ಕನಸ್ಸಿನಲ್ಲಿ ಕಾಡಿದ ಆಂಜನೇಯ್ಯ: ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ ಕುಟುಂಬ
ಆ ವ್ಯಕ್ತಿಗೆ ಹುಷಾರು ಇರಲಿಲ್ವಂತೆ ಇದೆ ಕಾರಣಕ್ಕೆ ಪರಿಚಯಸ್ಥರ ಮೂಲಕ ಚರ್ಚೆಗೆ ಹೋಗಿದ್ದ. ಸ್ವಲ್ವ ಆರೋಗ್ಯ ಸುಧಾರಿಸುತ್ತಿದ್ದ ಹಾಗೆ ಹಿಂದೂ ಧರ್ಮವನ್ನ ತ್ಯಜಿಸಿ ಇಡೀ ಕುಟುಂಬದ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನ ಸ್ವೀಕಾರ ಮಾಡಿದ್ದ. ಆದ್ರೆ ಹಿಂದೂ ಧರ್ಮವನ್ನ ಬಿಟ್ಟು ಹೋಗಿದ್ದಕ್ಕೆ ಕನಸಲ್ಲಿ ಆಂಜನೇಯ್ಯ ಸ್ವಾಮೀ ಕಾಡಲಾರಂಭಿಸಿದ್ದಾನಂತೆ. ಈ ಕಾರಣಕ್ಕೆ ಇದೀಗ ಕುಟುಂಬ ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದೆ. ಅಷ್ಟಕ್ಕೂ ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ಯಾಕೆ? ಮತ್ತೆ ವಾಪಸ್ ಹಿಂದೂ ಧರ್ಮಕ್ಕೆ ಮರಳಿದ್ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಯಾದಗಿರಿ, (ಜೂನ್ 20): ಹಿಂದೂ ಧರ್ಮ (hindu religion)ತ್ಯಜಿಸಿ ಕ್ರಿಶ್ಚಿಯನ್ (Christian)ಧರ್ಮ ಸ್ವೀಕಾರ ಮಾಡಿದ್ದ ಯಾದಗಿರಿಯ (Yadgir) ಗಿರಿ ನಗರ ಬಡಾವಣೆ ವೆಂಕಟೇಶ ಎನ್ನುವರ ಕುಟುಂಬ ಇದೀಗ ಘರ್ ವಾಪ್ಸಿ ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದವನು ಚೇತರಿಸಿಕೊಂಡ ಕೂಡಲೇ ಅದೇನಾಯ್ತೋ ಏನೋ ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ದ. ಆದ್ರೆ, ಹಿಂದೂ ಧರ್ಮ ಬಿಟ್ಟು ಹೋಗಿದ್ದಕ್ಕೆ ಕನಸಲ್ಲಿ ಆಂಜನೇಯ್ಯ ಬರುತ್ತಿದ್ದನಂತೆ. ಇದರಿಂದ ತಡೆಯಲಾಗದೇ ಕುಟುಂಬ ಸಮೇತ ವಾಪಸ್ ಹಿಂದೂ ಧರ್ಮಕ್ಕೆ ಮರಳಿದೆ. ಸ್ವಾಮೀಜಿ ಮೂಲಕ ಪೂಜೆ ಮಾಡಿ ರುದ್ರಾಕ್ಷಿ ಧಾರಣೆ ಮಾಡಿಸಿಕೊಂಡು ಘರ್ ವಾಪ್ಸಿ ಮಾಡಿದೆ.
