ಯಾದಗಿರಿ: ನಗರದಲ್ಲಿ ಟಿಪ್ಪು ಸುಲ್ತಾನ್ (Tippu) ಹಾಗೂ ವೀರ್ ಸಾವರ್ಕರ್ (Savarkar) ವಾರ್ ಶುರುವಾದಂತ್ತಾಗಿದೆ. ಟಿಪ್ಪು ಸುಲ್ತಾನ್ ವೃತ್ತದ ಹೆಸರು ಬದಲಾವಣೆಗೆ ಯಾದಗಿರಿ ನಗರಸಭೆ ಮುಂದಾಗಿದೆ ಎನ್ನಲಾಗುತ್ತಿದೆ. ಟಿಪ್ಪು ಸುಲ್ತಾನ್ ಹೆಸರು ಬದಲಾಗಿ ಸಾವರ್ಕರ್ ಹೆಸರಿಡಲು ನಿರ್ಧಾರ ಮಾಡಲಾಗಿದೆ. ನಗರಸಭೆ ಕಚೇರಿ ಮುಂದೆ ಅಧ್ಯಕ್ಷ ಸುರೇಶ್ ಅಂಬಿಗರ ವಿರುದ್ಧ ಹಜರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದಿಂದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರಸಭೆ ಅಧ್ಯಕ್ಷರ ವಿರುದ್ಧ ಕಿಡಿಕಾಡಿದ್ದಾರೆ. 2010ರಲ್ಲಿ ವೃತ್ತಕ್ಕೆ ಟಿಪ್ಪು ವೃತ್ತ ಹೆಸರಿಡಲು ನಿರ್ಧಾರ ಆಗಿತ್ತು. ಅಂದಿನ ಸಾಮಾನ್ಯ ಸಭೆಯಲ್ಲಿ ಟಿಪ್ಪು ಹೆಸರಿಡಲು ನಿರ್ಧಾರ ಮಾಡಲಾಗಿತ್ತು. ಈಗಿನ ಅಧ್ಯಕ್ಷರು ಸಾವರ್ಕರ್ ಹೆಸರಿಡಲು ಮುಂದಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷರ ವಿರುದ್ಧ ಮುಸ್ಲಿಮರು ಆರೋಪ ಮಾಡುತ್ತಿದ್ದಾರೆ.
ಹುಬ್ಬಳ್ಳಿ: ಸಿದ್ದರಾಮಯ್ಯ ಪ್ರತಿದಿನ ಟಿಪ್ಪು ಪೂಜೆ ಮಾಡುತ್ತಾರೆ. ಟಿಪ್ಪು ಬೆಂಬಲಿಸಿ RSS ಬೈಯ್ಯುವುದೇ ಸಿದ್ದರಾಮಯ್ಯ ಅವರ ಕಾಯಕ. ಕಾಂಗ್ರೆಸ್ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು ಎಂಬ ಹೇಳಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದರು.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ: ಸಿದ್ದು ಸುಲ್ತಾನ್ ಬಂದರೆ ಹೆದರ್ತೀವಾ: ಪ್ರತಾಪ್ ಸಿಂಹ
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ? ಎನ್ನುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತದೆ ಎಂಬ ಸಿ.ಟಿ.ರವಿ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಮೋದಿ ಸರ್ಕಾರ ಬಂದ ನಂತರ ಕೋಮು ಗಲಭೆಗಳು ನಿಂತಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆ ಇರತ್ತೆ, ಹೀಗಾಗಿ ಸಿಟಿ ರವಿ ಆ ರೀತಿ ಹೇಳಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಲನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:13 pm, Mon, 28 November 22