ಬಿಡಾಡಿ ದನಗಳ ಜೀವ ಉಳಿಸಲು ಪಣ ತೊಟ್ಟ ಯಾದಗಿರಿ ಯುವಕರು; ಸ್ಥಳೀಯರಿಂದ ಪ್ರಶಂಸೆ
ದನಗಳ ಕೊರಳಿಗೆ ರೇಡಿಯಂ ಬ್ಯಾಂಡ್ ಕಟ್ಟಿದರೆ ರಾತ್ರಿ ವೇಳೆ ವಾಹನಗಳ ಹೆಡ್ ಲೈಟ್ಗೆ ಅದು ಮಿಂಚುತ್ತದೆ. ಲೈಟ್ ಹೊಳೆದಾಗ ವಾಹನ ಸವಾರರಿಗೆ ಮುಂದೆ ಏನೋ ಇದೆ ಅಂತ ಗಮನಕ್ಕೆ ಬರುತ್ತದೆ. ಈ ಮೂಲಕ ದನಗಳ ಜೀವ ಉಳಿಯುತ್ತಿದೆ.
ಯಾದಗಿರಿ: ಹೆದ್ದಾರಿಗಳ ಮೇಲೆ ಬಿಡಾಡಿ ದನಗಳ (Cows) ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಹೆದ್ದಾರಿಗಳ ಮೇಲೆ ದನಗಳು ಮಲಗಿದರೆ ವಾಹನ ಸವಾರರಿಗೆ ಕಾಣಲ್ಲ. ವೇಗವಾಗಿ ಬಂದ ವಾಹನ (Vehicles) ಸವಾರರು ದನಗಳಿಗೆ ಗುದ್ದಿ ಅಪಘಾತ ಕೂಡ ನಡೆಯುತ್ತಿವೆ. ಅಪಘಾತದಲ್ಲಿ ಸಾಕಷ್ಟು ವಾಹನ ಸವಾರರು ಗಾಯಗೊಂಡಿದ್ದರೆ, ದನಗಳು ಸಹ ಪ್ರಾಣ ಕಳೆದುಕೊಂಡಿವೆ. ಹೀಗಾಗಿ ಬಿಡಾಡಿಗಳನ್ನ ರಕ್ಷಣೆ ಮಾಡಬೇಕು ಅಂತ ಯುವಕರು ಪಣ ತೊಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣ ಯುವಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಜ್ಯ ಹೆದ್ದಾರಿ ಮೇಲೆ ಬಿಡಾಡಿ ದನಗಳು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ನಿಂದ ಹುಣಸಗಿ ಪಟ್ಟಣದ ಮದ್ಯದಿಂದ ಹಾದು ವಿಜಯಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದೆ. ಹುಣಸಗಿ ಪಟ್ಟಣದ ಮದ್ಯದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮೇಲೆ ಎಲ್ಲೆಂದರಲ್ಲಿ ಬಿಡಾಡಿ ದನಗಳು ಓಡಾಡುತ್ತಿರುತ್ತವೆ. ದನಗಳ ಹಾವಳಿಯಿಂದ ವಾಹನ ಸವಾರರು ಪರದಾಡುವಂತ ಪರಸ್ಥಿತಿ ಕೂಡ ನಿರ್ಮಾಣವಾಗಿದೆ. ವೇಗವಾಗಿ ಬರುವ ವಾಹನಗಳ ಮದ್ಯ ಸಿಲುಕಿ ಸಾಕಷ್ಟು ದನಗಳು ಪ್ರಾಣವನ್ನ ಕಳೆದುಕೊಂಡಿವೆ.
