AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐತಿಹಾಸಿಕ ‘ತಾಜ್ ಬಾವಡಿ’ ಅಭಿವೃದ್ದಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾದ ಸಚಿವರು, ಶಾಸಕರು; ಏನಿದರ ವಿಶೇಷತೆ?

ವಿಜಯನಗರ ಸಾಮ್ರಾಜ್ಯದ ಅನವತಿಯೊಂದಿಗೆ ಉದಯವಾಗಿದ್ದೇ ವಿಜಯಪುರ ಸಾಮ್ರಾಜ್ಯ. ಜ್ಯಾತ್ಯಾತೀತ ಮನೋಭಾವನೆಯ ದೊರೆಗಳಾಗಿದ್ದ ಆದಿಲ್ ಶಾಹಿಗಳು ವಿಜಯಪುರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದೇ ರೋಚಕ. ಕಲೆ, ಸಂಗೀತ, ಶಿಕ್ಷಣ, ಸ್ಮಾರಕಗಳ ನಿರ್ಮಾಣ, ಜಲ ನಿರ್ವಹಣೆಯಲ್ಲಿ ಆದಿಲ್ ಶಾಹಿಗಳು ಎತ್ತಿದ ಕೈ. ಅವರು ನಿರ್ಮಾಣದ ಮಾಡಿರೋ ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿದಂತೆ ಹತ್ತಾರು ಸ್ಮಾರಕಗಳು ಪಳಯುಳಿಕೆಗಳಾಗಿ ನಿಂತಿದೆ. ಅದರಲ್ಲೂ ಜಲ ಮೂಲವಾಗಿರೋ ಬಾವಿಗಳು ಇಂದಿಗೂ ಜೀವಜಲ ನೀಡುತ್ತಿವೆ. ಇಂಥ ಬಾವಿಗಳಲ್ಲಿ ತಾಜ್ ಬಾವಡಿ ದೊಡ್ಡದಾಗಿದೆ. ಹೂಳಿನಿಂದ ತುಂಬಿದ್ದ ಇದನ್ನು 2016 ರಲ್ಲಿ ಸ್ವಚ್ಛ ಮಾಡಲಾಗಿತ್ತು. ಇದೀಗಾ ವಿಶೇಷ ಅನುದಾನದಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲು ಸಚಿವ ಎಂಬಿ ಪಾಟೀಲ್ ಹಾಗೂ ನಗರ ಶಾಸಕ ಯತ್ನಾಳ ಮುಂದಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಐತಿಹಾಸಿಕ ‘ತಾಜ್ ಬಾವಡಿ’ ಅಭಿವೃದ್ದಿಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾದ ಸಚಿವರು, ಶಾಸಕರು; ಏನಿದರ ವಿಶೇಷತೆ?
ಐತಿಹಾಸಿಕ ‘ತಾಜ್ ಬಾವಡಿ’ ಅಭಿವೃದ್ದಿ
ಅಶೋಕ ಯಡಳ್ಳಿ, ವಿಜಯಪುರ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Aug 04, 2024 | 4:22 PM

Share

ವಿಜಯಪುರ, ಆ.04: ವಿಜಯನಗರ ಸಾಮ್ರಾಜ್ಯವನ್ನು ಆಳಿದ ಆದಿಲ್ ಷಾ ತನ್ನ ಪತ್ನಿ ರಾಣಿ ತಾಜ್ ಸುಲ್ತಾನಳ ಗೌರವಾರ್ಥವಾಗಿ 1620 ರಲ್ಲಿ ‘ತಾಜ್ ಬಾವಡಿ’(Taj Bawdi)ಯನ್ನು ನಿರ್ಮಿಸಿದನು. ಇದು ಒಟ್ಟು 224 ಚದರ ಅಡಿ ವಿಸ್ತೀರ್ಣದಲ್ಲಿ 35 ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು 52 ಅಡಿ ಎತ್ತರದಲ್ಲಿದೆ. ವಿಜಯಪುರ ನಗರದ ಹೃದಯ ಭಾಗದಲ್ಲಿರುವ ತಾಜ್ ಬಾವಡಿ, ಆದಿಲ್‌ಷಾಹಿ ಕಾಲದ ಪ್ರಮುಖ ಜಲ ಮೂಲಗಳಲ್ಲಿ ಒಂದು. ಐತಿಹಾಸಿಕವಾಗಿಯೂ ವಿಶೇಷ ಹಾಗೂ ವಾಸ್ತು ಶಿಲ್ಪದಲ್ಲೂ ವಿಶಿಷ್ಟ ಹೊಂದಿರುವ ತಾಜ್ ಬಾವಡಿ ಈಗ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ.

