ಯಾದಗಿರಿ: ಅಲಾಯಿ ದೇವರು ಹೋಗುವ ಮಾರ್ಗವಾಗಿತ್ತು ಎಂದು ಕಾಂಪೌಂಡ್ ಕೆಡವಿದ ಜನ, ದೂರು ದಾಖಲು

ಮೈಯಲ್ಲಿ ದೇವರು ಬಂದಿದೆ ಎಂದು ನಿರ್ಮಾಣ ಹಂತದ ಕಾಂಪೌಂಡ್ ಗೋಡೆ ಕೆಡವಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಮೊಹರಂ ದಿನ ನಡೆದಿದೆ. ಘಟನೆ ನಂತರ ತಪ್ಪು ಒಪ್ಪಿಕೊಂಡ ಗೊಮ್ಮಟ ಹೊತ್ತುಕೊಂಡಿದ್ದ ವ್ಯಕ್ತಿ ಕಾಂಪೌಂಡ್ ಮರುನಿರ್ಮಿಸಿದ್ದಾರೆ.

ಯಾದಗಿರಿ: ಅಲಾಯಿ ದೇವರು ಹೋಗುವ ಮಾರ್ಗವಾಗಿತ್ತು ಎಂದು ಕಾಂಪೌಂಡ್ ಕೆಡವಿದ ಜನ, ದೂರು ದಾಖಲು
ಮೊಹರಂ ದಿನ ಅಲಾಯಿ ದೇವರ ಗುಮ್ಮಟದ ಮೆರವಣಿಗೆ ವೇಳೆ ನಿರ್ಮಾಣ ಹಂತರ ಕಾಂಪೌಂಡ್ ಕೆಡವಿದ ಜನ
Follow us
ಅಮೀನ್​ ಸಾಬ್​
| Updated By: Rakesh Nayak Manchi

Updated on: Aug 01, 2023 | 6:03 PM

ಯಾದಗಿರಿ, ಆಗಸ್ಟ್ 1: ಮೈಯಲ್ಲಿ ದೇವರು ಬಂದಿದೆ ಎಂದು ನಿರ್ಮಾಣ ಹಂತದ ಕಾಂಪೌಂಡ್ ಗೋಡೆ ಕೆಡವಿದ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಉಳ್ಳೇಸುಗುರ ಗ್ರಾಮದಲ್ಲಿ ಮೊಹರಂ (Muharram) ದಿನ ನಡೆದಿದೆ. ಅಲಾಯಿ ದೇವರ ಗುಮ್ಮಟದಿಂದ ಗುದ್ದಿ ಗೋಡೆ ಕೆಡವಿ ಹಾಕಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಗ್ರಾಮದ ದೇವೇಂದ್ರಪ್ಪ ಎಂಬವರು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದರು. ಈ ಗೋಡೆಯನ್ನು ಮೊಹರಂ ದಿನ ನಡೆದ ಅಲಾಯಿ ದೇವರ ಗುಮ್ಮಟದ ಮೆರವಣಿಗೆ ಸಮಯದಲ್ಲಿ ಕೆಡವಲಾಗಿದೆ. ದೇವರ ಹೋಗುವ ಮಾರ್ಗ ಹೀಗೆ ಇತ್ತು ಅಂತ ಕೆಡವಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊಪ್ಪಳ: ಮೊಹರಂ ಹಬ್ಬದ ಮೆರವಣಿಗೆ ವೇಳೆ ಅಮಾನುಷ ಕೃತ್ಯ; ಮಹಿಳೆ ಮೇಲೆ ಹಲ್ಲೆ, ಮಾನಭಂಗಕ್ಕೆ ಯತ್ನ

ಘಟನೆ ಬಳಿಕ ವಡಗೇರ ಪೊಲೀಸ್ ಠಾಣೆಗೆ ಗುಮ್ಮಟ ಹೊತ್ತಿದ್ದ ಇಬ್ರಾಹಿಂ ವಿರುದ್ಧ ದೂರು ದೇವೇಂದ್ರಪ್ಪ ಅವರು ದೂರು ನೀಡಿದ್ದಾರೆ. ಬಳಿಕ ತಪ್ಪು ಒಪ್ಪಿಕೊಂಡು ಇಬ್ರಾಹಿಂ, ಕಾಂಪೌಂಡ್ ಗೋಡೆಯನ್ನು ಮರು ನಿರ್ಮಿಸಿ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