ನಟ ಚೇತನ್ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಭೂತಕೋಲ ಹಿಂದೂ ಸಂಪ್ರದಾಯವಲ್ಲ ಎಂಬ ಹೇಳಿಕೆ ಹಿನ್ನೆಲೆ ನಟ ಚೇತನ್ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ‘ಭೂತಕೋಲ ಹಿಂದೂ ಸಂಪ್ರದಾಯವಲ್ಲ’ ಎಂದು ಚೇತನ್ ಹೇಳಿಕೆ ವಿಚಾರ ಹಿನ್ನೆಲ್ಲೆ ಚೇತನ್ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ನಡೆದಿದೆ. ಇಂದು (ಅ. 21) ಶೇಷಾದ್ರಿಪುರಂನಲ್ಲಿರುವ ನಟ ಚೇತನ್ ಮನೆ ಬಳಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಈ ವೇಳೆ ಮುಖಕ್ಕೆ ಮಸಿ ಬಳಿಯಲು ಮುಂದಾದಾಗ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮಡಿಕೇರಿಯಲ್ಲಿ ನಟ ಚೇತನ್ ವಿರುದ್ಧ ಹಿಂದೂ ಯುವಸೇನೆ ಡಿ.ವೈಎಸ್ಪಿಗೆ ದೂರು ನೀಡಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಬಗ್ಗೆ ನಟ ಚೇತನ್ ಟೀಕೆ ಮಾಡಿದ್ದು, ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಚೇತನ್ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದು, ನಟ ಚೇತನ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಹಿಂದೂ ಯುವಸೇನೆ ಆಗ್ರಹಿಸಿದೆ.
‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದರು. ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸರ ಬಳಿ ದೂರು ದಾಖಲು ಮಾಡಿದ್ದಾರೆ.
ನಟರಿಗೆ ನಟಿಸುವುದು ಮಾತ್ರ ಗೊತ್ತು, ನಾವು ದೈವಾರಾಧಕರು ನಟಿಸಲು ಗೊತ್ತಿಲ್ಲ: ಹಿರಿಯ ದೈವಾರಾಧಕ ಕಿಡಿ
ನಟರಿಗೆ ನಟನೆ ಮಾಡಲು ಗೊತ್ತಿದೆ. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ತಲೆಮಾರುಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆ ಕುರಿತ ಹಿನ್ನೆಲೆ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತಾಡೋದು ತಪ್ಪು. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಮ್ಮ ನೆಲ, ಕುಲ ಆಚರಣೆ ಬಗ್ಗೆ ಮಾತಾಡುವ ಜ್ಞಾನ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದರು.
ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ಗೆ ಪ್ರತಿಕ್ರಿಯೆ ಕೊಡುತ್ತೇವೆ. ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ, ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಅವರಿಗೆ ಇಲ್ಲ. ವ್ಯಕ್ತಿಗತವಾಗಿ ಅವರಿಗೆ ನಾವು ಉತ್ತರ ಕೊಡುವುದಿಲ್ಲ. ಸಂಸ್ಕೃತಿಯ ಅವಹೇಳನ ಆದಾಗೆಲ್ಲ ಪಂಜುರ್ಲಿ ದೈವದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಕುಮಾರ ಪಂಪದ ಹೇಳಿದರು. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದರು. ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸರ ಬಳಿ ದೂರು ದಾಖಲು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:27 pm, Fri, 21 October 22