ಜಾನುವಾರುಗಳಿಗೆ ಕಂಟಕವಾಗಿದ್ದ ಭಕ್ಷಕ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಜನ

|

Updated on: May 20, 2020 | 3:10 PM

ಮಡಿಕೇರಿ: ಜಾನುವಾರುಗಳಿಗೆ ಕಂಟಕವಾಗಿದ್ದ 8 ವರ್ಷದ ಗಂಡು ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳೂರಿನ ದಿನೇಶ್ ಎಂಬುವವರ ತೋಟದಲ್ಲಿ ಸೆರೆಯಾಗಿದೆ. ಕೊಡಗು ಜಿಲ್ಲೆಯಲ್ಲಿ‌ 24 ಹಸುಗಳನ್ನ ಈ ಭಕ್ಷಕ ಹುಲಿ ಕೊಂದಿತ್ತು. ಹೀಗಾಗಿ ಹುಲಿಯನ್ನು ಹಿಡಿಯಲು ಮೂರು ದಿನಗಳಿಂದ ತಜ್ಞ ವೈದ್ಯ ಸನತ್ ಕೃಷ್ಣ ಮುರಳಿ ನೇತೃತ್ವದಲ್ಲಿ 40 ಸಿಬ್ಬಂದಿಯ ಟೀಂ ಕಾರ್ಯಾಚರಣೆ‌‌ ನಡೆಸುತ್ತಿತ್ತು. ಹುಲಿ ಕಾರ್ಯಾಚರಣೆ‌‌ಗೆ ಮತ್ತಿಗೂಡು ಅರಣ್ಯ ವಲಯದ ಗೋಪಾಲಸ್ವಾಮಿ, ಭೀಮಾ, ಗಣೇಶ ಆನೆಗಳ ತಂಡ ಸಾಥ್ ನೀಡಿತ್ತು. […]

ಜಾನುವಾರುಗಳಿಗೆ ಕಂಟಕವಾಗಿದ್ದ ಭಕ್ಷಕ ಹುಲಿ ಸೆರೆ,  ನಿಟ್ಟುಸಿರು ಬಿಟ್ಟ ಜನ
Follow us on

ಮಡಿಕೇರಿ: ಜಾನುವಾರುಗಳಿಗೆ ಕಂಟಕವಾಗಿದ್ದ 8 ವರ್ಷದ ಗಂಡು ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳೂರಿನ ದಿನೇಶ್ ಎಂಬುವವರ ತೋಟದಲ್ಲಿ ಸೆರೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ‌ 24 ಹಸುಗಳನ್ನ ಈ ಭಕ್ಷಕ ಹುಲಿ ಕೊಂದಿತ್ತು. ಹೀಗಾಗಿ ಹುಲಿಯನ್ನು ಹಿಡಿಯಲು ಮೂರು ದಿನಗಳಿಂದ ತಜ್ಞ ವೈದ್ಯ ಸನತ್ ಕೃಷ್ಣ ಮುರಳಿ ನೇತೃತ್ವದಲ್ಲಿ 40 ಸಿಬ್ಬಂದಿಯ ಟೀಂ ಕಾರ್ಯಾಚರಣೆ‌‌ ನಡೆಸುತ್ತಿತ್ತು. ಹುಲಿ ಕಾರ್ಯಾಚರಣೆ‌‌ಗೆ ಮತ್ತಿಗೂಡು ಅರಣ್ಯ ವಲಯದ ಗೋಪಾಲಸ್ವಾಮಿ, ಭೀಮಾ, ಗಣೇಶ ಆನೆಗಳ ತಂಡ ಸಾಥ್ ನೀಡಿತ್ತು.

ಪಶುವೈದ್ಯ ಮುಜೀಬ್ ರೆಹಮಾನ್, ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ತೀರ್ಥ, ರಂಜನ್ ದೇವಯ್ಯ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕಾರ್ಯಾಚರಣೆ‌‌ಯಲ್ಲಿ ಭಾಗಿಯಾಗಿದ್ರು. ಕೊನೆಗೂ ಮೂರು ದಿನದ ನಂತರ ತಡರಾತ್ರಿ ಹುಲಿ ಸೆರೆಯಾಗಿದೆ. ಸದ್ಯ ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪ್ರಾಣಿ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಹುಲಿ ಸೆರೆಯಿಂದ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Published On - 8:13 am, Wed, 20 May 20