ಹುಬ್ಬಳ್ಳಿ, (ನವೆಂಬರ್ 06): ಕರ್ನಾಟಕ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಭಾರೀ ಸುದ್ದು ಮಾಡಿದ್ದು, ಈ ಸಂಬಂಧ ರೈತರ ಸಮಸ್ಯೆ ಆಲಿಸಲು ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಆದರೆ, ಇದಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಬರುತ್ತಿರುವುದು ಅನಧಿಕೃತ. ಡೋಂಟ್ ಟಚ್ ವಕ್ಫ್ ಎಂದು ಗುಡುಗಿದ್ದಾರೆ.
ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿರುವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್ ನಲ್ಲಿ ಬಿಲ್ ತರುವುದಕ್ಕೆ ಕಮಿಟಿ ಮಾಡಿರುವುದು. ಅವರು ಬರುತ್ತಿರುವುದೇ ಅನಧಿಕೃತ. ಜೆಪಿಸಿ ಮಾಡಿರೋದ್ಯಾಕೆ? ವಕ್ಫ್ ಬಿಲ್ಗೆ ಎಂದು ಮಾಡಿರುವುದು ಎಂದರು.
ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ನ.7ಕ್ಕೆ ಕರ್ನಾಟಕಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಭೇಟಿ!
ಪಾರ್ಲಿಮೆಂಟ್ ನಲ್ಲಿ ವಕ್ಫ್ ಬಿಲ್ ತರುತ್ತಿದ್ದಾರೆ. ಅದಕ್ಕೆ ಅಂತಾ ಕಮಿಟಿ ಮಾಡುತ್ತಿದ್ದಾರೆ. ಇದಕ್ಕಲ್ಲ. ಇದರಲ್ಲಿ ಅವರು ಹೇಗೆ ಬರೋಕೆ ಆಗುತ್ತೆ? ಕೇಂದ್ರಕ್ಕೆ ಪವರ್ ಇದೆ, ಅದಕ್ಕೆ ಅಂತ ಸಪ್ರೇಟ್ ಕಮಿಟಿ ಮಾಡುಬೇಕು ಅಲ್ವಾ? ಕರ್ನಾಟಕದಲ್ಲಿ ಗೊಂದಲ ಆಗಿದೆ ಅಂತ ಕಮಿಟಿ ಮಾಡಲಿ ಎಂದು ಹೇಳಿದರು.
ಪ್ರಮೋದ್ ಮುತಾಲಿಕ್ ಹೇಳಿಕೆಗೆ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಯಾವುದೇ ಇಶ್ಯೂ ಇಲ್ಲ. ಮುತಾಲಿಕ್, ಬಿಜೆಪಿ ಎರಡು ಒಂದೇ . ಏಕ್ ದಿಲ್ ದೋ ಜಾನ್ ತರಹ, ಅವರೆಲ್ಲಾ ಒಂದೇನೆ. ನಾವ್ಯಾಯಾರಿಗೂ ತೊಂದರೆ ಕೊಡೋಕೆ ಮಾಡಿಲ್ಲ . ವಕ್ಫ್ ಆಸ್ತಿ ಇರೋದು 1ಲಕ್ಷ 12 ಸಾವಿರ ಎಕರೆ. ಈಗ ನಮ್ಮ ಬಳಿ 23 ಸಾವಿರ ಇದೆ . ಆಸ್ತಿ ಒಂದು ಇಂಚು ಬಿಡಬೇಡಿ ಎಂದು ಬೊಮ್ಮಾಯಿ ಹೇಳಿದ್ರು . ಈಗ ಉಲ್ಟಾ ಹೊಡೆಯುತ್ತಿದ್ದಾರೆ . ರೈತರು ನಮ್ಮ ಅನ್ನದಾತರು, ಅವರಿಗೆ ತೊಂದರೆ ಕೊಡಲ್ಲ . ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಅಂತ ಗೊಂದಲ ಸೃಷ್ಟಿ ಮಾಡಿದ್ರು, ವಾಪಸ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಕ್ಫ ವಿವಾದ ಬುಗಿಲೆದ್ದ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಬರೆದಿದ್ದ ಪತ್ರಕ್ಕೆ ಜಾಯಿಂಟ್ ಪಾರ್ಲಿಮೆಂಟ್ ಕಮಿಟಿ ಸ್ಪಂದಿಸಿದ್ದು, ನಾಳೆ(ನವೆಂಬರ್ 07) ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಮೊದಲು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 8.45 ಆಗಮಿಸಲಿರೋ ಕಮಿಟಿ, ರೈತರ ಬಲಿ ಮಾಹಿತಿ ಸಂಗ್ರಹಿಸಿ ಬಳಿಕ ಬೆಳಗಾವಿಗೆ ತೆರಳಲಿದೆ.
ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