ಬಿಡಾಡಿ ದನಗಳ ಅಪಘಾತ ತಪ್ಪಿಸಿದ ಯುವಕರ ತಂಡ: ಹುಣಸಗಿ ಪಟ್ಟಣ ತಾಲೂಕು ಕೇಂದ್ರವಾದ ಮೇಲೆ ಹುಣಸಗಿ ಪಟ್ಟಣದಿಂದ ಸಾಕಷ್ಟು ವಾಹನಗಳು ವಿಜಯಪುರಕ್ಕೆ ಹೋಗುತ್ತವೆ. ಹೀಗಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿವೆ. ಇದನ್ನು ಪಣ ತೊಟ್ಟಿರುವ ನಾಲ್ಕು ಮಂದಿ ಯುವಕರ ತಂಡ ದನಗಳ ಕೊರಳಿಗೆ ರೇಡಿಯಂ ಬ್ಯಾಡ್ ಕಟ್ಟಿ ಪ್ರಾಣ ರಕ್ಷಕರಾಗಿದ್ದಾರೆ. ಪಟ್ಟಣದ ನಿವಾಸಿಗಳಾದ ಸೈಯದ್ ದಾವುದ್ ಹಾಗೂ ಮನೋಜ್ ಜೊತೆಗೆ ಇನ್ನಿಬ್ಬರು ಸ್ನೇಹಿತರು ಸೇರಿ ದನಗಳ ಪ್ರಾಣ ಉಳಿಸಲು ಮುಂದಾಗಿದ್ದಾರೆ.
ದನಗಳ ಕೊರಳಿಗೆ ರೇಡಿಯಂ ಬ್ಯಾಂಡ್ ಕಟ್ಟಿದರೆ ರಾತ್ರಿ ವೇಳೆ ವಾಹನಗಳ ಹೆಡ್ ಲೈಟ್ಗೆ ಅದು ಮಿಂಚುತ್ತದೆ. ಲೈಟ್ ಹೊಳೆದಾಗ ವಾಹನ ಸವಾರರಿಗೆ ಮುಂದೆ ಏನೋ ಇದೆ ಅಂತ ಗಮನಕ್ಕೆ ಬರುತ್ತದೆ. ಈ ಮೂಲಕ ದನಗಳ ಜೀವ ಉಳಿಯುತ್ತಿದೆ. ಇದಕ್ಕೆ ಯಾರ ಸಹಾಯ ಕೂಡ ಪಡೆಯದೆ ಸ್ವಂತ ದುಡ್ಡು ಸೇರಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಹುಣಸಗಿ ಪಟ್ಟಣದಲ್ಲಿ ಎಲ್ಲೇ ಬಿಡಾಡಿ ದನಗಳು ಕಂಡು ಬಂದರೂ ಈ ಯುವಕ ತಂಡ ರೇಡಿಯಂ ಬ್ಯಾಂಡ್ ಕಟ್ಟಿ ಬರುತ್ತದೆ.
ಇನ್ನು ಟಿವಿ9 ಜೊತೆ ಮಾತನಾಡಿದ ಸೈಯಾದ್, ರಾತ್ರಿ ವೇಳೆ ದನಗಳ ಮೇಲೆ ವಾಹನ ಹಾಯ್ದು ಆಕ್ಸಿಡೆಂಡ್ ಆಗಿತ್ತು. ಹೀಗಾಗಿ ಬಿಡಾಡಿ ದನಗಳನ್ನ ರಕ್ಷಣೆ ಮಾಡಬೇಕು ಅಂತ ಪ್ಲಾನ್ ಮಾಡಿದೆವು ಎಂದು ತಿಳಿಸಿದರು. ರಸ್ತೆ ಮೇಲೆ ರಾತ್ರಿ ವೇಳೆ ಬಿಡಾಡಿ ದನಗಳು ಮಲಗಿರುತ್ತವೆ. ಆದರೆ ವೇಗವಾಗಿ ಬರುವ ವಾಹನಗಳು ದನಗಳ ಮೇಲೆ ಹಾಯ್ದ ಪರಿಣಾಮ ಮೂಖ ಪ್ರಾಣಿಗಳ ಜೀವ ಹೋಗುತ್ತಿವೆ. ಹೀಗಾಗಿ ನಾನು ಮತ್ತೆ ಸ್ನೇಹಿತರು ಸೇರಿ ರೇಡಿಯಂ ಖರೀದಿ ಮಾಡಿ ಅವುಗಳಿಗೆ ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ
ಲಕ್ಷ್ಮಣ ಸವದಿ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ; ಟಿವಿ9ಗೆ ಎಂಎಲ್ಸಿ ಲಖನ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Published On - 2:44 pm, Thu, 27 January 22