ಯಾದಗಿರಿ ರೆಡ್ ಕ್ರಾಸ್ ಸಂಸ್ಥೆ ವೈದ್ಯರು, ಸಿಬ್ಬಂದಿಗೆ 1 ವರ್ಷದಿಂದ ಸಂಬಳ ನೀಡಿಲ್ಲ! ಪರಿಸ್ಥಿತಿ ಏನಿದೆ?

| Updated By: ಸಾಧು ಶ್ರೀನಾಥ್​

Updated on: Dec 15, 2023 | 5:01 PM

ಯಾದಗಿರಿ ಸರ್ಕಾರಿ ರಕ್ತನಿಧಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ಸಿಬ್ಬಂದಿಗೆ ರೆಡ್ ಕ್ರಾಸ್ ಸಂಸ್ಥೆ 1 ವರ್ಷದಿಂದ ಸಂಬಳವನ್ನ ನೀಡಿಲ್ಲ. ಆದ್ರು ಸಂಬಳವಿಲ್ಲದೆ ವೈದ್ಯರು ಮತ್ತು ಸಿಬ್ಬಂದಿ ನಾಲ್ಕೈದು ತಿಂಗಳು ಕೆಲಸ ಮಾಡಿದ್ದಾರೆ. ಆದರೆ ಇತ್ತೀಚೆಗೆ ಕೆಲಸಕ್ಕೆ ಗೈರಾಗಿದ್ದಾರೆ. ಇದೆ ಕಾರಣಕ್ಕೆ ಆರೇಳು ತಿಂಗಳುಗಳಿಂದ ರಕ್ತನಿಧಿ ಕೇಂದ್ರ ಬಂದ್ ಆಗಿದೆ.

ಯಾದಗಿರಿ ರೆಡ್ ಕ್ರಾಸ್ ಸಂಸ್ಥೆ ವೈದ್ಯರು, ಸಿಬ್ಬಂದಿಗೆ 1 ವರ್ಷದಿಂದ ಸಂಬಳ ನೀಡಿಲ್ಲ! ಪರಿಸ್ಥಿತಿ ಏನಿದೆ?
ಯಾದಗಿರಿ ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿಗೆ 1 ವರ್ಷದಿಂದ ಸಂಬಳ ನೀಡಿಲ್ಲ
Follow us on

ಆ ಜಿಲ್ಲೆಯಲ್ಲಿ ಸರ್ಕಾರಿ ರಕ್ತನಿಧಿ ಕೇಂದ್ರ (blood bank) ಆರಂಭವಾಗಿ ವರ್ಷಗಳೇ ಕಳೆದಿವೆ. ಸಾಕಷ್ಟು ಸಂದರ್ಭದಲ್ಲಿ ಅದೆ ರಕ್ತನಿಧಿ ಕೇಂದ್ರದಿಂದ ಸಾಕಷ್ಟು ಜನರ ಪ್ರಾಣ ಉಳಿದಿದೆ.. ಆದ್ರೆ ಅದೆ ರಕ್ತನಿಧಿ ಕೇಂದ್ರಕ್ಕೆ ಈಗ ಬೀಗ ಬಿದ್ದಿದೆ.. ಸಿಬ್ಬಂದಿಗಳಿಗೆ ಸಂಬಳ ನೀಡದ ಕಾರಣಕ್ಕೆ ಸಿಬ್ಬಂದಿಯೇ ಕೇಂದ್ರಕ್ಕೆ ಬೀಗ ಹಾಕಿ ಕೆಲಸಕ್ಕೆ ಗೈರಾಗಿದ್ದಾರೆ. ಆರೇಳು ತಿಂಗಳುಗಳಿಂದ ಬ್ಲಡ್ ಬ್ಯಾಂಕ್ ಬಂದ್ ಆಗಿದ್ದಕ್ಕೆ ನಿತ್ಯ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಸ್ ಇಂತಹ ವಿದ್ಯಮಾನಗಳು ಯಾದಗಿರಿ (Yadgir) ನಗರದ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕಂಡುಬಂದಿದೆ. ಹೌದು ಯಾದಗಿರಿ ಜಿಲ್ಲಾ ಕೇಂದ್ರವಾದ ಕೆಲ ವರ್ಷಗಳ ಬಳಿಕ ಅಂದ್ರೆ ಕಳೆದ 10 ವರ್ಷದ ಹಿಂದೆ ಯಾದಗಿರಿ ಹಿಂದಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸರ್ಕಾರಿ ರಕ್ತನಿಧಿ ಕೇಂದ್ರ ಆರಂಭವಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ (Red Cross ) ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ನಡೆಯುತ್ತಿತ್ತು.

