ಬೆಂಗಳೂರು: ಏನ್ ಪಾಳೇಗಾರನಂತೆ ಪೋಸು.. ಜಗತ್ತೇ ಗೆದ್ದು ಬಂದೋರಂತೆ ಶೋ ಆಫ್. ತಲೆಯಲ್ಲಿ ಬುದ್ಧಿ ಇದ್ದು ಹೀಗ್ ಮಾಡಿದ್ರೋ. ಇದ್ದೂ ಇಲ್ಲದಂತೆ ಆಟ ಆಡಿದ್ರೋ ಗೊತ್ತೇ ಇಲ್ಲ. ಇಂತಹ ಭಂಡರು.. ಜಗಮೊಂಡರೂ ಯಾರೊಬ್ಬರೂ ಇರಲ್ಲ. ಪಾದರಾಯನಪುರದ ಪುಂಡರು. ಅವರ ಬೆನ್ನಿಗೆ ನಿಂತಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಟ ಇದು. ಯುದ್ಧಕ್ಕೆ ಹೊರಡೋ ರೇಂಜ್ಗೆ ಇಮ್ರಾನ್ ಅಂದು ಆ್ಯಂಬುಲೆನ್ಸ್ ಹತ್ತಿದ್ರು. ಸಾಲದೂ ಅಂತ ದಂಡು ದಾಳಿ ಕಟ್ಕೊಂಡು ಮೆರವಣಿಗೆ ಮಾಡಿದ್ರು. ಕೊರೊನಾ ಕೇಕೆ ನಡುವೆ ಏರಿಯಾದಲ್ಲಿ ದರ್ಬಾರ್ ಮಾಡಿದ್ದ ಇಮ್ರಾನ್ ಪಾಷಾಗೆ ದೊಡ್ಡ ಸಂಕಷ್ಟವೇ ಎದುರಾಗಿದೆ.
ಏರಿಯಾದಲ್ಲಿ ಶೋ ಮಾಡಿದ್ದಕ್ಕೆ ಜೈಲೂಟ ಆಗುತ್ತಾ ಫಿಕ್ಸ್!?
ಇಷ್ಟೇ ಅಲ್ಲ, ಕಂಟೇನ್ಮೆಂಟ್ ಏರಿಯಾದಲ್ಲಿ ಶೋ ಆಫ್ ಮಾಡಿದ್ದ 126 ಮಂದಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ ಅರೋಗ್ಯ ಇಲಾಖೆ, ಪೊಲೀಸರಿಗೆ ಸಹಕಾರ ನೀಡದ ಇಮ್ರಾನ್ ಪಾಷಾರನ್ನ ಪ್ರಕರಣದ ಎ1 ಅರೋಪಿಯಾಗಿಸಲಾಗಿದೆ. ಅಲ್ದೇ, ಕಂಟೇನ್ಮೆಂಟ್ ಜೋನ್ನಲ್ಲಿ ಗುಂಪಾಗಿ ಸೇರಿದ್ದು.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿ ಐಪಿಸಿ ಸೆಕ್ಷನ್ 143, 145, 149, 152, 270, 290, 353 ರ ಅಡಿಯಲ್ಲಿ ಕೇಸ್ ಜಡಿಯಲಾಗಿದೆ. ಪಾದರಾಯನಪುರದಲ್ಲಿ ಗಲಭೆಗೆ ಸಂಬಂಧಿಸಿದ 5 ಕೇಸ್ಗಳೂ ಹಾಗೂ ಕ್ವಾರಂಟೈನ್ಗೆ ಸಂಬಂಧಿಸಿದ 2 ಕೇಸ್ ಸೇರಿ ಒಟ್ಟು 7 ಕೇಸ್ಗಳು ಇಮ್ರಾನ್ ಪಾಶಾ ಹೆಗಲೇರಿದೆ. ಅಲ್ದೇ, ಹೊರ ಬಿಟ್ರೆ ಮತ್ತೆ ಏರಿಯಾದಲ್ಲಿ ಗಲಾಟೆ, ಗಲಭೆ ಆಗ್ಬೋದು, ಮತ್ತೆ ಏರಿಯಾದಲ್ಲಿ ಹಾವಳಿ ಮಾಡ್ಬೋದು ಅನ್ನೋ ಕಾರಣಕ್ಕೆ ಬೇಲ್ ನೀಡದಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಒಟ್ಟಾರೆ ಗಲಭೆಗೆ ಸಂಬಂಧಿಸಿದಂತೆ 5 ಕೇಸ್, ಕ್ವಾರಂಟೈನ್ಗೆ ಸಂಬಂಧಿಸಿದಂತೆ 2 ಕೇಸ್ ಸೇರಿ ಒಟ್ಟು 7ಪ್ರಕರಣಗಳನ್ನ ಇಮ್ರಾನ್ ಪಾಷಾ ವಿರುದ್ಧ ಹಾಕಲಾಗಿದೆ. ಅದೇನೆ ಇರ್ಲಿ ಮಹಾನ್ ಸಾಧನೆ ಮಾಡಿದೋರಂಗೆ ಏರಿಯಾದಲ್ಲಿ ನಾಟಕ ಮಾಡಿದ್ದ ಪಾಷಾಗೆ ತಕ್ಕ ಶಾಸ್ತಿಯಾಗಿದೆ. ಇದ್ರ ಜೊತೆ ಜೊತೆಗೆ ಇ್ರಮಾನ್ ಪಾಷಾಗೆ ಮತ್ತಷ್ಟು ದಿನ ಜೈಲೂಟ ಖಾಯಂ ಆಗೋದ್ರಲ್ಲಿ ನೋ ಡೌನ್.
Published On - 6:36 am, Wed, 10 June 20