Yash: ಹಾಸನದಲ್ಲಿ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣ ವಿವಾದ, ನಟ ಯಶ್ ಹೇಳೀದ್ದೇನು?

| Updated By: Digi Tech Desk

Updated on: Mar 10, 2021 | 11:43 AM

Yash Land Dispute: ಯಾರೂ ಭಯ ಪಡುವ ಅಗತ್ಯವಿಲ್ಲ. ನನಗೂ ಇಲ್ಲಿ ಮಾಹಿತಿಯ ಕೊರತೆ ಇದೆ. ಯಶ್ ಇಂದ ಯಾವುದೇ ಮೋಸ ಆಗಲ್ಲ. ನನ್ನ ಮೇಲೆ ನಂಬಿಕೆ ಇರ್ಲಿ, ನನಗೆ ದುರಾಸೆ ಇಲ್ಲ ಎಂದು ಯಶ್ ಭರವಸೆ ನೀಡಿದ್ದಾರೆ.

Yash: ಹಾಸನದಲ್ಲಿ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣ ವಿವಾದ, ನಟ ಯಶ್ ಹೇಳೀದ್ದೇನು?
ನಟ ಯಶ್
Follow us on

ಹಾಸನ: ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಯಶ್ ಫ್ಯಾಮಿಲಿ ಮತ್ತು ಗ್ರಾಮಸ್ಥರ ನಡುವೆ ವಿವಾದ ನಡೆದಿತ್ತು. ಹಾಸನ ತಾಲೂಕಿನ ದುದ್ದ ಹೋಬಳಿಯ ತಿಮ್ಮಾಪುರ ಗ್ರಾಮದಲ್ಲಿ ಮಂಗಳವಾರ ಯಶ್ ತಂದೆ ಅರುಣ್ ಕುಮಾರ್, ತಾಯಿ ಪುಷ್ಪ ಅವರ ಜೊತೆ ತಿಮ್ಮಾಪುರ ಗ್ರಾಮಸ್ಥರು ಗಲಾಟೆ ಮಾಡಿದ್ದರು. ಈ ಸಂಬಂಧ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೂ ಭಯ ಪಡುವ ಅಗತ್ಯವಿಲ್ಲ. ನನಗೂ ಇಲ್ಲಿ ಮಾಹಿತಿಯ ಕೊರತೆ ಇದೆ. ಯಶ್ ಇಂದ ಯಾವುದೇ ಮೋಸ ಆಗಲ್ಲ. ನನ್ನ ಮೇಲೆ ನಂಬಿಕೆ ಇರ್ಲಿ, ನನಗೆ ದುರಾಸೆ ಇಲ್ಲ ಎಂದು ಭರವಸೆ ನೀಡಿದ್ದಾರೆ. ಇನ್ನು ಮಾತು ಮುಂದುವರೆಸಿದ ಅವರು.. ತಾಯಿ ಊರಿನಲ್ಲಿ ಜಾಗ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ನಾವು ಅಲ್ಲಿ ಜಾಗವನ್ನು ಖರೀದಿಸಿದ್ದೇವೆ. ಆ ಜಾಗದ ನಕ್ಷೆ ಎಲ್ಲ ತೆಗೆಸಿ ಪರಿಶೀಲಿಸಿದ್ದೇವೆ. ನನ್ನ ಜಾಗದಲ್ಲಿ ನಾನು ಕಾಂಪೌಂಡ್ ಹಾಕಿದ್ರೆ ಮಧ್ಯದಲ್ಲಿ ರಸ್ತೆ ಬಿಟ್ಟರೆ ಯಾರು ಬರುತ್ತಾರೆ, ಹೋಗ್ತಾರೆ ಗೊತ್ತಾಗಲ್ಲ. ನನ್ನ ಮಾತಿಗೆ ನಾನು ಈಗಲೂ ಬದ್ಧ. ಕಾನೂನು ಪ್ರಕಾರ ಎಷ್ಟಿದೆಯೋ ಅದನ್ನ ಮಾಡಲು ಸಾಧ್ಯ. ನಾನು ಸಣ್ಣದು ಮಾಡಿದ್ರೂ ದೊಡ್ಡದಾಗುತ್ತದೆ.

ನನಗೆ ನಿನ್ನೆ ಕೋಪ ಬಂದಿತ್ತು ಅದಕ್ಕೆ ಹಾಗೆ ಮಾತಾಡಿದೆ. ಅಲ್ಲಿ ವ್ಯವಸಾಯ ಮಾಡಬೇಕೆಂಬುದು ನನ್ನ ಉದ್ದೇಶ. ಅದಕ್ಕೂ ಮೊದಲು ಬಂದೋಬಸ್ತ್ ಮಾಡಿಕೊಳ್ಳಲು ಕಾಂಪೌಂಡ್ ಮಾಡಲಾಗುತ್ತಿದೆ. ಈ ಹಿಂದೆ ಕಾಂಪೌಂಡ್‌ ಒಳಗೆ ಗಂಧದ ಮರಗಳಿವೆ, ಕಳ್ಳತನವಾಗಿತ್ತು. ಕಾಡು ಪ್ರಾಣಿಗಳ ಭೇಟೆಗೆ ಕೆಲವರು ಬರುತ್ತಾರೆ. ಹೀಗಾಗಿ ಜಮೀನಿಗೆ ಕಾಂಪೌಂಡ್ ನಿರ್ಮಿಸುತ್ತಿದ್ದೇವೆ. ಹುಡುಗರನ್ನು ನಾನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲಾಗುತ್ತಾ. ಇನ್ನೊಬ್ಬರ ಜಾಗದಲ್ಲಿ ರಸ್ತೆ ಮಾಡಿಕೊಳ್ಳುವ ಆಸೆ ನನಗಿಲ್ಲ. ಅಲ್ಲಿಯ ಜನರು ಭಯ ಪಡುವ ಅಗತ್ಯವಿಲ್ಲ. ಅವರು ನನಗೆ ಮೊದಲು ರಸ್ತೆ ಬಿಟ್ಟುಕೊಟ್ಟಿರುವುದು ನಿಜ. ನಾನೊಬ್ಬ ನಟನಾಗಿರುವುದರಿಂದ ಸಣ್ಣದೂ ದೊಡ್ಡದಾಗುತ್ತೆ. ನನ್ನ ತಂದೆ ತಾಯಿಯೂ ಹಳ್ಳಿಯವರೇ ಎಂದು ಯಶ್ ತಿಳಿಸಿದ್ದಾರೆ.

ಇದನ್ನೂ ಓದಿ: ನಟ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಿಸುವ ವಿಚಾರ, ಗ್ರಾಮಸ್ಥರು ಹೇಳೋದೇನು? ಅಸಲಿ ಸತ್ಯ ಇಲ್ಲಿದೆ

Published On - 11:43 am, Wed, 10 March 21