ತುರ್ತು ಸಂದರ್ಭದಲ್ಲಿ ಸಂಜೀವಿನಿಯಾಗಿದ್ದ ರಕ್ತನಿಧಿ ಕೇಂದ್ರ ಈಗ ಬಂದ್ ಆಗಿದೆ. ರಕ್ತನಿಧಿ ಕೇಂದ್ರ ಬಂದ್ ಆಗಿದ್ದಕ್ಕೆ ರೋಗಿಗಳು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಅದು ನಿನ್ನೆ ಮೊನ್ನೆಯಿಂದ ಅಲ್ಲ; ಬದಲಿಗೆ ಆರೇಳು ತಿಂಗಳುಗಳಿಂದ ರಕ್ತನಿಧಿ ಕೇಂದ್ರ ಬಂದ್ ಆಗಿದೆ.

ಇದಕ್ಕೆ ಕಾರಣ ಅಂದ್ರೆ ಈ ರಕ್ತನಿಧಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ರೆಡ್ ಕ್ರಾಸ್ ಸಂಸ್ಥೆ ಕಳೆದ ಒಂದು ವರ್ಷದಿಂದ ಸಂಬಳವನ್ನ ನೀಡಿಲ್ಲ. ಆದ್ರು ಸಂಬಳವಿಲ್ಲದೆ ವೈದ್ಯರು ಮತ್ತು ಸಿಬ್ಬಂದಿ ನಾಲ್ಕೈದು ತಿಂಗಳು ಕೆಲಸ ಮಾಡಿದ್ದಾರೆ. ಕೊನೆಗೆ ರೆಡ್ ಕ್ರಾಸ್ ಸಂಸ್ಥೆಯ ಸಂಬಳ ನೀಡದ ಕಾರಣಕ್ಕೆ ಕೆಲಸಕ್ಕೆ ಗೈರಾಗಿದ್ದಾರೆ. ಇದೆ ಕಾರಣಕ್ಕೆ ಆರೇಳು ತಿಂಗಳುಗಳಿಂದ ರಕ್ತನಿಧಿ ಕೇಂದ್ರ ಬಂದ್ ಆಗಿದೆ. ಅದರಲ್ಲೂ ಕೇಂದ್ರದ ಮುಖ್ಯ ಗೇಟ್ ಗೆ ಬೀಗ ಹಾಕಲಾಗಿದೆ. ಬ್ಲಡ್ ಬ್ಯಾಂಕ್ ಬಂದ್ ಆಗಿದ್ದಕ್ಕೆ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ..

ಇನ್ನು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವೈದ್ಯಕೀಯ ಕಾಲೇಜು ಕೂಡ ಆರಂಭವಾಗಿದೆ. ಇದರ ಜೊತೆಗೆ ಜಿಲ್ಲಾಸ್ಪತ್ರೆಯನ್ನ ಮೇಲ್ದರ್ಜೆಗೇರಿಸಿ ಹೊಸ ಕಟ್ಟಡವನ್ನೂ ಸಹ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಯಾದಗಿರಿ ಜಿಲ್ಲೆ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಕಾಂಕ್ಷಿ ಜಿಲ್ಲೆಗಳಲ್ಲಿ ಇದು ಕೂಡ ಒಂದಾಗಿದೆ.

