
ಬೆಂಗಳೂರು/ಬೀದರ್, ಜುಲೈ 17): ಮಾಜಿ ಸಚಿವ, ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ (Prabhu Chauhan) ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಪ್ರತೀಕ್ ಚೌಹಾಣ್ ಮೋಸ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಖುದ್ದು ಮೋಸ ಹೋದ ಸಂತ್ರಸ್ತೆ ಮಹಿಳಾ ಆಯೋಗಕ್ಕೆ (Women’s Commission) ದೂರು ನೀಡಿದ್ದಾಳೆ. ಪ್ರತೀಕ್ ಚೌಹಾಣ್ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈ ಸಂಬಂಧ ಔರಾದ್‌ನ ಹೋಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ, ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದಾಳೆ.
ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಲೈಂಗಿಕವಾಗಿಯೂ ಬಳಸಿಕೊಂಡು ಮೋಸ ಮಾಡಿದ್ದಾನೆಂದು ಯುವತಿ, ಶಾಸಕ ಪಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಆರೋಪಿಸಿದ್ದು, ಈ ಸಂಬಂಧ ನ್ಯಾಯ ಒದಗಿಸುವಂತೆ ಸಂತ್ರಸ್ತೆ ಯುವತಿ, ಪ್ರತೀಕ್ ಚೌಹಾಣ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
2023ರ ಡಿಸೆಂಬರ್ 25ರಂದು ಪೋಷಕರು ನಿಶ್ಚಿತಾರ್ಥ ಮಾಡಿದ್ದರು. ನಿಶ್ಚಿತಾರ್ಥದ ನಂತರ ಪ್ರತೀಕ್ ಜೊತೆ ಹೊಂದಾಣಿಕೆಗಾಗಿ ಬೇರೆ ಸ್ಥಳಗಳಿಗೆ ಕಳಿಸಿ ಕೊಟ್ಟಿದ್ದರು. ಅದರಂತೆ ಪ್ರತೀಕ್ ಮಹಾರಾಷ್ಟ್ರದ ಲಾತೂರ್ ಗೆ ಕರೆದುಕೊಂಡು ಹೋಗಿದ್ದು, ಆ ವೇಳೆ ಪ್ರತೀಕ್ ಚೌಹಾಣ್ ಒತ್ತಾಯಪೂರ್ವಕವಾಗಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಮದುವೆಗೆ ಒತ್ತಾಯ ಮಾಡಿದ್ರೆ ಮುಂದೂಡಿದ್ದಾರೆ. ಸಾಲದಕ್ಕೆ ಅವರ ಮನೆಗೆ ಹೋಗಿ ನನ್ನ ಪೋಷಕರು ಕೇಳಿದ್ರೆ ಗಲಾಟೆ ಮಾಡಿದ್ದು, ನಮ್ಮ ಮನೆಯವರನ್ನ ಬಡವರು ಎಂದು ಹೀಯಾಳಿಸಿದ್ದಾರೆ. ಈ ಕುರಿತು 2025ರ ಜುಲೈ 6ರಂದು ಔರಾದ್‌ನ ಹೋಕ್ರಾಣ್ ಠಾಣೆಗೆ ದೂರು ಕೊಡಲು ಹೋಗಿದ್ವಿ. ಆದ್ರೆ, ಪೊಲೀಸರು ದೂರನ್ನ ಸ್ವೀಕಾರ ಮಾಡಿಲ್ಲ ಎಂದು ಆರೋಪಿಸಿದ್ದಾಳೆ.
ಮಹಾರಾಷ್ಟ್ರದ (Maharashtra) ಉದ್ದಗೀರ್ ಯುವತಿಯೊಂದಿಗೆ ಪ್ರಭು ಚೌಹಾಣ್ ಮಗ ಪ್ರತೀಕ್ ಚೌಹಾಣ್‌ನೊಂದಿಗೆ ನಿಶ್ಚಿತಾರ್ಥವಾಗಿದ್ದು, ಕೆಲ ದಿನಗಳಿಂದ ಅಷ್ಟೇ ಮದುವೆ ಲೇಟಾದ ವಿಚಾರಕ್ಕೆ ಎರಡು ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಘಟನೆ ವಿಕೋಪಕ್ಕೆ ತಿರುಗಿ ಸಂಬಂಧಿಕರು ಹೊಡೆದಾಡಿಕೊಂಡಿದ್ದರು. ಆ ವೇಳೆ ಶಾಸಕ ಪ್ರಭು ಚೌಹಾಣ್ ಒಬ್ಬರಿಗೆ ಕಾಪಾಳಕ್ಕೆ ಬಾರಿಸಿದ್ದು, ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಅದೇ ಪ್ರಕರಣ ಸಂಬಂಧ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದಕ್ಕೆ ಯುವತಿ, ಭು ಚೌಹಾಣ್ ಮಗ ಪ್ರತೀಕ್ ಚೌಹಾಣ್ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:35 pm, Thu, 17 July 25