ಸಿಎಂ ಆದೇಶಕ್ಕೂ ಇಲ್ಲ ಕಿಮ್ಮತ್ತು, ನಿವೃತ್ತ ಅಧಿಕಾರಿಯನ್ನೇ 2 ವರ್ಷ ಮುಂದುವರಿಸಲು ಜಮೀರ್ ಸೂಚನೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 04, 2024 | 5:16 PM

ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಕೇಳುತ್ತಿಲ್ಲ ಎನ್ನುವ ವಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯನವರ ಆದೇಶವನ್ನು ಧಿಕ್ಕರಿಸಿದ್ದಾರೆ. ಅಷ್ಟಕ್ಕೂ ಸಚಿವ ಜಮೀರ್ ಅಹ್ಮದ್ ಖಾನ್ ಮಾಡಿದ್ದೇನು? ಇಲ್ಲಿದೆ ವಿವರ

ಸಿಎಂ ಆದೇಶಕ್ಕೂ ಇಲ್ಲ ಕಿಮ್ಮತ್ತು, ನಿವೃತ್ತ ಅಧಿಕಾರಿಯನ್ನೇ  2 ವರ್ಷ ಮುಂದುವರಿಸಲು ಜಮೀರ್ ಸೂಚನೆ
ಜಮೀರ್ ಅಹ್ಮದ್, ಸಿದ್ದರಾಮಯ್ಯ
Follow us on

ಬೆಂಗಳೂರು.(ಆಗಸ್ಟ್ 04): ನಿವೃತ್ತ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದಾರೆ. ಆದ್ರೆ, ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಆದೇಶವನ್ನೇ ಧಿಕ್ಕರಿಸಿ ನಿವೃತ್ತಿಯಾಗಲಿರುವ ಅಧಿಕಾರಿಯನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಸುವಂತೆ ಸೂಚಿಸಿದ್ದಾರೆ. ಹೌದು.. ಇದೇ ಆಗಸ್ಟ್ 31ಕ್ಕೆ ನಿವೃತ್ತಿಯಾಗುವ ಕೊಳಗೇರಿ ಮಂಡಳಿ ಮುಖ್ಯ ಇಂಜಿನಿಯರ್ ಎಸ್​.ಪಿ.ಬಾಲರಾಜು ಅವರನ್ನು ಮುಂದಿನ 2 ವರ್ಷ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಜಮೀರ್ ಅಹ್ಮದ್ ಖಾನ್, ಸಿಎಂ ಆದೇಶಕ್ಕೂ ಡೋಂಟ್ ಕೇರ್ ಎಂದಿದ್ದಾರೆ.

ಕೊಳಗೇರಿ ಮಂಡಳಿ ಚೀಫ್ ಇಂಜಿನಿಯರ್ ಎಸ್​.ಪಿ.ಬಾಲರಾಜು ಅವರು ಇದೇ ಆಗಸ್ಟ್​ 31ರಂದು ನಿವೃತ್ತಿಯಾಗಲಿದ್ದಾರೆ. ಆದ್ರೆ, ಜಮೀರ್ ಅಹ್ಮದ್ ಖಾನ್, ಎಸ್​.ಪಿ.ಬಾಲರಾಜು ಅವರನ್ನು ಸೆಪ್ಟೆಂಬರ್ 1ರಿಂದ ಮುಖದಿನ 2 ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಉಸ್ತುವಾರಿ ಬೆಂಗಳೂರಿಗೆ ದೌಡು, ಸಚಿವ ಸಂಪುಟಕ್ಕೆ ಸರ್ಜರಿ?

ನಿವೃತ್ತ ಅಧಿಕಾರಿಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಖಡಕ್​ ಆಗಿ ತಿಳಿಸಿದ್ದಾರೆ. ಆದರೂ ಸಹ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಯಾವುದೋ ಲಾಬಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯನ್ನೇ ಧಿಕ್ಕರಿಸುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇಲಾಖೆಯಲ್ಲಿ ಬೇರೆ ಅರ್ಹ ಅಧಿಕಾರಿಗಳೇ ಇಲ್ವಾ? ಸಿಎಂ ಆದೇಶ ಇದ್ದರೂ ಸಹ ನಿವೃತ್ತ ಅಧಿಕಾರಿಯನ್ನು ಮುಂದುವರಿಸುತ್ತಿರುವುದ್ಯಾಕೆ? ಅರ್ಹ ಅಧಿಕಾರಿಗಳಿದ್ದರೂ ಯಾವುದೋ ಲಾಬಿಗೆ ಸಚಿವರು ಸಿಎಂ ಸೂಚನೆ ಧಿಕ್ಕರಿಸುತ್ತಿದ್ದಾರಾ? ಸಿಎಂ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಇಲ್ವಾ? ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