Skin infection: ಅಬ್ದುಲ್ ಕಲಾಂ ವಸತಿ ಶಾಲೆಯ ಮಕ್ಕಳಲ್ಲಿ ಕಾಣಿಸಿಕೊಂಡಿದೆ ಚರ್ಮ ತುರಿಕೆ ಕಾಯಿಲೆ

500 ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಯಾದಗಿರಿ ತಾಲೂಕಿನ ಬಾಲ್ಚೇಡ್ ಗ್ರಾಮದ ಸಮೀಪದ ಎ.ಪಿ.ಜೆ‌ ಅಬ್ದುಲ್ ಕಲಾಂ ವಸತಿ ಶಾಲೆಯ ಮಕ್ಕಳಲ್ಲಿ ಚರ್ಮ ತುರಿಕೆ ಕಾಯಿಲೆ ಕಾಣಿಸಿಕೊಂಡಿದೆ.

Skin infection: ಅಬ್ದುಲ್ ಕಲಾಂ ವಸತಿ ಶಾಲೆಯ ಮಕ್ಕಳಲ್ಲಿ ಕಾಣಿಸಿಕೊಂಡಿದೆ ಚರ್ಮ ತುರಿಕೆ ಕಾಯಿಲೆ
ಅಬ್ದುಲ್ ಕಲಾಂ ವಸತಿ ಶಾಲೆಯ ಮಕ್ಕಳಲ್ಲಿ ಕಾಣಿಸಿಕೊಂಡಿದೆ ಚರ್ಮ ಕಾಯಿಲೆ
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Dec 01, 2023 | 12:41 PM

ಆ ವಸತಿ ಶಾಲೆಯ ( residential school) ಮಕ್ಕಳು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತುರಿಕೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಕಾಯಿಲೆಯಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಾಗಿದ್ದಾರೆ. ಮೂರು ದಿನಗಳ ಬಳಿಕ ವೈದ್ಯರ ತಂಡ ವಸತಿ ಶಾಲೆಯಲ್ಲಿಯೇ ಬೀಡುಬಿಟ್ಟು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದೆ. ವಿಪರೀತ ತುರಿಕೆ ವಿದ್ಯಾರ್ಥಿಗಳು, ಪೋಷಕರ (parents) ಆತಂಕ ಹೆಚ್ಚಿಸಿದೆ. ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಚರ್ಮ ಸೋಂಕು (skin infection).. ನೂರಾರು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಚರ್ಮ ಸೋಂಕು.. ವಸತಿ ನಿಲಯದ ಅವ್ಯವಸ್ಥೆಯೇ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಿಗೆ ಕಾರಣವಾಗಿದದೆ.. ಯಸ್ ಈ ವಿದ್ಯಮಾನಗಳು ಕಂಡು ಬಂದಿದ್ದು ಯಾದಗಿರಿ (yadgir) ತಾಲೂಕಿನ ಬಾಲ್ಚೇಡ್ ಗ್ರಾಮದ ಸಮೀಪದ ಎ.ಪಿ.ಜೆ‌ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ (Dr. APJ Abdul Kalam Residential School).

ಹೌದು ಕಳೆದ ನಾಲ್ಕೈದು ದಿನಗಳಿಂದ ಈ ವಸತಿ ಶಾಲೆಯ ಮಕ್ಕಳಲ್ಲಿ ವಿಚಿತ್ರ ರೀತಿಯ ಚರ್ಮ ಸೋಂಕು ಪತ್ತೆಯಾಗಿದೆ. ಒಂದಲ್ಲ ಎರಡಲ್ಲ ಬರೋಬರಿ 180 ಕ್ಕೂ ಅಧಿಕ ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.. ವಿದ್ಯಾರ್ಥಿಗಳ ದೇಹದ ನಾನಾ ಭಾಗದಲ್ಲಿ ಸೋಂಕು ಹರಡಿದ್ದರಿಂದ ವಿಪರೀತ ತುರಿಕೆ ಶುರುವಾಗಿದೆ. ಇದೆ ಕಾರಣಕ್ಕೆ ಮಕ್ಕಳು ರಾತ್ರಿಯಲ್ಲ ನಿದ್ದೆ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾತ್ರಿ ವೇಳೆ ನಿದ್ದೆ ಮಾಡದೆ ಇಡೀ ದೇಹವನ್ನ ತುರಿಸಿಕೊಂಡೆ ಮಲಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಕ್ಕಳಿಗೆ ಈ ರೀತಿ ಸಮಸ್ಯೆ ಉಂಟಾಗುವುದ್ದಕ್ಕೆ ಕಾರಣ ಅಶುದ್ಧ ಕುಡಿಯುವ ನೀರು ಅಂತ ವಿದ್ಯಾರ್ಥಿಗಳ ಆರೋಪವಾಗಿದೆ. ಮಕ್ಕಳಲ್ಲಿ ಆ ಸಮಸ್ಯೆ ಕಂಡು ಬಂದ್ರು ವಸತಿ ಶಾಲೆಯ ಪ್ರಾಂಶುಪಾಲರಿಗಾಗ್ಲಿ ವಾರ್ಡನ್ ಗಾಗ್ಲಿ ವಿಷಯ ಗೊತ್ತೆ ಇಲ್ಲ. ಆದ್ರೆ ಕಳೆದ ಎರಡು ದಿನಗಳ ಹಿಂದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೊಸಂಬೆ ಶಾಲೆಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಗಳ ಸಮಸ್ಯೆ ಗೊತ್ತಾಗಿದೆ. ವಿದ್ಯಾರ್ಥಿಗಳು ಆಯೋಗ ಸದಸ್ಯರ ಮುಂದೆ ತಮಗೆ ಆಗಿದ್ದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಬೋರವೆಲ್ ನೀರು ವಸತಿ ನಿಲಯಕ್ಕೆ ಸರಬರಾಜು ಆಗುತ್ತೆ, ಆದ್ರೆ ಬಿಸಿ ನೀರು ಬಾರದ ಕಾರಣಕ್ಕೆ ಈ ಸಮಸ್ಯೆ ಉಂಟಾಗುತ್ತಿದೆ ಅಂತ ವಿದ್ಯಾರ್ಥಿಗಳ ಆರೋಪವಾಗಿದೆ.

1ನೆ ತರಗತಿ ಯಿಂದ ಪಿಯುಸಿ ವರೆಗೆ ಇರುವ ಅಲ್ಪ ಸಂಖ್ಯಾತರ ಇಲಾಖೆಯ ವ್ಯಾಪ್ತಿಯ ಈ ವಸತಿ ಶಾಲೆಯಲ್ಲಿ ಸುಮಾರು 500 ಜನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿದ್ಯೆಯನ್ನ ಕಲಿಯುತ್ತಿದ್ದಾರೆ. ಆದ್ರೆ ಇಲ್ಲಿ 180 ಕ್ಕೂ ವಿದ್ಯಾರ್ಥಿಗಳಲ್ಲಿ ಚರ್ಮ ಸುಕ್ಕುಗಟ್ಟಿದ್ದರಿಂದ ಉಳಿದ ವಿದ್ಯಾರ್ಥಿಗಳಲ್ಲಿ ಆಂತಕ ಮನೆ ಮಾಡಿದೆ. ಇನ್ನು ದೇಹದಾದ್ಯಂತ ತುರಿಕೆ, ಗುಳ್ಳೆಗಳು, ಸುಕ್ಕುಗಟ್ಟಿದಂತಹ ಸಮಸ್ಯೆಯಿಂದ ಮಕ್ಕಳು ನರಳುತ್ತಿದ್ದಾರೆ.

Also read: ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ; ಪ್ರಿನ್ಸಿಪಾಲ್‌, ಮೇಲ್ವಿಚಾರಕಿ ಅಮಾನತು ಮಾಡಿದ ಡಿಸಿ

ಈ ಚರ್ಮ ಸೋಂಕಿಗೆ ಒಳಗಾಗಿರುವ ಮಕ್ಕಳಿಗೆ ವೈದ್ಯರು ಚಿಕಿತ್ಸೆ ನೀಡದೇ ಅಥವಾ ಯಾವುದೇ ತಪಾಸಣೆ ನಡೆಸದೆ ನರ್ಸ್ ಒಬ್ಬರು ಬಂದು ಮಾತ್ರೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಈ ಮಾತ್ರೆಗಳು ಈ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಂಡು ಬಂದಿರುತ್ತದೆ ಎಂದು ಮಕ್ಕಳ ರಕ್ಷಣಾ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರನ್ನಾಗಿ ದಾಖಲಿಸಿಕೊಂಡಿದ್ದಾರೆ.

ಇದಲ್ಲದೆ ವಸತಿ ಶಾಲೆಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ತೊಂದರೆಯ ಬಗ್ಗೆ ಕೂಲಂಕಶ ಪರಿಶೀಲನೆ ನಡೆಸಿ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳು, ಶುಚಿತ್ವದಿಂದ ಕೂಡಿದ ಆಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುವ್ಯವಸ್ಥಿತ ಶೌಚಾಲಯಗಳ ಸೌಲಭ್ಯವನ್ನು ಒದಗಿಸಲು ನಿಯಮಾನುಸಾರ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಪತ್ರ ತಲುಪಿದ 7 ದಿನಗಳ ಒಳಗಾಗಿ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಇನ್ನು ಆ ಆಯೋಗ ಸದಸ್ಯರು ಬಂದು ಹೋದ ಮೇಲೆ ವಸತಿ ಶಾಲೆಯಲ್ಲಿ ವೈದ್ಯರ ತಂಡ ಬೀಡುಬಿಟ್ಟಿದ್ದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇಡುವ ಕೆಲಸ ಮಾಡುತ್ತಿದೆ. ಇನ್ನು ಇವತ್ತು ಬೆಳಗ್ಗೆಯಿಂದ ವೈದ್ಯರ ತಂಡ ಮಕ್ಕಳಿಗೆ ಮಾತ್ರ ಸೇರಿದಂತೆ ನಾನಾ ರೀತಿಯ ವ್ಯವಸ್ಥೆಯನ್ನ ಮಾಡಿ ಇಲ್ಲಿಯೇ ಬೀಡುಬಿಟ್ಟಿದೆ. ಇನ್ನು ಯಾರಾದ್ರು ಓರ್ವ ಮಗು ಮನೆಗೆ ಹೋಗಿ ಬರುವಾಗ ಈ ರೀತಿಯ ಸೋಂಕಿಗೆ ಒಳಗಾಗಿ ಬಂದಿರಬಹುದು, ಇದೆ ಕಾರಣಕ್ಕೆ ಇಡೀ ಮಕ್ಕಳಿಗೆ ಈ ರೀತಿಯ ಸೋಂಕು ಹರಡಿದೆ ಎಂಬುದು ವಸತಿ ಶಾಲೆಯ ಪ್ರಾಂಶುಪಾಲರ ಮಾತಾಗಿದೆ.

ಒಟ್ನಲ್ಲಿ ಕಾಂಪೌಂಡ್ ಇಲ್ಲದ ವಸತಿ ಶಾಲೆಯಲ್ಲಿ ಸ್ವಚ್ಚತೆಗೆ ಯಾವುದೇ ಕ್ರಮ ಇಲ್ಲದಂತಾಗಿದೆ. ಕುಡಿಯುವ ನೀರು, ಸ್ನಾನಕ್ಕೆ ಬಳಸುವ ನೀರು ಸಹ ಗಲೀಜು ಆಗಿದ್ದು ಇದೆ ಕಾರಣಕ್ಕೆ ಈ ರೀತಿಯ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಂಡಿದೆ ಅಂತ ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೆ ಅದು ಏನೇ ಇರಲಿ ಮಕ್ಕಳಿಗೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಂತನ್ನಾಗುವಂತೆ ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು