3 ತಿಂಗಳಿಂದ ಸರ್ಕಾರದಿಂದ ಬರುತ್ತಿಲ್ಲ ಅನುದಾನ, ಆಂಬುಲೆನ್ಸ್ ಸಿಬ್ಬಂದಿಗೆ ಬಂದಿಲ್ಲ ಸಂಬಳಗಳು
ದಿನದ 24 ಗಂಟೆಗಳ ಕಾಲವೂ ದುಡಿಯುವ 108 ಸಿಬ್ಬಂದಿ ಅಂಬ್ಯೂಲೆನ್ಸ್ ಗೆ ಈಗ ಸಂಬಳದ್ದೆ ದೊಡ್ಡ ಚಿಂತೆ. ಮೂರು ತಿಂಗಳಿನಿಂದ ಇವರೆಲ್ಲಾ ಸಂಬಳಕ್ಕಾಗಿ ಅಂಗಲಾಚುತ್ತಿದ್ದಾರೆ. ಹೀಗೆ ಸಂಬಳ ಆಗದ್ದಕ್ಕೆ 108 ಸಿಬ್ಬಂದಿಗೆ ತಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಜಿವಿಕೆ ಸಂಸ್ಥೆಗೆ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಉತ್ತರ ಸಿಗ್ತಾಯಿದೆ ಅಂತ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಅವರೆಲ್ಲ ತುರ್ತು ಸೇವೆ ಒದಗಿಸುವ ಆರೋಗ್ಯ (health) ಇಲಾಖೆ ಸಿಬ್ಬಂದಿ (karnataka government). ಯಾರಿಗಾದ್ರು ಏನಾದ್ರು ಆದ್ರೆ ಕರೆ ಮಾಡಿದ್ರೆ ಸಾಕು ಕ್ಷಣ ಮಾತ್ರದಲ್ಲೇ ಸ್ಥಳಕ್ಕೆ ಬಂದು ಬಿಡ್ತಾರೆ. ಹೀಗೆ ದಿನದ 24 ಗಂಟೆಗಳ ಕಾಲವೂ ದುಡಿಯುವ ಇವರಿಗೆ ಈಗ ಸಂಬಳದ್ದೆ ದೊಡ್ಡ ಚಿಂತೆ. ಕಳೆದ ಮೂರು ತಿಂಗಳಿನಿಂದ ಇವರೆಲ್ಲಾ ಸಂಬಳಕ್ಕಾಗಿ ಅಂಗಲಾಚುತ್ತಿದ್ದಾರೆ. ಹೀಗೆ ಸಂಬಳ ಆಗದ್ದಕ್ಕೆ 108 ಸಿಬ್ಬಂದಿಗೆ ತಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಈ ವಿದ್ಯಮಾನಗಳು ಸದ್ಯಕ್ಕೆ ಕಂಡು ಬಂದಿರುವುದು ಯಾದಗಿರಿ ಜಿಲ್ಲೆಯಲ್ಲಿ.. (Yadgir) ಹೌದು ರಾಜ್ಯದಲ್ಲಿ 500 ಕ್ಕೂ ಅಧಿಕ ಅಂಬ್ಯೂಲೆನ್ಸ್ ಗಳು ಎರಡು ಸರದಿಯಲ್ಲಿ ಓಡಾಡುತ್ತವೆ.. ಈ ಅಂಬ್ಯೂಲೆನ್ಸ್ (Ambulance) ಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಚಾಲಕರು ಮತ್ತು ಶುಶ್ರೂಷಕರು ಕೆಲಸ ಮಾಡ್ತಾಯಿದ್ದಾರೆ. ಆದ್ರೆ ಇದೆ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ.. ಹಾಗಂತ ಈ ಸಿಬ್ಬಂದಿ ಪ್ರತಿಭಟನೆ ಮಾಡುವಂತೆಯೂ ಇಲ್ಲವಾಗಿದೆ. ಜೊತೆಗೆ ಕರೆದ ಜಾಗಕ್ಕೆ ಸಮಯಕ್ಕೆ ಸರಿಯಾಗಿ ಹೋಗಲಿಲ್ಲವೆಂದ್ರೆ ಅಧಿಕಾರಿಗಳು ಕೊಡುವ ನೋಟೀಸ್ ಗಳಿಗೆ ಉತ್ತರ ಬೇರೆ ಕೊಡಬೇಕಾಗಿದೆ.
