ಚಿರತೆ ಜತೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ: ಮೊಸಳೆಯಿಂದ ವ್ಯಕ್ತಿ ಗ್ರೇಟ್ ಎಸ್ಕೇಪ್

| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2024 | 6:39 PM

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಏಕಾಏಕಿ ದಾಳಿ ಮಾಡಿದ ಚಿರತೆ ವಿರುದ್ಧ ಹೋರಾಡಿ ಪ್ರಾಣ ಉಳಿಸಿಕೊಂಡಿರುವಂತಹ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಶಿವಪುರ ಬಳಿ‌ ನದಿ ದಡಕ್ಕೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಅದೃಷ್ಟವಶಾತ್​ ಪಾರಾಗಿದ್ದಾರೆ.

ಚಿರತೆ ಜತೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ: ಮೊಸಳೆಯಿಂದ ವ್ಯಕ್ತಿ ಗ್ರೇಟ್ ಎಸ್ಕೇಪ್
ಚಿರತೆ ಜತೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ: ಮೊಸಳೆಯಿಂದ ವ್ಯಕ್ತಿ ಗ್ರೇಟ್ ಎಸ್ಕೇಪ್
Follow us on

ಹಾಸನ, ಆಗಸ್ಟ್​ 12: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ಚಿರತೆಯೊಂದಿಗೆ (Leopard) ಹೋರಾಡಿ ಯುವಕ (boy) ಪ್ರಾಣ ಉಳಿಸಿಕೊಂಡಿರುವಂತಹ ರೋಚಕ ಘಟನೆಯೊಂದು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೀನ್​ ಚಿರತೆ ಜೊತೆ ಹೋರಾಡಿ ಬಚಾವ್​ ಆದ ಯುವಕ. ದಾಳಿಯಿಂದಾಗಿ ನವೀನ್​​​ ಕೈ, ಕಾಲಿಗೆ ಗಾಯಗಳಾಗಿವೆ. ಸದ್ಯ ಹೊಳೆನರಸೀಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಜಮೀನಿನಲ್ಲಿ ನವೀನ್ ಕೃಷಿ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಏಕಿ ಆತನ ಮೇಲೆ ಚಿರತೆ ದಾಳಿ ಮಾಡಿದೆ.  ಕೈಯಲ್ಲಿ ಕುಡುಗೋಲು ಹಿಡಿದಿದ್ದರಿಂದ ಚಿರತೆ ವಿರುದ್ಧ ಸೆಣೆಸಾಡಿದ್ದಾನೆ. ಬಳಿಕ ಕಿರುಚಾಡುತ್ತಿದ್ದಂತೆ ಅಕ್ಕಪಕ್ಕದ ಜನರು ಧಾವಿಸಿದ್ದಾರೆ. ಜನರನ್ನ ನೋಡಿದ ಚಿರತೆ ಕಾಡಿನೊಳಗೆ ಓಡಿ ಹೋಗಿದೆ.

ಇದನ್ನೂ ಓದಿ: ಮಂಗಳೂರು: ಮನೆಯ ಹೊರಗಡೆ ಮಲಗಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ

ಸದ್ಯ ನವೀನ್​ ದಾಖಲಾಗಿರುವ ಆಸ್ಪತ್ರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.  ಗೋಪನಹಳ್ಳಿ ಕೆರಗೋಡು ಭಾಗದಲ್ಲಿ ಚಿರತೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೂಡಲೇ ಬೋನು ಇಟ್ಟು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನದಿ ದಡಕ್ಕೆ ನೀರು ಕುಡಿಯಲು ಹೋದ ವ್ಯಕ್ತಿ ಮೇಲೆ ಮೊಸಳೆ ದಾಳಿ: ಬಲಗೈ ಕಟ್​

ಯಾದಗಿರಿ: ನದಿ ದಡಕ್ಕೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿರುವಂತಹ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಶಿವಪುರ ಬಳಿ‌ ನಡೆದಿದೆ. ಶಿವಪುರ ಗ್ರಾಮದ ನಿವಾಸಿ ಭೀಮಾಶಂಕರ ಮೊಸಳೆ ದಾಳಿಗೆ ಒಳಗಾದ ವ್ಯಕ್ತಿ. ಮೊಸಳೆ ದಾಳಿಯಿಂದ ಬಲಗೈ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿರತೆ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗೆ ​ಖಂಡ್ರೆ ಖಡಕ್​ ಸೂಚನೆ, ಕಠಿಣ ಕ್ರಮದ ಎಚ್ಚರಿಕೆ

ಭೀಮಾಶಂಕರ ನದಿ ತೀರಕ್ಕೆ ದನ ಮೇಯಿಸಲು ಹೋಗಿದ್ದರು. ಈ ವೇಳೆ ನೀರು ಕುಡಿಯಲು ಹೋದಾಗ ದಾಳಿ ಮಾಡಿದೆ. ಗಾಯಗೊಂಡ ಭೀಮಾಶಂಕರಗೆ ರಾಯಚೂರಿನ ರಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.