ಯಾದಗಿರಿ ನಗರದ ಗಿರಿ ನಗರ ಬಡಾವಣೆಯಲ್ಲಿ ಕೇವಲ ಅಲೆಮಾರಿ ಬುಡುಗ ಜಂಗಮ ಸಮುದಾಯದ ಜನ ವಾಸ ಮಾಡುತ್ತಾರೆ. ಈ ಬಡಾವಣೆಯ ಸಾಕಷ್ಟು ಕುಟುಂಬಗಳು ನಾನಾ ಕಾರಣದಿಂದ ಹಿಂದೂ ಧರ್ಮವನ್ನ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದಾರೆ. ಅದರಂತೆ ಇದೆ ಬಡಾವಣೆಯ ವೆಂಕಟೇಶ ಕುಟುಂಬ ಕೂಡ ಕಳೆದ ನಾಲ್ಕು ವರ್ಷಗಳ ಹಿಂದೆ ಹಿಂದೂ ಧರ್ಮಕ್ಕೆ ಗೂಡ್ ಬೈ ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಇಡೀ ಕುಟುಂಬ ಸಮೇತವಾಗಿ ಸೇರಿದ್ದ. ತನ್ನ ಜೊತೆಗೆ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕರೆದುಕೊಂಡು ಹೋಗಿ ಕ್ರಿಶ್ಚಿಯನ್ ಧರ್ಮವನ್ನ ಸ್ವೀಕಾರ ಮಾಡಿದ್ದ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಮೇಲೆ ಪ್ರತಿ ವಾರ ಚರ್ಚ್ ಗೆ ಹೋಗುವುದು ಯೇಸು ಸ್ವಾಮಿಯ ಪ್ರಾರ್ಥನೆ ಮಾಡುವುದು ಕ್ರಿಸ್ಮಸ್ ಹಬ್ಬವನ್ನ ಆಚರಣೆ ಮಾಡುವುದು ಹೀಗೆ ಕ್ರಿಶ್ಚಿಯನ್ ಧರ್ಮದ ಪ್ರತಿಯೊಂದು ನಿಯಮಗಳನ್ನ ಪಾಲನೆ ಮಾಡುತ್ತಿದ್ದ.
ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ಯಾಕೆ?
ಈ ವೆಂಕಟೇಶ ಹಾಗೂ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನ ಸ್ವೀಕಾರ ಮಾಡೋಕೆ ಬಲವಾದ ಕಾರಣವಿದೆ.ಕಳೆದ ನಾಲ್ಕು ವರ್ಷಗಳ ಹಿಂದೆ ಈ ವೆಂಕಟೇಶ್ ಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದೆ ಕಾರಣಕ್ಕೆ ಪರಿಚಯಸ್ಥರ ಮೂಲಕ ಆಂಧ್ರದ ಅನಂತಪುರದ ಗುತ್ತಿ ಚರ್ಚೆಗೆ ಹೋಗಿದ್ದ. ಇದಾದ ಬಳಿಕ ವೆಂಕಟೇಶ ಆರೋಗ್ಯದಲ್ಲಿ ಸುಧಾರಣೆ ಆಗಿದೆ. ಹೀಗಾಗಿ ಯೇಸು ಸ್ವಾಮಿಯಿಂದಲೇ ನನಗೆ ಆರೋಗ್ಯ ಸುಧಾರಣೆ ಆಗಿದೆ ಎಂದು ನಂಬಿಕೆಯಿಂದ ಹಿಂದೂ ಧರ್ಮವನ್ನ ತ್ಯಜಿಸಿ ಕುಟುಂಬ ಸಮೇತವಾಗಿ ಕ್ರಿಶ್ಚಿಯನ್ ಧರ್ಮವನ್ನ ಸ್ವೀಕಾರ ಮಾಡಿದ್ದ.
ಕನಸ್ಸಿನಲ್ಲಿ ಆಂಜನೇಯ್ಯ

ಇನ್ನು ನಾಲ್ಕು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮವನ್ನ ಸ್ವೀಕಾರ ಮಾಡಿದ ಬಳಿಕ ಕ್ರಿಶ್ಚಿಯನ್ ಧರ್ಮವನ್ನ ಪಾಲನೆ ಮಾಡಿಕೊಂಡೆ ಬರುತ್ತಿದ್ದ. ಆದ್ರೆ ಕಳೆದ ಒಂದು ವರ್ಷದಿಂದ ಯಾಕೋ ಹಿಂದೂ ಧರ್ಮವನ್ನ ಬಿಡಬಾರದಿತ್ತು ಅಂತ ಅನ್ಸೋಕೆ ಶುರು ಮಾಡಿತಂತೆ. ಇದರ ಜೊತೆಗೆ ಹಿಂದೂ ಧರ್ಮವನ್ನ ಬಿಟ್ಟು ಹೋಗಿದ್ದಕ್ಕೆ ನಿತ್ಯ ಕನಸಲ್ಲಿ ಆಂಜನೇಯ್ಯ ಸ್ವಾಮಿ ಬರುತ್ತಿದ್ದನಂತೆ. ಇದರ ಜೊತೆಗೆ ಮನೆಯಲ್ಲಿ ಯಾವುದು ಕೂಡ ಸರಿಯಾಗಿ ನಡೆಯಿತ್ತಿರಲಿಲ್ವಂತೆ. ಅಲ್ಲದೇ ಮನೆಯಲ್ಲಿ ನಯಾ ಪೈಸೆ ಉಳಿತ್ತಿರಲಿಲ್ವಂತೆ. ಹೀಗಾಗಿ ಹೇಗಾದ್ರು ಮಾಡಿ ವಾಪಸ್ ಹಿಂದೂ ಧರ್ಮಕ್ಕೆ ಬರಬೇಕು ಎಂದು ವೆಂಕಟೇಶ್ ಕುಟುಂಬಕ್ಕೆ ಅನ್ಸಿದೆ.
