AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಕ್ಕೊಮ್ಮೆ ಮಾತ್ರ ಈ ಕಾಡಿನಲ್ಲಿ ನಡೆಯುತ್ತದೆ ವಿಶಿಷ್ಟ ಹರಕೆ! ಏನದು?

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ನಾಗಾರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿನ ಎಲ್ಲಾ ಕುಟುಂಬಗಳಿಗೂ ಮೂಲ ನಾಗದೇವರ ಆರಾಧನೆ ಕಡ್ಡಾಯ. ವೈದಿಕರ ಮೂಲಕ ನಾಗನ ಪೂಜೆ ಮಾಡಿಸೋದು ಪದ್ದತಿ. ಆದರೆ ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ತುಳುನಾಡಿನ ಮೂಲ ಜನಾಂಗ ಮುಗ್ಗೇರ ಜನಾಂಗದವರೇ ನಡೆಸುವ ಜನಪದೀಯ ನಾಗಾರಾಧನೆ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ. ಇದು ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ಮುಗ್ಗೇರ ಸಮಾಜದ ಆರಾಧಿಸುವ ಒಂದು ನಾಗಬನ. ಪ್ರಕೃತಿಯ ಪೂಜೆ ನಾಗಾರಾಧನೆಯ ಉದ್ದೇಶ, ದಟ್ಟ ಕಾಡಿನ ನಡುವೆ ಇರುವ ನಾಗಶಿಲೆಗಳನ್ನು ಭಕ್ತಿಯ ಜೊತೆಗೆ ಆರಾಧಿಸುವಲ್ಲಿ […]

ವರ್ಷಕ್ಕೊಮ್ಮೆ ಮಾತ್ರ ಈ ಕಾಡಿನಲ್ಲಿ ನಡೆಯುತ್ತದೆ ವಿಶಿಷ್ಟ ಹರಕೆ! ಏನದು?
Guru
Guru| Edited By: ಸಾಧು ಶ್ರೀನಾಥ್​|

Updated on: Jul 15, 2020 | 2:45 PM

Share

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ನಾಗಾರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿನ ಎಲ್ಲಾ ಕುಟುಂಬಗಳಿಗೂ ಮೂಲ ನಾಗದೇವರ ಆರಾಧನೆ ಕಡ್ಡಾಯ. ವೈದಿಕರ ಮೂಲಕ ನಾಗನ ಪೂಜೆ ಮಾಡಿಸೋದು ಪದ್ದತಿ. ಆದರೆ ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ತುಳುನಾಡಿನ ಮೂಲ ಜನಾಂಗ ಮುಗ್ಗೇರ ಜನಾಂಗದವರೇ ನಡೆಸುವ ಜನಪದೀಯ ನಾಗಾರಾಧನೆ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.

ಇದು ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ಮುಗ್ಗೇರ ಸಮಾಜದ ಆರಾಧಿಸುವ ಒಂದು ನಾಗಬನ. ಪ್ರಕೃತಿಯ ಪೂಜೆ ನಾಗಾರಾಧನೆಯ ಉದ್ದೇಶ, ದಟ್ಟ ಕಾಡಿನ ನಡುವೆ ಇರುವ ನಾಗಶಿಲೆಗಳನ್ನು ಭಕ್ತಿಯ ಜೊತೆಗೆ ಆರಾಧಿಸುವಲ್ಲಿ ಒಂದಿಷ್ಟು ನಿಗೂಢತೆಯೂ ಅಡಗಿದೆ. ಈ ಬನದಲ್ಲಿ ನಾಗನ ಕಲ್ಲುಗಳ ಜೊತೆ ಅದೆಷ್ಟೋ ಮಡಕೆಗಳಿವೆ. ಇದು ಈ ಬನದ ವಿಶಿಷ್ಟ ಹರಕೆ. ಇದಕ್ಕೆ ಮುರಿ ಅಂತಾ ಕರೀತಾರೆ. ಎಂತಹಾ ಸಂಕಷ್ಟ ಎದುರಾದರೂ ಮುರಿ ಹರಕೆ ಹೇಳಿಕೊಂಡರೆ ಪರಿಹಾರ ಪಕ್ಕಾ ಎನ್ನುವ ನಂಬಿಕೆ ಇಲ್ಲಿನ ಭಕ್ತರದು.

