ಯಾದಗಿರಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ; ಸೂರ್ಯನ ಪ್ರಖರತೆಗೆ ಗಡಿ ಜಿಲ್ಲೆ ಜನ ಕಂಗಾಲು
ಅದು ಬಿಸಿಲ ನಾಡು ಎಂದೆ ಖ್ಯಾತಿ ಪಡೆದಿರುವ ಯಾದಗಿರಿ ಜಿಲ್ಲೆಯಲ್ಲಿ ಈಗ ಸೂರ್ಯನ ಪ್ರಖರತೆ ಮತ್ತಷ್ಟು ಹೆಚ್ಚಾಗಿದೆ. ದಿನೆ ದಿನೆ ತಾಪಮಾನ ಏರಿಕೆಯಾಗುತ್ತಿದ್ದು, ಜನ ಮನೆಯಿಂದ ಹೊರ ಬರಲು ಹೆದರುವಂತಹ ಪರಸ್ಥಿತಿ ಎದುರಾಗಿದೆ. ಹೊರ ಬಂದರೂ ಸಹ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಯಾದಗಿರಿ, ಏ.05: ಬಿಸಿಲು ನಾಡು ಎಂದೆ ಖ್ಯಾತಿ ಹೊಂದಿರುವ ಯಾದಗಿರಿ(Yadgiri) ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ದಿನೆ ದಿನೆ ಏರತೊಡಗಿದೆ. ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ತಾಪಮಾನ(Temperature) ದಾಖಲಾಗುತ್ತಿದೆ. ಈ ಬಾರಿ ಮಳೆ ಕೊರತೆಯಿಂದ ಭೀಕರ ಬರಗಾಲ ಆವರಿಸಿಕೊಂಡಿದ್ದು, ಇದೆ ಕಾರಣಕ್ಕೆ ತಾಪಮಾನ ಏರಿಕೆ ಆಗುತ್ತಿದೆ. ಅದರಲ್ಲೂ ಕಳೆದ ಒಂದು ವಾರದಿಂದ ಯಾದಗಿರಿ ಜಿಲ್ಲೆಯಲ್ಲಿ ದಿನಕೊಂದು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗುತ್ತಿದ್ದು, ಸದ್ಯ ನಿನ್ನೆ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಜನ ಮನೆಯಿಂದ ಹೊರ ಬರುವುದಕ್ಕೂ ಹೆದರುವಂತಾಗಿದೆ.
ಇನ್ನು ಹಳ್ಳಿಯಿಂದ ಸಿಟಿಗೆ ಬರುವ ಜನ ಕೆಲಸದ ಮಧ್ಯೆ ಎಲ್ಲಲ್ಲಿ ಗಿಡಮರಗಳು ಸಿಗುತ್ತೋ ಅಲ್ಲಿ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದ ಅಂತರದಲ್ಲೇ 36 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಬಂದು ತಲುಪಿದೆ. ಸೂರ್ಯನ ಪ್ರಖರತೆಗೆ ಜನ ಅಕ್ಷರಶ ಹೈರಾಣಾಗಿ ಹೋಗಿದ್ದಾರೆ. ಇದೆ ಕಾರಣಕ್ಕೆ ಮನೆಯಿಂದ ಕೆಲಸಕ್ಕೆ ಎಂದು ಹೊರ ಬರುವ ಜನ, ತಲೆ ಮೇಲೆ ಟಾವೆಲ್ ಅಥವಾ ಛತ್ರಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಜೊತೆಗೆ ದೇಹವನ್ನ ತಂಪಾಗಿಸಲು ಜನ ತಂಪು ಪಾನೀಯಗಳ ಮೊರ ಹೋಗುತ್ತಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ 41° ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ; ಹೈರಾಣಾದ ಗಣಿನಾಡಿನ ಜನ
ಯಾದಗಿರಿ ನಗರದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗುವುದ್ದಕ್ಕೆ ಪ್ರಮುಖ ಕಾರಣವೆಂದರೆ ಇಲ್ಲಿರುವ ಬೆಟ್ಟ. ನಗರ ಭಾಗದಲ್ಲಿರುವ ಇದೆ ಬೆಟ್ಟದ ರೀಪ್ಲೆಕ್ಟ್ ಹೆಚ್ಚು ಬಿಸಿಲಿಗೆ ಕಾರಣವಾಗಿದೆ. ಬೆಳಗ್ಗೆ 9 ಗಂಟೆಗೆ ಬಿಸಿಲು ಆರಂಭವಾಗುತ್ತದೆ. ಇನ್ನು ಸಂಜೆ 6 ಗಂಟೆಯಾದರೂ ಬಿಸಿಲು ಕಡಿಮೆಯಾಗುವುದಿಲ್ಲ. ಶಾಲಾ-ಕಾಲೇಜಿಗಳಿಗೆ ಮಕ್ಕಳು ಹೋಗುವುದು ಸಹ ಕಷ್ಟ ಆಗಿದೆ. ಮಕ್ಕಳು ತಲೆ ಮೇಲೆ ಬಟ್ಟೆ ಸೇರಿದಂತೆ ಇನ್ನಿತರ ಬಿಸಿಲಿನಿಂದ ರಕ್ಷಣೆ ಪಡೆಯಲು ವಸ್ತುಗಳ ಬಳಕೆ ಮಾಡುತ್ತಿದ್ದಾರೆ. ಇನ್ನು ಮನೆಯಿಂದ ಕೆಲಸ ಇದ್ದರೆ ಮಾತ್ರ ಹೊರ ಬರುವಂತಾಗಿದೆ. ಒಟ್ಟಿನಲ್ಲಿ ಬಿಸಿಲ ನಾಡು ಯಾದಗಿರಿ ಜಿಲ್ಲೆಯಲ್ಲಿ ದಿನೆ ದಿನೆ ತಾಪಮಾನ ಜಸ್ತಿಯಾಗುತ್ತಿರುವ ಕಾರಣಕ್ಕೆ ಈ ಬಾರಿ ದಾಖಲೆ ಪ್ರಮಾಣದ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