ಕ್ವಾರಂಟೈನ್ನಿಂದ ಕಾರ್ಮಿಕ ಎಸ್ಕೇಪ್ಗೆ ಯತ್ನ, ಹಿಡಿಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ
ಯಾದಗಿರಿ: ಕ್ವಾರಂಟೈನ್ ಕೇಂದ್ರದಿಂದ ಕಾರ್ಮಿಕ ಎಸ್ಕೇಪ್ ಆಗಲು ಯತ್ನಿಸಿರುವ ಘಟನೆ ಹುಣಸಗಿ ತಾಲೂಕಿನ ಪರತನಾಯ್ಕ್ ತಾಂಡಾದಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ಬಂದಿದ್ದ ಹಿನ್ನೆಲೆಯಲ್ಲಿ ಕಾರ್ಮಿಕನನ್ನ ಪರತನಾಯ್ಕ್ ತಾಂಡಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ನಾನು ಇಲ್ಲಿ ಇರೋದಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಇರಲು ಆಗಲ್ಲ ಮನೆಗೆ ಹೋಗ್ತಿನಿ ಅಂತ ಓಡಿದ್ದಾನೆ. ಅವನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಕಾರ್ಮಿಕ ಹಾಗೂ ಆತನ ಕುಟುಂಬಸ್ಥರಿಂದ ಹಲ್ಲೆಯಾಗಿದೆ. ಈ ವೇಳೆ ಕಾರ್ಮಿಕ ಎಎಸ್ಐ ಭೀಮಶಂಕರ್ಗೆ ಕಲ್ಲಿನಿಂದ ಕಣ್ಣಿಗೆ ಹೊಡೆದಿದ್ದಾನೆ. ಅಲ್ಲದೆ ಕಾರ್ಮಿಕನನ್ನ ಹಿಡಿಯಲು […]
ಯಾದಗಿರಿ: ಕ್ವಾರಂಟೈನ್ ಕೇಂದ್ರದಿಂದ ಕಾರ್ಮಿಕ ಎಸ್ಕೇಪ್ ಆಗಲು ಯತ್ನಿಸಿರುವ ಘಟನೆ ಹುಣಸಗಿ ತಾಲೂಕಿನ ಪರತನಾಯ್ಕ್ ತಾಂಡಾದಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ಬಂದಿದ್ದ ಹಿನ್ನೆಲೆಯಲ್ಲಿ ಕಾರ್ಮಿಕನನ್ನ ಪರತನಾಯ್ಕ್ ತಾಂಡಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಆದರೆ ನಾನು ಇಲ್ಲಿ ಇರೋದಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಇರಲು ಆಗಲ್ಲ ಮನೆಗೆ ಹೋಗ್ತಿನಿ ಅಂತ ಓಡಿದ್ದಾನೆ. ಅವನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಕಾರ್ಮಿಕ ಹಾಗೂ ಆತನ ಕುಟುಂಬಸ್ಥರಿಂದ ಹಲ್ಲೆಯಾಗಿದೆ.
ಈ ವೇಳೆ ಕಾರ್ಮಿಕ ಎಎಸ್ಐ ಭೀಮಶಂಕರ್ಗೆ ಕಲ್ಲಿನಿಂದ ಕಣ್ಣಿಗೆ ಹೊಡೆದಿದ್ದಾನೆ. ಅಲ್ಲದೆ ಕಾರ್ಮಿಕನನ್ನ ಹಿಡಿಯಲು ಸಹಾಯಕ್ಕೆ ಬಂದ ವ್ಯಕ್ತಿಯ ಭುಜಕ್ಕೂ ಆತ ಕಚ್ಚಿದ್ದಾನೆ. ಸದ್ಯ ಎಎಸ್ಐ ಭೀಮಶಂಕರ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:59 am, Wed, 20 May 20