
ಮೈಸೂರು: ಸಿನಿಮಾಗಳನ್ನು ಪ್ರೇರಣೆಯಾಗಿಟ್ಟುಕೊಂಡು ಜನ ಸಕಾರಾತ್ಮಕವಾಗಿ/ನಕಾರಾತ್ಮಕವಾಗಿ ಏನೇನೋ ಪ್ರಯತ್ನಗಳನ್ನು ಮಾಡ್ತಾ ಇರ್ತಾರೆ. ಅದರಂತೆ ಮೈಸೂರಿನಲ್ಲಿ ಬೆಲ್ ಬಾಟಮ್ ಸಿನಿಮಾ ಮಾದರಿಯಲ್ಲಿ ಕಳ್ಳತನ ನಡೆದಿದೆ.
ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಬ್ಯಾಂಕ್ನಲ್ಲಿದ್ದ ಚಿನ್ನವನ್ನ ಮನೆಗೆ ತಂದಿದ್ದರು. ಅಲ್ಲದೆ ತಮ್ಮ ಮಾವನ ಮನೆ ರಿಪೇರಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಅರ್ಧ ಕೆ.ಜಿ. ಚಿನ್ನ ಕೂಡ ಕಳ್ಳತನವಾದ ಮನೆಯಲ್ಲೇ ಇಡಲಾಗಿತ್ತು.
ನನಗೆ ಕೊರೊನಾ ಪಾಸಿಟಿವ್ ಇತ್ತು. ನಾನು ಗುಣಮುಖನಾಗುವಷ್ಟರಲ್ಲಿ ನಮ್ಮ ತಾಯಿಗೂ ಕೊರೊನಾ ಇರುವುದು ದೃಢವಾಗಿತ್ತು. ಹೀಗಾಗಿ ಈ ಗೊಂದಲದಿಂದ ನಾನು ಚಿನ್ನವನ್ನು ಬ್ಯಾಂಕ್ನಲ್ಲಿ ಇಡಲು ಸಾಧ್ಯವಾಗಲಿಲ್ಲ.
ಕಳೆದ ರಾತ್ರಿ ಕೂಡ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಎಂದು ಕಳ್ಳತನವಾದ ಮನೆ ಮಾಲೀಕ ವಿಜಯ್ ಕುಮಾರ್ ಹೇಳಿದ್ರು.
Published On - 2:16 pm, Tue, 1 September 20