ಆದ್ರು ಹೊಸ ಜಿಲ್ಲಾಸ್ರತ್ರೆಯ ಕಟ್ಟಡದಲ್ಲಿ ಬ್ಲಡ್ ಬ್ಯಾಂಕ್ ಇಲ್ಲದೆ ಇರೋದು ನಾಚಿಗೇಡಿನ ಸಂಗತಿಯಾಗಿದೆ. ಅಪಘಾತ, ಹೆರಿಗೆ ಅಥವ ಇನ್ನಿತರ ತುರ್ತು ಸಂದರ್ಭಗಳಲ್ಲಿ ಇಲ್ಲಿನ ರೋಗಿಗಳಲ್ಲಿ ಕಂಡು ಬರುವ ರಕ್ತದ ಕೊರತೆ ನೀಗಿಸಬೇಕೆಂದರೆ ನೆರೆಯ ಕಲಬುರ್ಗಿ, ರಾಯಚೂರು, ತೆಲಂಗಾಣದ ಹೈದ್ರಾಬಾದ್ ಅಥವ ಮಹಾರಾಷ್ಟ್ರದ ಸೋಲ್ಲಾಪುರಕ್ಕೆ ಹೋಗುವಂತ ಪರಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಜಿಲ್ಲೆಯ ಎರಡು ಖಾಸಗಿ ಕೇಂದ್ರಗಳಲ್ಲಿ ರಕ್ತ ಸಿಗುತ್ತೆ, ಆದ್ರೆ ಒಂದು ಬ್ಯಾಕ್ ರಕ್ತಕ್ಕೆ ಬಡ ರೋಗಿಗಳು 2500-3000 ಸಾವಿರ ಕೊಟ್ಟು ಖರೀದಿ ಮಾಡಬೇಕಿದೆ. ಆದ್ರೆ ಬಡ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುವುದರಿಂದ ರಕ್ತದ ಸಮಸ್ಯೆ ಅಂತ ಗೊತ್ತಾದ್ರೆ ಸಾಕು ವೈದ್ಯರು ಕಲಬುರ್ಗಿ ಹಾಗೂ ರಾಯಚೂರಿಗೆ ರೋಗಿಗಳನ್ನು ಕಳಿಸುತ್ತಿದ್ದಾರೆ.

Also Read: World Red Cross Day 2022 – ವಿಶ್ವ ರೆಡ್​ ಕ್ರಾಸ್ ದಿನ; ಏನಿದರ ಇತಿಹಾಸ ಮತ್ತು ಮಹತ್ವ?

ರಕ್ತ ಹೀನತೆ, ಅಪೌಷ್ಟಿಕತೆಗೆ ಸಾಕ್ಷಿಯಾಗಿರುವ ಜಿಲ್ಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಕಾಡುತ್ತಿರುವುದು ವಿಪರ್ಯಾಸ. 2016-17 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 98 ಲಕ್ಷ ರೂ. ವೆಚ್ಚದಲ್ಲಿ ಸೂಸಜ್ಜಿತವಾದ ರಕ್ತ ನಿಧಿ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದು, ರಕ್ತನಿಧಿ ಕೇಂದ್ರದಲ್ಲಿಅತ್ಯಾಧುನಿಕ ಉಪಕರಣಗಳು ಮೂಲೆ ಗುಂಪಾಗಿವೆ. ಆದ್ರೆ ಈ ಬಗ್ಗೆ ಜಿಲ್ಲಾ ಸರ್ಜನ್ ಕೇಳಿದ್ರೆ ರೆಡ್ ಕ್ರಾಸ್ ಸಂಸ್ಥೆಯವರು ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಸಂಬಳ ನೀಡದ್ದಕ್ಕೆ ರಕ್ತನಿಧಿ ಕೇಂದ್ರ ಬಂದ್ ಆಗಿದೆ. ಆದ್ರೆ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನ ಮಾಡಲಾಗುತ್ತಿದೆ ಅಂತಾರೆ.

ಒಟ್ನಲ್ಲಿ ಅಪಘಾತ ಹಾಗೂ ಹೆರಿಗೆ ಸಂದರ್ಭದಲ್ಲಿ ತುರ್ತಾಗಿ ಬೇಕಿರುವ ರಕ್ತ ಯಾದಗಿರಿ ಜಿಲ್ಲೆಯಲ್ಲಿ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಡಳಿತ ರಕ್ತನಿಧಿ ಕೇಂದ್ರವನ್ನ ಆರಂಭಿಸಿ ರೋಗಿಗಳಿಗೆ ಆಗ್ತಾಯಿರುವ ತೊಂದರೆಯನ್ನ ನೀಗಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