ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರ ನೇಮಕ: ನಕಲಿ ಆದೇಶ ಪ್ರತಿ ಸೃಷ್ಟಿಸಿದ ಕಿರಾತಕರು!

| Updated By: ರಮೇಶ್ ಬಿ. ಜವಳಗೇರಾ

Updated on: Mar 05, 2024 | 4:23 PM

ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರು ನಿಧನದಿಂದ ತೆರವಾದ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರ ನೇಮಕ ಮಾಡಿ ಆದೇಶ ಹೊರಡಿಸಿರುವ ನಕಲಿ ಆದೇಶ ಪ್ರತಿ ವೈರಲ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲೇ ಸಹಿ ಮಾಡಿ ಉಗ್ರಾಣ ನಿಗಮಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರ ನೇಮಕ: ನಕಲಿ ಆದೇಶ ಪ್ರತಿ ಸೃಷ್ಟಿಸಿದ ಕಿರಾತಕರು!
ಸಿದ್ದರಾಮಯ್ಯ ಹೆಸರಿನ ನಕಲಿ ಆದೇಶ ಪ್ರತಿ
Follow us on

ಯಾದಗಿರಿ, (ಮಾರ್ಚ್ 05): ಉಗ್ರಾಣ ನಿಗಮ ಅಧ್ಯಕ್ಷ (Karnataka Warehousing Corporation President) ನೇಮಕ ಮಾಡಿರುವ ನಕಲಿ ಆದೇಶ ಪತ್ರ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ನಕಲಿ ನೇಮಕಾತಿ ಆದೇಶ ಪ್ರತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವ ರೀತಿಯಲ್ಲೇ ಸಹಿ ಮಾಡಲಾಗಿದೆ. ಹೌದು.. ಸಿದ್ದರಾಮಯ್ಯ ಅವರು ನೇಮಕ ಮಾಡಿ ಆದೇಶ ಹೊರಡಿಸಿರುವಂತೆ ನಕಲಿ ಆದೇಶ ಪ್ರತಿ ಸೃಷ್ಟಿಸಿದ್ದಾರೆ. ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಸಿ. ಕಾಡ್ಲೂರ್ ಅವರನ್ನು ಉಗ್ರಾಣ ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಹೊರಡಿಸಿರುವ ನಕಲಿ ಆದೇಶ ಪ್ರತಿ ವೈರಲ್ ಆಗಿದೆ. ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್​ ಅವರ ನಿಧನದಿಂದ ತೆರವಾದ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಹೊಸಬರನ್ನು ನೇಮಕ ಮಾಡಿಲ್ಲ. ಆದರೂ ಸಹ ಸಿದ್ದರಾಮಯ್ಯರ ಹೆಸರಲ್ಲಿ ಸೃಷ್ಟಿಸಿರುವ ನಕಲಿ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ , ಅವರ ಅಕಾಲಿಕ ಮರಣದಿಂದಾಗಿ ಉಗ್ರಾಣ ನಿಗಮದ ಅಧ್ಯಕ್ಷ ಖಾಲಿಯಾಗಿತ್ತು ಇದೀಗ ಈ ಸ್ಥಾನಕ್ಕೆ ಎಸಿ ಕಾಡ್ಲೂರ್ ಎನ್ನುವರನ್ನು ನೇಮಕ ಮಾಡಿ ನಕಲಿ ಆದೇಶ ಪತ್ರವನ್ನು ಸೃಷ್ಟಿಸಲಾಗಿದೆ. ಮಾರ್ಚ್​ 1 ರಂದು ಉಗ್ರಾಣ ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವ ನಕಲು ಪ್ರತಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: ರಾಮನಗರದ 40 ಮಂದಿ ವಕೀಲರ ವಿರುದ್ಧ ಕೇಸ್: ಐಜೂರು PSI ಅಮಾನತು ಆದೇಶ ರದ್ದು, ಕರ್ತವ್ಯಕ್ಕೆ ಹಾಜರ್

ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಸ್ಪಷ್ಟನೆ

ಇನ್ನು ಈ ಬಗ್ಗೆ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಪ್ರತಿಕ್ರಿಯಿಸಿದ್ದು, ಪತ್ರ ನಕಲಿನೋ ಅಸಲಿನೋ ಎಂದು ನನಗೂ ಇನ್ನು ಸರಿಯಾಗಿ ಗೊತ್ತಿಲ್ಲ. ಎರಡ್ಮೂರು ದಿನಗಳಿಂದ ಕ್ಷೇತ್ರ ಜನರಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಸಿಎಂ‌ ಕಚೇರಿಗೆ ಮಾಡಿ ಮಾಹಿತಿ ಕೇಳಿದ್ದಾಗ ಈ ಪತ್ರ ಸುಳ್ಳು ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಕಾರ್ಯಕರ್ತರು ಸಹ ಪತ್ರ ನಕಲಿ ಇದೆ ಅಂತಾನೇ ಹೇಳುತ್ತಿದ್ದಾರೆ. ಆ ರೀತಿಯ ಅಧಿಕೃತ ಯಾವುದೇ ಆದೇಶ ಆಗಿಲ್ಲ ಅಂತ ಹೇಳಿದ್ದಾರೆ. ಖುದ್ದು ಸಿಎಂ‌ ಕಚೇರಿಯಿಂದಾನೇ ನಾನು ಪೋನ್ ಮಾಡಿ ಕೇಳಿದಾಗ ಹೇಳಿದ್ದಾರೆ. ಒಂದು ವೇಳೆ ಎ.ಸಿ ಕಾಡ್ಲೂರ್ ಗೆ ಅಧ್ಯಕ್ಷ ಕೊಟ್ಟರೂ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:16 pm, Tue, 5 March 24