ಆದರೂ ಸಹ ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಸಂಬಳವಿಲ್ಲದೆ ಕೆಲಸ ಮಾಡ್ತಾಯಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 12 ಅಂಬ್ಯೂಲೆನ್ಸ್ ಗಳಿದ್ದು 60 ಕ್ಕೂ ಅಧಿಕ ಜನ ಚಾಲಕರು ಹಾಗೂ ಶುಶ್ರೂಷಕರು ಕೆಲಸ ಮಾಡ್ತಾಯಿದ್ದಾರೆ. ಸಂಬಳ ಕೊಡಿ ಅಂತ ಜಿವಿಕೆ ಸಂಸ್ಥೆಗೆ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಉತ್ತರ ಸಿಗ್ತಾಯಿದೆ ಅಂತ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಲಕಾಲಕ್ಕೆ ಸಂಬಳಗಳು ಸಿಗದೆ ಸಂಬಳದ ಸಮಸ್ಯೆ ಆಗ್ತಾಯಿದೆ. ಸಂಬಳದ ಸಮಸ್ಯೆ ಎದುರಾದಾಗ ಜಿವಿಕೆ ಸಂಸ್ಥೆಗೆ ಕೇಳಿದ್ರೆ ಸಮಸ್ಯೆ ಬಗೆಹರಿದೆ. ಆದ್ರೆ ಈ ಬಾರಿ ಸದ್ಯಕ್ಕೆ ಮೂರು ತಿಂಗಳಿಂದಲೂ ಸಂಬಳ ಆಗಿಲ್ಲ. ಈ ಬಾರಿ ಜಿವಿಕೆ ಸಂಸ್ಥೆಗೆ ಕೇಳಿದ್ರೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ ಅಂತ ಸಿಬ್ಬಂದಿಗೆ ಹೇಳ್ತಾಯಿದ್ದಾರಂತೆ.
ಇನ್ನು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವ ಸಿಬ್ಬಂದಿ ಒಂದು ಅಂಬ್ಯೂಲೆನ್ಸ್ ನಲ್ಲಿ ನಾಲ್ಕು ಕೆಲಸ ಮಾಡ್ತಾಯಿದ್ದಾರೆ. ಆದ್ರೆ ಸಂಬಳ ಬಾರದ ಕಾರಣಕ್ಕೆ ಮನೆ ನಡೆಸೋಕೆ ಕಂಡ ಕಂಡಲ್ಲಿ ಸಾಲ ಮಾಡಿದ್ದಾರೆ. ಕೆಲವರು ಮಕ್ಕಳ ಶಾಲೆಯ ಶುಲ್ಕ ಕಟ್ಟುವ ಸಲುವಾಗಿ ಸಾಲ ಮಾಡಿದ್ರೆ ಇನ್ನು ಕೆಲವರು ಕುಟುಂಬ ನಿರ್ವಹಣೆಗೆಂದೇ ಸಾಲ ಮಾಡಿದ್ದಾರೆ.
ಇವತ್ತೋ ನಾಳೆಯೋ ಸಂಬಳ ಬಂದರೆ ಸಾಲ ತೀರಿಸಬಹುದು ಅಂತ ಅಂದುಕೊಂಡಿದ್ದಾರೆ. ಆದ್ರೆ ಇಲ್ಲಿಯವರೆಗೆ ಸಂಬಳ ಆಗದ ಕಾರಣಕ್ಕೆ ಮಕ್ಕಳ ಶಾಲಾ ಶುಲ್ಕ ಕಟ್ಟಲು ಆಗ್ತಾಯಿಲ್ಲ. ಇತ್ತ ಕುಟುಂಬ ನಿರ್ವಹಣೆ ಸಹ ಕಷ್ಟ ಆಗ್ತಾಯಿದೆ. ಜೊತೆಗೆ ಮನೆ ಬಾಡಿಗೆ ಕಟ್ಟದ ಕಾರಣಕ್ಕೆ ಮನೆಯನ್ನ ಖಾಲಿ ಮಾಡುವಂತೆ ಮನೆ ಮಾಲೀಕರು ತಾಕೀತು ಮಾಡ್ತಾಯಿದ್ದಾರಂತೆ. ಇದೇ ಕಾರಣಕ್ಕೆ ಸಂಬಳವನ್ನ ಪಾವತಿ ಮಾಡಿ ಜೀವನ ನಡೆಸೋಕೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಸದಾಕಾಲ ಜನರ ಜೀವ ಉಳಿಸೋಕೆ ಕರೆ ಮಾಡಿದ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸುವ ಸಿಬ್ಬಂದಿಗಳ ಜೀವನ ಈಗ ಡೋಲಾಯಾಮಾನವಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡಬೇಕಾಗಿದೆ.