AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಪರಿಹಾರ ಚೆಕ್ ಬೌನ್ಸ್ ಪ್ರಕರಣ; ಬ್ಯಾಂಕ್ ಮ್ಯಾನೇಜರ್‌ ವಿರುದ್ದ ಶಿಸ್ತು ಕ್ರಮಕ್ಕೆ ಶಾಸಕ ರಾಜುಗೌಡ ಶಿಫಾರಸು

ಅನಗತ್ಯವಾಗಿ ಫಲಾನುಭವಿಗಳನ್ನು ಸುತ್ತಾಡಿಸುತ್ತಿದ್ದಾರೆ. ಹೀಗಾಗಿ ಡಿಸಿ, ತಹಶೀಲ್ದಾರ್ ಜೊತೆ ಮಾತನಾಡಿದ್ದೇನೆ. ಸಮಸ್ಯೆ ಮಾಡಿದ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಶಿಸ್ತು ಕ್ರಮ ಜರುಗಿಸುವ ಸಂಬಂಧ ಸಿಎಂ ಜತೆಯೂ ಚರ್ಚೆ ಮಾಡ್ತೀವಿ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

ಕೋವಿಡ್ ಪರಿಹಾರ ಚೆಕ್ ಬೌನ್ಸ್ ಪ್ರಕರಣ; ಬ್ಯಾಂಕ್ ಮ್ಯಾನೇಜರ್‌ ವಿರುದ್ದ ಶಿಸ್ತು ಕ್ರಮಕ್ಕೆ ಶಾಸಕ ರಾಜುಗೌಡ ಶಿಫಾರಸು
ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ನೀಡಿದ್ದ ಶಾಸನ ರಾಜುಗೌಡ
TV9 Web
| Updated By: ಸಾಧು ಶ್ರೀನಾಥ್​|

Updated on:Jan 21, 2022 | 12:45 PM

Share

ಬೆಂಗಳೂರು: ‘ಸರ್ಕಾರ ನೀಡಿದ್ದ ಪರಿಹಾರದ ಚೆಕ್ ಬೌನ್ಸ್ ಆಗಿಲ್ಲ’ ಖಾತೆಯಲ್ಲಿ ಹಣವಿದೆ, ಯಾವುದೇ ಚೆಕ್ ಬೌನ್ಸ್ ಆಗಿಲ್ಲ ಎಂದು ಬೆಂಗಳೂರಿನಲ್ಲಿ ಯಾದಗಿರಿ ಸುರಪುರ ಶಾಸಕ ರಾಜುಗೌಡ ಸ್ಪಷ್ಟ ಪಡಿಸಿದ್ದಾರೆ. ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್‌ನಿಂದ ನನ್ನ ಕ್ಷೇತ್ರದ ಇಬ್ಬರಿಗೆ ಸಮಸ್ಯೆಯಾಗಿದೆ ಎಂದಿದ್ದಾರೆ.

‘ಸರ್ಕಾರ ನೀಡಿದ್ದ ಪರಿಹಾರದ ಚೆಕ್ ಬೌನ್ಸ್ ಆಗಿಲ್ಲ’ ಖಾತೆಯಲ್ಲಿ ಹಣವಿದೆ, ಯಾವುದೇ ಚೆಕ್ ಬೌನ್ಸ್ ಆಗಿಲ್ಲ. ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್‌ನಿಂದ ನನ್ನ ಕ್ಷೇತ್ರದ ಇಬ್ಬರಿಗೆ ಸಮಸ್ಯೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 8-9 ಜನರಿಗೆ ಸಮಸ್ಯೆಯಾಗಿದೆ. ಅನಗತ್ಯವಾಗಿ ಫಲಾನುಭವಿಗಳನ್ನು ಸುತ್ತಾಡಿಸುತ್ತಿದ್ದಾರೆ. ಹೀಗಾಗಿ ಡಿಸಿ, ತಹಶೀಲ್ದಾರ್ ಜೊತೆ ಮಾತನಾಡಿದ್ದೇನೆ. ಸಮಸ್ಯೆ ಮಾಡಿದ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಶಿಸ್ತು ಕ್ರಮ ಜರುಗಿಸುವ ಸಂಬಂಧ ಸಿಎಂ ಜತೆಯೂ ಚರ್ಚೆ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಘಟನೆ ಮಾಹಿತಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಎರಡು ಕುಟುಂಬಗಳಿಗೆ ಪರಿಹಾರದ ಚೆಕ್ನಲ್ಲಿ ಸಮಸ್ಯೆ ಎದುರಾಗಿದೆ. ಮಹಾಮಾರಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ನೀಡಿದ್ದ ಪರಿಹಾರ ಚೆಕ್ನಿಂದ ಹಣ ಸಿಗದೆ ಕುಟುಂಬಗಳು ಪರದಾಡುತ್ತಿವೆ.

ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಅದರಂತೆಯೇ ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿತ್ತು. ಆದ್ರೆ ಈಗ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ ನೀಡಿ ಬ್ಯಾಂಕ್ ಸಿಬ್ಬಂದಿ ಕಳಿಸುತ್ತಿದ್ದಾರೆ. ಹತ್ತಾರು ಬಾರಿ ಬ್ಯಾಂಕ್ಗಳಿಗೆ ಸುತ್ತಿದರೂ ಪ್ರಯೋಜನವಾಗದೆ ಪರದಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿಯ ಬಸಣ್ಣಗೌಡ ಎಂಬುವವರು ಕೊರೊನಾದಿಂದ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಅವರ ಮಗಳು ಅನಿತಾ ಎಲ್ಲಾ ದಾಖಲೆಗಳ ಅರ್ಜಿ ಸಲ್ಲಿಸಿದ್ದರು. ಅದರಂತೆ ಅನಿತಾ ಸೇರಿದಂತೆ ಉಳಿದ ಅರ್ಹ ಅರ್ಜಿದಾರರಿಗೆ ಡಿಸೆಂಬರ್ 17ರಂದು ಸುರಪುರ ಶಾಸಕ ರಾಜುಗೌಡ ಸಮ್ಮುಖದಲ್ಲಿ ಚೆಕ್ ನೀಡಲಾಗಿತ್ತು.

ಸದ್ಯ ಅನಿತಾ ಚೆಕ್ ಹಿಡಿದು ಹಲವು ಬ್ಯಾಂಕ್ಗಳನ್ನು ಸುತ್ತುತಿದ್ದಾರೆ. ಆದ್ರೆ ಪರಿಹಾರ ಹಣ ಮಾತ್ರ ಕೈಗೆ ಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ ನೀಡಿ ಕಳಿಸುತ್ತಿದ್ದಾರೆ. ಮತ್ತೆ ಕೆಲವು ಕಡೆ ಸರಿಯಾದ ಸ್ಪಂದನೆಯೇ ಸಿಗದೆ ಕುಟುಂಬ ನೊಂದಿದೆ. ಇನ್ನು ಇದೇ ರೀತಿ ಮತ್ತೊಂದು ಕುಟುಂಬ ಕೂಡ ಹಣಕ್ಕಾಗಿ ಅಲೆದಾಡಿ ಹೈರಾಣಾಗಿದೆ. ಚೆಕ್ ಪಡೆದ ದೇವಿಕೇರ ಗ್ರಾಮದ ಕುಟುಂಬ ಬ್ಯಾಂಕ್ಗೆ ಅಲೆದು ಅಲೆದು ಬೇಸತ್ತಿದೆ. ಸುರಪುರ ತಾಲೂಕಿನ ದೇವಿಕೇರ ಗ್ರಾಮದ ನಾಗಪ್ಪ ಕೋವಿಡ್ನಿಂದ ಮೃತಪಟ್ಟಿದ್ದರು. ಇವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲಾಗಿತ್ಪತು. ಆದ್ರೆ ಎಷ್ಟೋ ಬ್ಯಾಂಕ್ಗಳಿಗೆ ಅಲೆಯುತ್ತಿದ್ರು ಹಣ ಮತ್ರ ಜಮೆ ಆಗುತ್ತಿಲ್ಲ ಎಂದು ಕುಟುಂಬ ಅಳಲು ತೋಡಿಕೊಂಡಿದೆ.

ಇದನ್ನೂ ಓದಿ: ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ಬೌನ್ಸ್! ಸುತ್ತಿ ಸುತ್ತಿ ಸುಸ್ತಾದರೂ ಪರಿಹಾರ ಹಣ ಮಾತ್ರ ಕೈಗೆ ಸಿಗ್ತಿಲ್ಲ

Published On - 12:30 pm, Fri, 21 January 22