ಭಾರತದ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಂಟರ ಮಾರುಕಟ್ಟೆ ಮೌಲ್ಯ ಕಳೆದ ವಾರ 1.94 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವುದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಇನ್ನು ಇದಕ್ಕೆ ವ್ಯತಿರಿಕ್ತವಾಗಿ ಎಚ್ಡಿಎಫ್ಸಿ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮಾರುಕಟ್ಟೆ ಮೌಲ್ಯ ಇಳಿಕೆ ಕಂಡಿದೆ. ಇದರಲ್ಲಿ ರಿಲಯನ್ಸ್ ಕಂಪೆನಿಯ ಮೌಲ್ಯದಲ್ಲಿ ರೂ. 60,034.51 ಕೋಟಿ ಹೆಚ್ಚಳವಾಗಿ, ಒಟ್ಟಾರೆ ಮಾರುಕಟ್ಟೆ ಮೌಲ್ಯವು ರೂ. 13,81,078.86 ಕೋಟಿಯನ್ನು ಮುಟ್ಟಿದೆ.
ಕಳೆದ ವಾರ ಯಾವ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ:
1. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ರೂ. 41,048.98 ಕೋಟಿ
2. ಕೊಟಕ್ ಮಹೀಂದ್ರಾ ಬ್ಯಾಂಕ್ ರೂ.28,011.19 ಕೋಟಿ
3. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್ಯುಎಲ್) ರೂ. 16,388 ಕೋಟಿ
4. ಇನ್ಫೋಸಿಸ್ ರೂ. 27,114.19 ಕೋಟಿ
5. ಐಸಿಐಸಿಐ ಬ್ಯಾಂಕ್ ರೂ. 8,424.22 ಕೋಟಿ
6. ಎಚ್ಡಿಎಫ್ಸಿ ರೂ. 1038 ಕೋಟಿ
7. ಬಜಾಜ್ ಫೈನಾನ್ಸ್ 12,419.32 ಕೋಟಿ
ಇನ್ನು ಎಚ್ಡಿಎಫ್ಸಿ ಬ್ಯಾಂಕ್ ಮೌಲ್ಯವು ರೂ. 2590.08 ಕೋಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮೌಲ್ಯವು ರೂ. 5711.75 ಕೋಟಿ ಇಳಿಕೆ ಆಗಿದೆ.
ಭಾರತ ಅತ್ಯಂತ ಮೌಲ್ಯಯುತ ಕಂಪೆನಿಗಳು ಹೀಗಿವೆ:
ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬಜಾಜ್ ಫೈನಾನ್ಸ್.
ಎಫ್ಪಿಐನಿಂದ 5,156 ಕೋಟಿ ರೂ. ವಾಪಸ್:
ಮಾರ್ಚ್ 1ರಿಂದ 5ನೇ ತಾರೀಕಿನ ಮಧ್ಯೆ ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ ಈಕ್ವಿಟಿಯಿಂದ ನಿವ್ವಳವಾಗಿ ರೂ. 881 ಕೋಟಿ ಹಾಗೂ ಡೆಟ್ ಸೆಗ್ಮಟ್ನಿಂದ ರೂ. 4,275 ಕೋಟಿ ಹಿಂಪಡೆದಿದ್ದಾರೆ. ಒಟ್ಟಾರೆಯಾಗಿ 5,156 ಕೋಟಿ ರೂಪಾಯಿ ಹಿಂತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಎಫ್ಪಿಐನಿಂದ ರೂ. 23,663 ಕೋಟಿ ಹಾಗೂ ಜನವರಿಯಲ್ಲಿ 14,649 ಕೋಟಿ ರೂಪಾಯಿ ಹೂಡಲಾಗಿತ್ತು.
ಇದನ್ನೂ ಓದಿ: ಷೇರು ಮಾರ್ಕೆಟ್ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್