ಹಿಂದೂ ಧರ್ಮಕ್ಕೆ ಘರ್ ವಾಪಸಿ

ಘರ್ ವಾಪಸಿ ಮಾಡಲು ಅಲೆಮಾರಿ ಬುಡುಗ ಜಂಗಮ ಸಮುದಾಯದ ಮುಖಂಡರ ಮುಂದೆ ಆಗಿರುವ ಕಷ್ಟವನ್ನ ವೆಂಕಟೇಶ್ ಹೇಳಿಕೊಂಡಿದ್ದಾನೆ. ಹೀಗಾಗಿ ಸಮುದಾಯದ ಮುಖಂಡರು ಇಂದು ಭಜರಂಗದಳದ ಮುಖಂಡರು ಹಾಗೂ ಸಮುದಾಯದ ಸಾಯಿಬಾಬ ಸ್ವಾಮಿ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಸೇರಿದ್ದಾನೆ. ತನ್ನ ಪತ್ನಿ ಹಾಗೂ ಮಕ್ಕಳೊಂದಿದೆ ಹಿಂದೂ ಧರ್ಮಕ್ಕೆ ಘರ್ ವಾಪಸಿ ಆಗಿದ್ದಾನೆ. ಸ್ವಾಮಿಜಿ ದಂಪತಿ ಹಾಗೂ ಮಕ್ಕಳ ಹಣೆಗೆ ವಿಭೂತಿ ಹಚ್ಚಿ ಕೊರಳಿಗೆ ರುದ್ರಾಕ್ಷಿ ಧಾರಣೆ ಮಾಡಿ ಧರ್ಮಕ್ಕೆ ಸ್ವೀಕಾರ ಮಾಡಿದ್ದಾರೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಜಂಗಮರ ಪಾದಪೂಜೆಯನ್ನ ನೆರವೇರಿಸಿ ಹಿಂದೂ ಧರ್ಮ ಪಾಲನೆಗೆ ಮುಂದಾಗಿದ್ದಾರೆ.ಇದರಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಧರ್ಮವನ್ನ ಬಿಟ್ಟು ಹೋಗಿದ್ದ ವೆಂಕಟೇಶ ಕುಟುಂಬ ಘರ್ ವಾಪಸಿ ಮಾಡಿದೆ.
ಒಟ್ಟಿನಲ್ಲಿ ಯೇಸು ಕ್ರಿಸ್ತ್ ನ ಮೇಲಿನ ನಂಬಿಕೆಯೋ ಮೂಢನಂಬಿಕೆಯಿಂದಾನೋ ಗೊತ್ತಿಲ್ಲ ಕ್ರಿಶ್ಚನ್ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬ ಇವತ್ತು ಹಿಂದೂ ಧರ್ಮಕ್ಕೆ ಘರ್ ವಾಪಸ್ಸಿ ಮಾಡಿದ್ದು, ಇಂದಿನಿಂದ ಮತ್ತೆ ತಮ್ಮ ಮಾತೃ ಧರ್ಮಕ್ಕೆ ಮರಳಿ ಹಿಂದೂ ಸಂಪ್ರಾಯಗಳನ್ನ ಪಾಲನೆ ಮಾಡುವುದಾಗಿ ಕುಟುಂಬ ಹೇಳಿಕೆ.



