ಮಡಿಕೇರಿ ಎಸ್ಟೇಟ್‌ನಲ್ಲಿ 7 ಹಸುಗಳ ಕಳೇಬರ ಪತ್ತೆ

ಮಡಿಕೇರಿ: ಐಗೂರಿನ ಟಾಟಾ ಎಸ್ಟೇಟ್‌ನಲ್ಲಿ 7 ಹಸುಗಳ ಕಳೇಬರ ಪತ್ತೆಯಾಗಿದೆ. ಈ ರೀತಿ ಹಸುಗಳನ್ನು ಕೊಂದು ಎಸ್ಟೇಟ್‌ನಲ್ಲಿ ಎಸೆಯಲಾಗಿದೆ ಎಂಬ ಅನುಮಾನಗಳು ಹುಟ್ಟಿವೆ. ಆದರೆ ಯಾಕೆ ಎಂಬುವುದು ತಿಳಿದಿಲ್ಲ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ 7 ಹಸುಗಳ ಕಳೇಬರ ಪತ್ತೆಯಾಗಿದ್ದು, 20ಕ್ಕೂ ಹೆಚ್ಚು ಜಾನುವಾರುಗಳನ್ನು ಪಾಪಿಗಳು ಕೊಂದಿರಬಹುದು ಎನ್ನಲಾಗಿದೆ. ಬಾಳೆ ಹಣ್ಣಿನಲ್ಲಿ ವಿಷಹಾಕಿ ಜಾನುವಾರು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಂತರ ಟ್ರ್ಯಾಕ್ಟರ್‌ ಸಹಾಯದಿಂದ ಕಳೇಬರ ಚರಂಡಿಗೆ ಹಾಕಲಾಗಿದೆ. ಹಸುಗಳನ್ನು ಕಳೆದುಕೊಂಡ ಹಸು ಮಾಲೀಕರು ಎಸ್ಟೇಟ್‌ […]

ಮಡಿಕೇರಿ ಎಸ್ಟೇಟ್‌ನಲ್ಲಿ 7 ಹಸುಗಳ ಕಳೇಬರ ಪತ್ತೆ

Updated on: Jul 19, 2020 | 12:41 PM

ಮಡಿಕೇರಿ: ಐಗೂರಿನ ಟಾಟಾ ಎಸ್ಟೇಟ್‌ನಲ್ಲಿ 7 ಹಸುಗಳ ಕಳೇಬರ ಪತ್ತೆಯಾಗಿದೆ. ಈ ರೀತಿ ಹಸುಗಳನ್ನು ಕೊಂದು ಎಸ್ಟೇಟ್‌ನಲ್ಲಿ ಎಸೆಯಲಾಗಿದೆ ಎಂಬ ಅನುಮಾನಗಳು ಹುಟ್ಟಿವೆ. ಆದರೆ ಯಾಕೆ ಎಂಬುವುದು ತಿಳಿದಿಲ್ಲ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ 7 ಹಸುಗಳ ಕಳೇಬರ ಪತ್ತೆಯಾಗಿದ್ದು, 20ಕ್ಕೂ ಹೆಚ್ಚು ಜಾನುವಾರುಗಳನ್ನು ಪಾಪಿಗಳು ಕೊಂದಿರಬಹುದು ಎನ್ನಲಾಗಿದೆ. ಬಾಳೆ ಹಣ್ಣಿನಲ್ಲಿ ವಿಷಹಾಕಿ ಜಾನುವಾರು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಂತರ ಟ್ರ್ಯಾಕ್ಟರ್‌ ಸಹಾಯದಿಂದ ಕಳೇಬರ ಚರಂಡಿಗೆ ಹಾಕಲಾಗಿದೆ.

ಹಸುಗಳನ್ನು ಕಳೆದುಕೊಂಡ ಹಸು ಮಾಲೀಕರು ಎಸ್ಟೇಟ್‌ ವ್ಯವಸ್ಥಾಪಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಕೃತ್ಯ ಯಾರು ಮಾಡಿದ್ದು, ಏಕೆ ಮಾಡಿದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 12:40 pm, Sun, 19 July 20