ಶಿವಮೊಗ್ಗ: ಬೈಕ್ಗೆ ಪೆಟ್ರೋಲ್ ಹಾಕಿಸಲು ಪೋಷಕರು ಹಣ ನೀಡದದ್ದಕ್ಕೆ ಮನನೊಂದು ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ನಗರದ ಗೋಪಾಳ ಬಡಾವಣೆಯ ಮೇಘರಾಜ್ (22) ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಿಬಿಎ ವ್ಯಾಸಂಗ ಮಾಡುತ್ತಿದ್ದ ಮೇಘರಾಜ್ ಬೈಕ್ಗೆ ಪೆಟ್ರೋಲ್ ಹಾಕಿಸಲು ಹಣ ನೀಡುವಂತೆ ಮನೆಯಲ್ಲಿ ಕೇಳಿದ್ದಾನೆ. ಆದರೆ, ಪೋಷಕರು ದುಡ್ಡು ಕೊಡಲು ನಿರಾಕರಿಸಿದ ಕಾರಣಕ್ಕೆ ಬೇಸತ್ತು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 11:08 pm, Thu, 14 January 21