ಇನ್ನೂ ಜೀವಂತವಾಗಿದೆ ಜೀತ ಪದ್ಧತಿ, ದೇವನಹಳ್ಳಿ ಬಳಿ 204 ಜನರ ರಕ್ಷಣೆ
ದೇವನಹಳ್ಳಿ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ 204 ಜನರನ್ನು ರಕ್ಷಣೆ ಮಾಡಲಾಗಿದೆ. ಯಲಹಂಕ ತಾಲೂಕಿನ ಕೊಂಡಶೆಟ್ಟಿಹಳ್ಳಿ ಬಳಿ ಇರುವ ಫ್ಯಾಕ್ಟರಿಯಲ್ಲಿ ಒಡಿಶಾ ಮೂಲದ 204 ಜನ ಜೀತಕ್ಕಿದ್ದರು. ಪ್ಯಾಕ್ಟರಿಯಿಂದ ಹೊರಹೋಗಲು ಬಿಡದೆ, ಕೂಲಿಯು ನೀಡದೆ ಅಲ್ಪ ಸ್ವಲ್ಪ ಹಣ ನೀಡಿ ಮಾಲೀಕ ಜೀತಕ್ಕಿಟ್ಟುಕೊಂಡಿದ್ದ. ವಿಷಯ ತಿಳಿದ ನಂತರ ಯಲಹಂಕ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡಿಸಿರುವ ಅಧಿಕಾರಿಗಳು ಜೀತಕ್ಕಿದ್ದ 24ಜನರನ್ನು ರಕ್ಷಿಸಿದ್ದಾರೆ. 204 ಜನರಿಗೆ ತಾಲೂಕು ಆಡಳಿತದಿಂದ ಯಲಹಂಕದ ಹಾಸ್ಟೇಲ್ ಒಂದರಲ್ಲಿ ಪುನರ್ವಸತಿ ನೀಡಿದ್ದು, ರೈಲಿನ ಮೂಲಕ ರಕ್ಷಣೆ […]
ದೇವನಹಳ್ಳಿ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ 204 ಜನರನ್ನು ರಕ್ಷಣೆ ಮಾಡಲಾಗಿದೆ. ಯಲಹಂಕ ತಾಲೂಕಿನ ಕೊಂಡಶೆಟ್ಟಿಹಳ್ಳಿ ಬಳಿ ಇರುವ ಫ್ಯಾಕ್ಟರಿಯಲ್ಲಿ ಒಡಿಶಾ ಮೂಲದ 204 ಜನ ಜೀತಕ್ಕಿದ್ದರು. ಪ್ಯಾಕ್ಟರಿಯಿಂದ ಹೊರಹೋಗಲು ಬಿಡದೆ, ಕೂಲಿಯು ನೀಡದೆ ಅಲ್ಪ ಸ್ವಲ್ಪ ಹಣ ನೀಡಿ ಮಾಲೀಕ ಜೀತಕ್ಕಿಟ್ಟುಕೊಂಡಿದ್ದ.
ವಿಷಯ ತಿಳಿದ ನಂತರ ಯಲಹಂಕ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ದಾಳಿ ನಡಿಸಿರುವ ಅಧಿಕಾರಿಗಳು ಜೀತಕ್ಕಿದ್ದ 24ಜನರನ್ನು ರಕ್ಷಿಸಿದ್ದಾರೆ. 204 ಜನರಿಗೆ ತಾಲೂಕು ಆಡಳಿತದಿಂದ ಯಲಹಂಕದ ಹಾಸ್ಟೇಲ್ ಒಂದರಲ್ಲಿ ಪುನರ್ವಸತಿ ನೀಡಿದ್ದು, ರೈಲಿನ ಮೂಲಕ ರಕ್ಷಣೆ ಮಾಡಿದ ಎಲ್ಲರನ್ನೂ ಒರಿಸ್ಸಾಗೆ ಕಳಿಸಲು ಸಿದ್ದತೆ ಮಾಡಲಾಗಿದೆ. ದಾಳಿಯ ವೇಳೆ ಕಾರ್ಖಾನೆ ಮಾಲೀಕ ಗಣೇಶಪ್ಪ ಪರಾರಿಯಾಗಿದ್ದು, ಗಣೇಶಪ್ಪ ವಿರುದ್ಧ ಕೇಸ್ ದಾಖಲಾಗಿದೆ.