ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳು ಅಮಾನತು

ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ.

ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳು ಅಮಾನತು
ಜಿಲ್ಲಾಡಳಿತ ಭವನ ಯಾದಗಿರಿ
Edited By: ವಿವೇಕ ಬಿರಾದಾರ

Updated on: Oct 31, 2023 | 8:59 AM

ಯದಾಗಿರಿ ಅ.31: ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆ(Department of Revenue) ಎಂಟು ಜನ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದಾರೆ. ಶ್ರೀಮಂತ, ಬಸವರಾಜ್, ಇಮ್ಯಾನುವೆಲ್, ಸಿದ್ದಲಿಂಗಪ್ಪ ಅಮಾನತಾದ ಗ್ರಾಮ ಆಡಳಿತಾಧಿಕಾರಿಗಳು. ಗಿರೀಶ್ ರಾಯಕೋಟಿ ಹಾಗೂ ಬಸವರಾಜ್ ಬಿದಾರಾರ ಅಮಾನತಾದ ಕಂದಾಯ ನಿರೀಕ್ಷಕರು. ಅಲ್ಲದೆ ಯಾದಗಿರಿ (Yadgiri) ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್​ಡಿಎ ಸೂಗುರೇಶ್ ಹಾಗೂ ಎಫ್​ಡಿಎ ಮಹೇಶ್ ಸಹ ಅಮಾನತುಗೊಂಡಿದ್ದಾರೆ.

ಹೆಚ್ಚಿನ ಮಾಹಿತಿ ಅಪ್ಡೇಟ್​ ಮಾಡಲಾಗುವುದು

Published On - 8:56 am, Tue, 31 October 23

Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
Follow Us