10 ತಿಂಗಳಲ್ಲೇ 7 ಸಾವಿರ ಟನ್ ಮೀನು ಉತ್ಪಾದಿಸಿ ನಂ 1 ಸ್ಥಾನ ಪಡೆದ ಬಿಸಿಲ ಜಿಲ್ಲೆ ಯಾದಗಿರಿ
ಕೃಷ್ಣೆ, ಭೀಮೆ ಸೇರಿದಂತೆ ಎರಡು ದೊಡ್ಡ ನದಿಗಳನ್ನ ಒಳಗೊಡಿರೋ ಯಾದಗಿರಿ ಜಿಲ್ಲೆಯ ರೈತರು ಭತ್ತ, ಹತ್ತಿ, ಮೆಕ್ಕೇಜೋಳ ಅಂತಾ ಕೃಷಿ ಮಾಡಿಕೊಂಡಿದ್ರು. ಆದ್ರೀಗ ಜಿಲ್ಲೆಯ ನೂರಾರು ರೈತರು ಭತ್ತ ನಾಟಿಗೆ ಬ್ರೇಕ್ ಹಾಕಿ ಮೀನು ಉತ್ಪಾದನೆ ಮೊರೆ ಹೋಗಿದ್ದಾರೆ.
ಯಾದಗಿರಿ: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಆಗಿರಲಿ, ಪಿಯುಸಿ ಫಲಿತಾಂಶವೇ ಆಗಿರಲಿ ಅದೆಷ್ಟೋ ಬಾರಿ ಆ ಜಿಲ್ಲೆ ಕೊನೇ ಸ್ಥಾನ ಪಡೆದಿತ್ತು. ಜತೆಗೆ ಹಿಂದುಳಿದ ಜಿಲ್ಲೆ ಅನ್ನೋ ಹಣೆ ಪಟ್ಟಿ ಬೇರೆ. ಆದ್ರೆ ಅದೇ ಜಿಲ್ಲೆಯಲ್ಲಿ ಈಗ ಮೌನಕ್ರಾಂತಿಯಾಗಿದೆ. ಮೀನು ಉತ್ಪಾದನೆಯಲ್ಲಿ ನಂಬರ್ 1 ಸ್ಥಾನ ಪಡೆದಿದೆ.
ಯಾದಗಿರಿ ಬಿಸಿಲ ಜಿಲ್ಲೆ. ಹಿಂದುಳಿದ ಜಿಲ್ಲೆ. ಆದ್ರೆ ಅದೇ ಜಿಲ್ಲೆಯಲ್ಲಿ ಈಗ ಹೊಸ ಕ್ರಾಂತಿಯಾಗಿದೆ. ಸೀಗಡಿ ಮೀನು, ಮುರೆಲ್, ಕಟ್ಲಾ, ರೋಹಾ, ತಿಲಾಪಿಯಾ ತಳಿಯ ಮೀನುಗಳು, ಪೆಂಗಾಸಿಯಸ್, ಕಾಮನ್ ಕಾರ್ಟ್ ತಳಿ ಮೀನುಗಳ ಉತ್ಪಾದನೆಯಲ್ಲಿ ಹೆಸರು ಮಾಡಿದೆ. ಯಾದಗಿರಿಯಲ್ಲಿ ಮೀನು ಉತ್ಪಾದನೆಯ ಕ್ರಾಂತಿಯೇ ಆಗಿದೆ.