2016 ರಲ್ಲಿ ಸ್ವಚ್ಛ ಮಾಡಲಾಗಿತ್ತು

ಇಂಥಹ ಸ್ಮಾರಕ ಪ್ರವಾಸಿ ತಾಣವಾಗಬೇಕಿದ್ದು, ಒತ್ತೂವರಿ ಹಾಗೂ ಕಸ ಎಸೆಯೋ ತಾಣವಾಗಿದೆ. ಇಂಥ ಜಲ ಮೂಲವನ್ನು 2016 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲ್ ನಗರದ ಇತರೆ ಐತಿಹಾಸಿಕ ಬಾವಿಗಳನ್ನು ಸ್ವಚ್ಛ ಮಾಡುವಂತೆ ಇದನ್ನೂ ಹೂಳು ಮುಕ್ತ ಮಾಡಿದ್ದರು. ಆದರೂ ಬಾವಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ಐತಿಹಾಸಿಕ ಬಾವಿಯನ್ನು ಪ್ರವಾಸಿ ತಾಣವನ್ನಾಗಿಸಲು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ನಗರ ಶಾಸಕ ಯತ್ನಾಳ ಮುಂದಾಗಿದ್ದಾರೆ.

ಇದನ್ನೂ ಓದಿ:ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ

8 ಕೋಟಿ ರೂಪಾಯಿ ವೆಚ್ಚದಲ್ಲಿ ತಾಜ್ ಬಾವಡಿ ಅಭಿವೃದ್ದಿ

ತಾಜ್ ಬಾವಡಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಅಡಾಪ್ಟ್ ಎ ಮಾನ್ಯುಮೆಂಟ್ ಯೋಜನೆಯಡಿಯಲ್ಲಿ ವಿವಿಧ ಸಂಘ, ಸಂಸ್ಥೆ, ಎನ್​ಜಿಓ ಹಾಗೂ ಕಂಪನಿಗಳನ್ನು ಸಂಪರ್ಕಿಸಿದಾಗ ಮುಂಬಯಿ ಮೂಲದ ವಲ್ಡ್ ಮಾನ್ಯುಮೆಂಟ್ಸ್ ಫಂಡ್ ಇಂಡಿಯಾ ಅಸೋಷಿಯೇಷನ್ ಹಾಗೂ ಟಾಟಾ ಕನ್ಸಲ್ಟಂಟನ್ಸಿ ಸರ್ವೀಸ್ ಫೌಂಡೇಷನ್ ಸಾರ್ವಜನಿಕ ಹೊಣೆಗಾರಿಕೆ ಅನುದಾನದಲ್ಲಿ, ಅಂದರೆ ಸಿಎಸ್ ಆರ್ ಪಂಡ್ ನ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ತಾಜ್ ಬಾವಡಿ ಅಭಿವೃದ್ದಿ ಮಾಡಿ ಪ್ರವಾಸಿ ತಾಣವನ್ನಾಗಿಸಲು ಮುಂದೆ ಬಂದಿವೆ. ಇದನ್ನು ಅಭಿವೃದ್ದಿ ಮಾಡಿ ಪ್ರವಾಸಿ ತಾಣವನ್ನಾಗಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಜಬಾವಡಿ ಸಂರಕ್ಷಣೆಗಾಗಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ತಾಜಬಾವಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಿದ್ದ 17 ಮನೆಗಳನ್ನು ತೆರವು ಮಾಡಲಾಗಿದೆ. ಇಲ್ಲಿ ಮನೆಗಳ ತೆರವಿಗೆ ಒಳಗಾದವರಿಗೆ ಗುರುತಿಸಲಾಗಿರುತ್ತದೆ. ಕರ್ನಾಟಕ ಕೊಳಚೆ ನಿರ್ಮುಲನಾ ಮಂಡಳಿ ನಿರ್ಮಾಣ ಮಾಡಿರೋ ಬುರಣಾಪುರದ ಬಳಿಯ ಮನೆಗಳನ್ನು ನೀಡಲಾಗಿದೆ. ಪುರಾತನ ಐತಿಹ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಇಡೀ ತಾಜ್ ಬಾವಡಿ ಪ್ರದೇಶವನ್ನು ಅಭಿವೃದ್ದಿ ಮಾಡಲಾಗುತ್ತದೆ.

ಇದನ್ನೂ ಓದಿ: ಇಷ್ಟಾರ್ಥ ಕರುಣಿಸೋ ವಿಜಯಪುರದ ದುರ್ಗಾಪರಮೇಶ್ವರಿ, ದೇಶದ ಮೂಲೆ ಮೂಲೆಯಿಂದ ಬರ್ತಾರೆ ರಾಜಕಾರಣಿಗಳು

ಉದ್ಯಾನವನ ಸೇರಿದಂತೆ ಇತರೆ ಪ್ರವಾಸಿಗರನ್ನು ಸೆಳೆಯೋ ಕೆಲಸ ಕಾಮಗಾರಿಗಳನ್ನು ಮಾಡಲಾಗುತ್ತದೆ. ಈ ಮೂಲಕ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯೋ ಕೆಲಸವಾಗಲಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಬೆಳೆಯಬೇಕು. ಜಿಲ್ಲೆಯ ಸ್ಮಾರಕಗಳು ವಿಶ್ವಪಾರಂಪರಿಕ ಪಟ್ಟಯಲ್ಲಿ ಸೇರುವಂತಾಗಬೇಕೆಂದು ಜನರು ಒತ್ತಾಯ ಮಾಡಿದ್ದಾರೆ. ಪ್ರವಾಸೋದ್ಯಮ ಬೆಳೆದರೆ ಸ್ಥಳಿಯ ಜನರಿಗೆ ಉದ್ಯೋಗ ವ್ಯಾಪಾರ ವಹಿವಾಟು ಮಾಡಲು ಅನಕೂಲವಾಗುತ್ತದೆ. ಹಾಗಾಗಿ ನಗರದ ತಾಜ್ ಬಾವಡಿ ಅಭಿವೃದ್ದಿ ಕಾರ್ಯ ಮಾಡುತ್ತಿರೋದು ಒಳ್ಳೆಯ ಕೆಲಸವೆಂದಿದ್ದಾರೆ.

ಸದ್ಯ ತಾಜ್ ಬಾವಡಿಯ ಪ್ರವೇಶ ದ್ವಾರ, ಖಾಲಿ ಜಾಗದಲ್ಲಿ ಸಾಂಸ್ಕೃತಿಕ ಕಲ್ಯಾಣ ನಿರ್ಮಾಣ, ರಸ್ತೆ ಹಾಗೂ ಫುಟ್ ಪಾತ್ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಹಳೆಯ ವಾಸ್ತು ಶಿಲ್ಪದ ಪಳಯುಳಿಕೆಗಳ ರಕ್ಷಣೆ ಹಾಗೂ ಪುನಃ ಸ್ಥಾಪನೆ ಮಾಡುವುದು ಸೇರಿದಂತೆ ಇತರೆ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇಡೀ ಕಾಮಗಾರಿಯ ಪೂಜೆಯನ್ನು ಸಹ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಾಜ್ ಬಾವಡಿಯ ಜಲ ರಕ್ಷಣೆಯಷ್ಟೇಯಲ್ಲಾ ಇಡೀ ಆವರಣ ಪ್ರವಾಸಿ ತಾಣವಾಗಿ ನಿರ್ಮಾಣವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ಅಶೋಕ ಯಡಳ್ಳಿಯವರು ಮೂಲತಃ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದವರು. ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದು ಇವರ ಕೆಲಸದ ಮಾಹಿತಿಯಾಗಿದೆ. ಪ್ರಾಥಮಿಕ ಶಿಕ್ಷಣ ನಂತರ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡವೇ ಇವರ ವಿದ್ಯಾ ಕ್ಷೇತ್ರವಾಗಿದೆ . ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ್ದಾರೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ, ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ, ಆಸಕ್ತಿ ಇವರಗಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ.

Read More
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್​​​​ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್​​​​ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