ತುಮಕೂರು ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್, ಶಿರಾ ಕ್ಷೇತ್ರದ ಮೇಲೆ ರಾಜಣ್ಣ ಕಣ್ಣು?
ತುಮಕೂರು: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರ ಸಾವಿನಿಂದ ತೆರವಾದ ಕ್ಷೇತ್ರದಲ್ಲಿ ಈಗ ರಾಜಕೀಯ ಕಾವು ರಂಗೇರುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದಲ್ಲಿನ ಒಳರಾಜಕೀಯ. ಹೌದು ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರ ಸಾವಿನಿಂದ ಆ ಕ್ಷೇತ್ರದಲ್ಲೀಗ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬಗ್ಗೆ ಮಧುಗಿರಿಯಲ್ಲಿ ಶಿರಾ ರಾಜಕಾರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ, ಸೆಪ್ಟೆಂಬರ್ 27 ಕ್ಕೆ ಸತ್ಯನಾರಾಯಣ್ ಅವರ ತಿಥಿ ಇದೆ. ಅದಾದ ನಂತರ ರಾಜಕೀಯ ಚಟುವಟಿಕೆಗಳು […]

ತುಮಕೂರು: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರ ಸಾವಿನಿಂದ ತೆರವಾದ ಕ್ಷೇತ್ರದಲ್ಲಿ ಈಗ ರಾಜಕೀಯ ಕಾವು ರಂಗೇರುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದಲ್ಲಿನ ಒಳರಾಜಕೀಯ.
ಹೌದು ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರ ಸಾವಿನಿಂದ ಆ ಕ್ಷೇತ್ರದಲ್ಲೀಗ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬಗ್ಗೆ ಮಧುಗಿರಿಯಲ್ಲಿ ಶಿರಾ ರಾಜಕಾರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ, ಸೆಪ್ಟೆಂಬರ್ 27 ಕ್ಕೆ ಸತ್ಯನಾರಾಯಣ್ ಅವರ ತಿಥಿ ಇದೆ. ಅದಾದ ನಂತರ ರಾಜಕೀಯ ಚಟುವಟಿಕೆಗಳು ನಡೆಯುತ್ತವೆ.ತಿಥಿಯಾಗುವ ಮುನ್ನವೇ ರಾಜಕಾರಣ ಮಾಡೋದು ಸರಿಯಲ್ಲ. ನಮ್ಮ ಮುಂದಿನ ನಿರ್ದಾರ ಏನಿದ್ದರೂ ಮುಖಂಡರ ಜೊತೆ ಕೂತು ಮಾತನಾಡಿದ ನಂತರವೇ ಎನ್ನುವ ಮೂಲಕ ಶಿರಾದಲ್ಲಿ ಪರಾಜಿತ ಕೈ ಅಭ್ಯರ್ಥಿ ಟಿ.ಬಿ.ಜಯಚಂದ್ರರಿಗೆ ಟಾಂಗ್ ನೀಡಿದ್ದಾರೆ.
ಒಂದೇ ಪಕ್ಷದಲ್ಲಿದ್ರು ರಾಜಣ್ಣ ಹಾಗೂ ಜಯಚಂದ್ರ ಕಟ್ಟಾ ರಾಜಕೀಯ ವಿರೋಧಿಗಳು. ಮಧುಗಿರಿಯಲ್ಲಿ ರಾಜಣ್ಣ ಸೋಲಿಗೆ ಜಯಚಂದ್ರ ಕೂಡಾ ಕಾರಣ ಎನ್ನಲಾಗಿತ್ತು. ಹೀಗಾಗಿ ಮಧುಗಿರಿಯಲ್ಲಿನ ತಮ್ಮ ಸೋಲಿಗೆ ಶಿರಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ರಾಜಣ್ಣ ಸೇಡು ತೀರಿಸಿಕೊಳ್ತಾರಾ ಎನ್ನುವ ಪ್ರಶ್ನೆ ಈಗ ತುಮಕೂರು ರಾಜಕಾರದಲ್ಲಿ ಭಾರೀ ಕುತೂಹಲ ಕೆರಳಿಸಿದೆ.