ಕೃಷ್ಣೆ, ಭೀಮೆ ಸೇರಿದಂತೆ ಎರಡು ದೊಡ್ಡ ನದಿಗಳನ್ನ ಒಳಗೊಡಿರೋ ಯಾದಗಿರಿ ಜಿಲ್ಲೆಯ ರೈತರು ಭತ್ತ, ಹತ್ತಿ, ಮೆಕ್ಕೇಜೋಳ ಅಂತಾ ಕೃಷಿ ಮಾಡಿಕೊಂಡಿದ್ರು. ಆದ್ರೀಗ ಜಿಲ್ಲೆಯ ನೂರಾರು ರೈತರು ಭತ್ತ ನಾಟಿಗೆ ಬ್ರೇಕ್ ಹಾಕಿ ಮೀನು ಉತ್ಪಾದನೆ ಮೊರೆ ಹೋಗಿದ್ದಾರೆ. ಜಿಲ್ಲೆಯ ಹಲವರು ಮೀನು ಉತ್ಪಾದನೆ ಮೊರೆ ಹೋಗ್ತಿದ್ದಂತೆ ಯಾದಗಿರಿ ಜಿಲ್ಲೆ ರಾಜ್ಯದಲ್ಲೇ ಮೀನು ಉತ್ಪಾದನೆಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಕಳೆದ 10 ತಿಂಗಳಲ್ಲಿ ಬರೋಬ್ಬರಿ 7,416 ಟನ್ ಮೀನು ಉತ್ಪಾದನೆ ಮಾಡಲಾಗಿದೆ. ಜಿಲ್ಲೆಯಲ್ಲಿ 100 ಎಕರೆಗಿಂತ ಕಡಿಮೆ ಇರೋ ಬರೋಬ್ಬರಿ 250 ಕೆರೆಗಳಿವೆ. ಇದರ ಜತೆಗೆ 100 ಎಕರೆಗಿಂತ ಹೆಚ್ಚಿರುವ 78 ಕೆರೆಗಳಿವೆ. ಇಷ್ಟೇ ಯಾಕೆ ಹತ್ತಿಕುಣಿ ಹಾಗೂ ಸೌದಾಗಾರನಂತ ಮೀನಿ ಡ್ಯಾಂ ಗಳು ಹಾಗೂ ಕೃಷ್ಣ ಮತ್ತು ಭೀಮಾ ನದಿಗಳು ಇರೋದ್ದರಿಂದ ಮೀನು ಉತ್ಪಾದನೆಗೆ ಹೇರಳವಾದ ಅವಕಾಶವಿದೆ. ಇದನ್ನೇ ಸದುಪಯೋಗ ಪಡಿಸಿಕೊಂಡು ನಂಬರ್ 1 ಸ್ಥಾನ ಪಡೆದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ವಿಶೇಷವಾಗಿ ಬಹು ಬೇಡಿಕೆ ಇರುವ ಸಿಗಡಿ ಮೀನುಗಳನ್ನ ಸಾಕಾಣಿಕೆ ಮಾಡಲಾಗುತ್ತಿದೆ. 500 ಎಕರೆ ಪ್ರದೇಶದಲ್ಲಿ ಎಲ್ಲಾ ರೀತಿಯ ಮೀನುಗಳನ್ನ ಸಾಕಲಾಗುತ್ತಿದೆ. ವಿಷ್ಯ ಅಂದ್ರೆ ಇಲ್ಲಿ ಉತ್ಪಾದನೆಯಾಗೋ ಮೀನುಗಳು ಹೊರ ದೇಶಕ್ಕೂ ರಫ್ತಾಗ್ತ್ತಿವೆ. ಹೈದ್ರಾಬಾದ್ ಮತ್ತು ಮಂಗಳೂರು, ಗೋವಾ ಮೂಲಕ ಅಮೆರಿಕ, ಇಂಗ್ಲೆಂಡ್ ಹಾಗೂ ಯೂರೋಪ್ ದೇಶಗಳಿಗೆ ರವಾನೆಯಾಗ್ತಿವೆ. ಜಿಲ್ಲೆಯಲ್ಲಿ ಸಿಗುವ ಮುರೆಲ್ ಮೀನು ಮಾರಾಟಕ್ಕೆ ಹೈದ್ರಾಬಾದ್ ನಲ್ಲಿ ಅವಕಾಶವಿದೆ. ಜೊತೆಗೆ ರಾಜ್ಯದ ಶಿವಮೊಗ್ಗ,ಬಳ್ಳಾರಿ ಮತ್ತು ದಾವಣಗೆರೆಯಲ್ಲೂ ಸಹ ಹೆಚ್ಚು ಮಾರಾಟ ಮಾಡಲಾಗುತ್ತೆ.
ಒಟ್ನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ರಿಸಲ್ಟ್‌ನಲ್ಲಿ ಕೊನೇ ಸ್ಥಾನ ಪಡೆದು ನಿರಾಸೆ ಅನುಭವಿಸುತ್ತಿದ್ದ ಯಾದಗಿಗಿ ಮೀನು ಉತ್ಪಾದನೆಯಲ್ಲಿ ಕ್ರಾಂತಿ ಮಾಡಿ ನಂಬರ್ 1 ಸ್ಥಾನ ಪಡೆದಿದೆ.
ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ
ಇದನ್ನೂ ಓದಿ: ನಾಡದೋಣಿ ಮೀನುಗಾರರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದನೆ; ಕರ್ನಾಟಕಕ್ಕೆ 3,540 ಕೆಎಲ್ ಹೆಚ್ಚುವರಿ ಸೀಮೆಎಣ್ಣೆ ಬಿಡುಗಡೆ