ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು
ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ.
ಯಾದಗಿರಿ: ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಗುರುಮಠಕಲ್ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ. ಗಾಜರಕೋಟ ಗ್ರಾಮದ ಮೋನಮ್ಮ (25) ಭಾನು (4) ಶ್ರೀನಿವಾಸ್ (2), ಎಸ್ ಹೊಸಹಳ್ಳಿ ಗ್ರಾಮ ಸಾಬಣ್ಣ (17) ಮೃತ ದುರ್ದೈವಿಗಳು. ಓರ್ವ ಯುವಕನಿಗೆ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ಹೋಗುವಾಗ ಸುರಿದ ಮಳೆಯಿಂದಾಗಿ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ನೇಹಿತರ ಜೊತೆ ಸ್ವಿಮ್ಮಿಂಗ್ ಪೂಲ್ಗೆ ಈಜಲು ಹೋಗಿದ್ದ ಯುವಕ ಸಾವು
ಶಿವಮೊಗ್ಗ: ಸ್ನೇಹಿತರ ಜತೆ ಸ್ವಿಮ್ಮಿಂಗ್ಪೂಲ್ಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಶಕ್ತಿಧಾಮ ಲೇಔಟ್ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆದಿದೆ. ರಾಕೇಶ್ (18) ಮೃತ ಯುವಕ. ಶಿವಮೊಗ್ಗದ ಜೊಸೆಫ್ ನಗರದ ನಿವಾಸಿ ಕುಮಾರ್ ಎಂಬುವರ ಪುತ್ರನಾಗಿರುವ ರಾಕೇಶ್, ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದನು. ರಾಕೇಶ್ ಇಂದು ಸ್ನೇಹಿತರೊಂದಿಗೆ ಶಿವಮೊಗ್ಗ ಹೊರವಲಯದ ಗಾಡಿಕೊಪ್ಪ ಸಮೀಪದ ಶಕ್ತಿಧಾಮ ಲೇಔಟ್ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಈಜಲು ತೆರಳಿದ್ದಾನೆ. ಆದರೆ ರಾಕೇಶ್ಗೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಪತಿ
ದಕ್ಷಿಣ ಕನ್ನಡ : ಪತಿ – ಪತ್ನಿ ನಡುವೆ ವಿರಸ ಮೂಡಿದ್ದು, ಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಾಥಪುರ ನಿವಾಸಿ ಸುನೀಲ್ (28) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುನೀಲ್ ವಿಷ ಕುಡಿಯುವುದನ್ನು ವಿಡಿಯೋ ಮಾಡಿ ಮನೆಯವರಿಗೆ ಕಳುಹಿಸಿದ್ದಾನೆ. ಈ ವಿಡಿಯೋವನ್ನು ಕುಟುಂಬಸ್ಥರು ಧರ್ಮಸ್ಥಳ ಪೊಲೀಸರಿಗೆ ರವಾನಿಸಿದ್ದಾರೆ. ವೀಡಿಯೋ ನೋಡಿ ಕೂಡಲೆ ಜಾಗ ಪತ್ತೆಹಚ್ಚಿ ಸುನೀಲ್ನನ್ನು ರಕ್ಷಿಸಿದ್ದಾರೆ. ತಕ್ಷಣ ಸುನೀಲ್ ನನ್ನು ಉಜರೆಯ ಖಾಸಗಿ ಆಸ್ಪತ್ರೆಗೆ ದಾಳಿಸಿದ್ದಾರೆ. ಸುನೀಲ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Wed, 28 September 22