ಮಾಸ್ಕ್ ಧರಿಸಿಲ್ಲ ಅಂತಾ ಪೊಲೀಸರಿಂದ ಹಲ್ಲೆ, ಯುವಕನ ಸಾವು, ಎಲ್ಲಿ?
ಹೈದರಾಬಾದ್: ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ಪೊಲೀಸರಿಂದ ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರೋ ಘಟನೆ ಆಂಧ್ರ ಪ್ರದೇಶದ ಚಿರಾಲದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮೃತ ಯುವಕ ಕಿರಣ್ ಎಂದು ತಿಳಿದುಬಂದಿದೆ. ಮಾಸ್ಕ್ ಹಾಕಿಕೊಳ್ಳದ ಯುವಕನ ಮೇಲೆ ಪೊಲೀಸರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಜೊತೆಗೆ, ಸ್ಥಳೀಯ ಸಂಘಟನೆಗಳು ಪೊಲೀಸರ ವರ್ತನಯನ್ನ ಖಂಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಹೈದರಾಬಾದ್: ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ಪೊಲೀಸರಿಂದ ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರೋ ಘಟನೆ ಆಂಧ್ರ ಪ್ರದೇಶದ ಚಿರಾಲದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮೃತ ಯುವಕ ಕಿರಣ್ ಎಂದು ತಿಳಿದುಬಂದಿದೆ.
ಮಾಸ್ಕ್ ಹಾಕಿಕೊಳ್ಳದ ಯುವಕನ ಮೇಲೆ ಪೊಲೀಸರು ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಜೊತೆಗೆ, ಸ್ಥಳೀಯ ಸಂಘಟನೆಗಳು ಪೊಲೀಸರ ವರ್ತನಯನ್ನ ಖಂಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
Published On - 2:09 pm, Wed, 22 July 20