ಕೌಟುಂಬಿಕ ಕಲಹಕ್ಕೆ ಯುವತಿ ಆತ್ಮಹತ್ಯೆ: ರೈತ ಮಹಿಳೆ ಎಂದು ಐದು ಲಕ್ಷ ರೂ ಪರಿಹಾರ ಪಡೆದ ಕುಟುಂಬಸ್ಥರು

ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಯುವತಿ ಹೆಸರಲ್ಲಿ ಕುಟುಂಬಸ್ಥರು ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಅಣ್ಣಂದಿರು ಮತ್ತು ಅತ್ತಿಗೆಯರ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಯುವತಿ ವಿಡಿಯೋ ಮಾಡಿದ್ದಾರೆ.

ಕೌಟುಂಬಿಕ ಕಲಹಕ್ಕೆ ಯುವತಿ ಆತ್ಮಹತ್ಯೆ: ರೈತ ಮಹಿಳೆ ಎಂದು ಐದು ಲಕ್ಷ ರೂ ಪರಿಹಾರ ಪಡೆದ ಕುಟುಂಬಸ್ಥರು
ಮೃತ ಯುವತಿ
Edited By:

Updated on: Jun 19, 2025 | 9:39 AM

ಯಾದಗಿರಿ, ಜೂನ್​ 19: ಕೌಟುಂಬಿಕ ಕಲಹ ಹಿನ್ನೆಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ (woman) ಹೆಸರಲ್ಲಿ ರೈತ ಮಹಿಳೆ ಆತ್ಮಹತ್ಯೆ (death) ಎಂದು ಕುಟುಂಬಸ್ಥರೇ ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೊಲಾಪುರ ತಾಂಡಾದಲ್ಲಿ ನಡೆದಿದೆ. 2023 ಅಕ್ಟೋಬರ್‌ 7 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಸಹಜ ಸಾವಲ್ಲ, ಹಿಂಸೆ ನೀಡಿ ಪ್ರಚೋದನೆಯಿಂದ ಸಾವಾಗಿದೆ ಎಂದು ಬಂಜಾರ ಮುಖಂಡರು ಆರೋಪಿಸಿದ್ದು, ತನಿಖೆ ಮಾಡಿ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಣ್ಣಂದಿರು ಮತ್ತು ಅತ್ತಿಗೆಯರ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ?

ಮೋನಾಬಾಯಿ ಪುನಿಮ್ ಚಂದ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಮೋನಾಬಾಯಿಗೆ ಸಂತೋಷ್, ಠಾಕೂರ್ ಮತ್ತು ಗೇನುಸಿಂಗ್ ಎಂಬ ಮೂವರು ಅಣ್ಣಂದಿರಿದ್ದಾರೆ. ಶೀಲಾಭಾಯಿ, ಪದ್ಮಾವತಿ‌ ಮತ್ತು ಸರಸ್ವತಿ ಎಂಬ ಮೂವರು ಅತ್ತಿಗೆಯರಿದ್ದಾರೆ. ಇವರೇ ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿಲ್ಲದೇ ಹೊಡೆದಿರುವ ಶಂಕೆ ವ್ಯಕ್ತವಾಗಿದ್ದು, ನಿರಂತರ ಕಿರಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅನುಮಾನಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತಗಳು ಹುಟ್ಟಿಕೊಂಡಿವೆ.

ಸಾಯುವ ಮುನ್ನ ವಿಡಿಯೋ ಮಾಡಿದ ಯುವತಿ

ಇನ್ನು ಸಾಯುವ ಮುನ್ನ ವಿಡಿಯೋ ಮಾಡಿರುವ ಮೋನಾಬಾಯಿ, ತಮ್ಮ ಬಂಜಾರ ಭಾಷೆಯಲ್ಲಿ ಎಲ್ಲವನ್ನು ವಿವರಿಸಿದ್ದಾರೆ. ‘ನಮ್ಮ ಅತ್ತಿಗೆ ನನ್ನ ಜೊತೆ ಭಯಂಕರ ಜಗಳ ಮಾಡಿದ್ದಾರೆ. ನಮ್ಮ ಅಣ್ಣ ನನಗೆ ಬಹಳ ಹೊಡೆದಿದ್ದಾರೆ. ನನ್ನಂತ ಪರಿಸ್ಥಿತಿ ಯಾರಿಗೂ ಬರಬಾರದು. ನಾನು ವಿಷ ಕುಡಿದು ಸಾಯುತ್ತಿದ್ದೇನೆ’ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ
ಬೆಂಗಳೂರು ಪೋಷಕರೇ ಎಚ್ಚರ! ನಿಮ್ಮ ಮಕ್ಕಳಿಗೂ ಹೀಗಾಗಬಹುದು?
ಪ್ರೀತಿಯ ನಾಟಕ, ಅಶ್ಲೀಲ ವಿಡಿಯೋ: ಆಂಧ್ರದ ಮಹಿಳೆಯ ವಂಚಿಸಿದವ ಅರೆಸ್ಟ್
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಗೋವಾಕ್ಕೆ ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ

ಇದನ್ನೂ ಓದಿ: ಪ್ರೀತಿಯ ನಾಟಕ, ಅಶ್ಲೀಲ ವಿಡಿಯೋ ರೆಕಾರ್ಡ್: ಆಂಧ್ರದ ಮಹಿಳೆಯ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಯುವಕನ ಬಂಧನ

ಇಲ್ಲಿ ಒಂದು ಗಮನಿಸಬೇಕಾದ ವಿಷಯವೆಂದರೆ, ಮೃತ ಯುವತಿ ಮೋನಾಬಾಯಿ ಮಾಡಿದ ವಿಡಿಯೋದಲ್ಲಿ ಯಾರ ಹೆಸರನ್ನು ಹೇಳಿಲ್ಲ. ಹೀಗಾಗಿ ಆಕೆಯೆ ಸಾವಿಗೆ ಕಾರಣ ಯಾರು ಮತ್ತು ಯಾಕೆ ಎಂಬುದು ತನಿಖೆ ಮೂಲಕ ಹೊರ ಬರಬೇಕಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡವರ ಹೆಸರಿನಲ್ಲಿ ಕುಟುಂಬಸ್ಥರು ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಕೂಡ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.