಿದ್ದಾರೆ. ಸರ್ಕಾರ ಕೂಡಲೇ ಶಾಲಾ ಸಮವಸ್ತ್ರಗಳನ್ನ ವಿತರಣೆ ಮಾಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಪಕ್ಷಿಗಳ ರಕ್ಷಣೆಗೆ ನಿಂತ ಹಾವೇರಿಯ ಸರ್ಕಾರಿ ಶಾಲೆ ಮಕ್ಕಳು

ಯಾದಗಿರಿ ಜಿಲ್ಲೆಯಲ್ಲಿ ಸುಮಾರು 928 ಪ್ರಾಥಮಿಕ ಶಾಲೆಗಳು ಹಾಗೂ 141 ಪ್ರೌಢ ಶಾಲೆಗಳಿವೆ. ಹೀಗಾಗಿ ಇದರಲ್ಲಿ ಯಾವುದೇ ಶಾಲೆಯ ಮಕ್ಕಳಿಗೆ ಇನ್ನುವರೆಗೂ ಶಾಲಾ ಸಮವಸ್ತ್ರಗಳನ್ನ ವಿತರಣೆ ಮಾಡಿಲ್ಲ. ಕೆಲ ಮಕ್ಕಳು ಹಳೆ ಬಟ್ಟೆಗಳನ್ನ ಧರಿಸಿಕೊಂಡು ಬರುತ್ತಿದ್ದಾರೆ. ಇದೆ ಶಾಲಾ ಸಮವಸ್ತ್ರ ಧರಿಸಿಕೊಂಡು ಬಂದಿರುವ ಮಕ್ಕಳ ಜೊತೆಯಲ್ಲಿ ಕಲರ್ ಬಟ್ಟೆಗಳನ್ನ ಹಾಕಿಕೊಂಡ ಮಕ್ಕಳು ಕುಳಿತುಕೊಂಡು ಪಾಠ ಕೇಳುವಂತಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಕಡ್ಡಾಯವಾಗಿ ಸಮವಸ್ತ್ರ ಜಾರಿಗೆ ತಂದಿರುವ ಉದ್ದೇಶವೇ ಮಕ್ಕಳ ಬಟ್ಟೆ ವಿಚಾರಕ್ಕೆ ಭೇದಭಾವ ಬರಬಾರದು ಎಂದು. ಇದೆ ಕಾರಣಕ್ಕೆ ಸರ್ಕಾರ, ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಶಾಲಾ ಸಮವಸ್ತ್ರಗಳನ್ನ ವಿತರಣೆ ಮಾಡುತ್ತಾರೆ. ಆದ್ರೆ, ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ಶಾಲೆಗಳು ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ವಿತರಣೆ ಮಾಡಿಲ್ಲ.

ಕೆಲ ಮಕ್ಕಳಿಗೆ ಪಠ್ಯ ಪುಸ್ತಕವೂ ಇಲ್ಲ!

ಇನ್ನು ಈ ಜಿಲ್ಲೆಯಲ್ಲಿ ಕೇವಲ 40 ಪ್ರತಿಶತ ಮಾತ್ರ ಪಠ್ಯ ಪುಸ್ತಕಗಳನ್ನ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಶಿಕ್ಷಣ ಇಲಾಖೆ ಗೋಡೌನ್​ನಿಂದ ಈಗ ಕೆಲವೊಂದಿಷ್ಟು ಪುಸ್ತಕಗಳನ್ನ ಶಿಕ್ಷಕರು ತೆಗೆದುಕೊಂಡು ಹೋಗುತ್ತಿದ್ದಾರೆ. ಮೊದಲೇ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಇರುವ ಶಿಕ್ಷಕರಲ್ಲೇ ಶಾಲೆಗಳನ್ನ ನಡೆಸಲಾಗುತ್ತಿದೆ. ಇದೆ ಕಾರಣಕ್ಕೆ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಸತತವಾಗಿ ಹತ್ತನೇ ತರಗತಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಸೀಮಿತವಾಗಿದೆ. ಇಂತಹದರಲ್ಲಿ ಪಠ್ಯ ಪುಸ್ತಕ ಹಾಗೂ ಶಾಲಾ ಸಮವಸ್ತ್ರ ವಿತರಣೆ ಮಾಡದೆ ಶೈಕ್ಷಣಿಕವಾಗಿ ಇನ್ನುಷ್ಟು ಹಿಂದುಳಿಯುವಂತೆ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ತಲೆ ಕೆಡಿಸಿಕೊಳ್ಳುವ ಕೆಲಸ ಮಾಡದೆ ನಿರ್ಲಕ್ಷ್ಯ ತೋರುತ್ತಿದೆ. ಹೀಗಾಗಿ ಸಮವಸ್ತ್ರಗಳು ಹಾಗೂ ಪಠ್ಯ ಪುಸ್ತಕಗಳನ್ನ ವಿತರಣೆ ಮಾಡುತ್ತಿಲ್ಲ. ಕೂಡಲೇ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನ ವಿತರಣೆ ಮಾಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