ವೃಷಭ ಮಾಸದಲ್ಲಿ ಮಾತ್ರ ನಾಗ ಪೂಜೆ ಇಲ್ಲಿರುವ ನಾಗಬನಕ್ಕೆ ವರ್ಷದ ಮೊದಲ ನಾಗಾರಾಧನೆ ನಡೆಯುತ್ತದೆ. ಸಾಮಾನ್ಯವಾಗಿ ನಾಗರ ಪಂಚಮಿಯಂದು ಎಲ್ಲೆಡೆ ನಾಗನನ್ನು ಪೂಜಿಸಲಾಗುತ್ತೆ. ಆದರೆ ಇಲ್ಲಿ ವೃಷಭ ಮಾಸದಲ್ಲಿ ನಾಗನಿಗೆ ಪೂಜೆ ನಡೆಯುತ್ತದೆ.

ನಾಗರ ಪಂಚಮಿಯ ದಿನ ಇಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ. ಇಲ್ಲಿ ನಾಗನಿಗೆ ಪೂಜೆ ನಡೆಸುವವರು ಹಿಂದುಳಿದ ಮುಗೇರ ಸಮಾಜದವರೇ ಹೊರತು ವೈದಿಕರಲ್ಲ. ಇಲ್ಲಿಗೆ ಯಾರೇ ಬಂದರೂ ಇವರ ಮೂಲಕವೇ ಪೂಜೆ ನಡೆಯಬೇಕು. ವರ್ಷದಲ್ಲೊಮ್ಮೆ ಮಾತ್ರ ಈ ಬನಕ್ಕೆ ಪ್ರವೇಶ.

ಸಂಕಷ್ಟ ಬಂದರೆ ಇಲ್ಲಿ ಹರಕೆ ದೇವರಿಗೆ ಯಾವುದೇ ಜಾತಿ ಬೇಧಗಳಿಲ್ಲ, ಅವನ ಮುಂದೆ ಎಲ್ಲರೂ ಸಮಾನರು ಅನ್ನೋದು ಈ ಆರಾಧನೆಯಿಂದ ಅರಿವಾಗುತ್ತೆ. ಭಕ್ತರು ಈ ನಾಗಬನಕ್ಕೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಸಲ್ಲಿಸಿ ಹೋಗುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಹರಕೆ ಸಲ್ಲಿಸಿದವರ ಸಂಕಷ್ಟ ದೂರವಾದರೆ ಮುರಿ ಸೇವೆಯನ್ನು ಸಲ್ಲಿಸುತ್ತಾರೆ. ಮುರಿ ಎಂದರೆ ನಾಗನ ಹೆಡೆಯನ್ನು ಹೊಂದಿರುವ ಮಡಕೆ. ಈ ಹರಕೆ ಹೊತ್ತವರು ಶ್ರದ್ಧಾ ಭಕ್ತಿಗಳಿಂದ ತಲೆಯಲ್ಲಿ ಮಡಿಕೆ ಹೊತ್ತು ತರುತ್ತಾರೆ.

ಮುರಿ ಸೇವೆ ಸಲ್ಲಿಸಿದರೆ ಸಂಕಷ್ಟಗಳು ಮಾಯ ಈ ಮಡಕೆಯನ್ನು ಒಂದು ಕುಂಬಾರ ಮನೆತನದವರು ಮಾತ್ರ ತಯಾರಿಸುತ್ತಾರೆ. ಇದರ ತಯಾರಿಕೆಗೂ ಕೆಲವೊಂದು ನಿಯಮಗಳಿವೆ. ಮಡಕೆಯನ್ನು ತಯಾರಿಸಿದ ಕುಂಬಾರ ಕೆಲ ವಿಧಿ ವಿಧಾನಗಳನ್ನು ನೆರವೇರಿಸಿ ಹರಕೆ ಹೊತ್ತವರ ತಲೆಗಿಡುತ್ತಾರೆ. ಬಳಿಕ ನಾಗಬನಕ್ಕೆ ತಂದು ಮುರಿಯನ್ನು ನಾಗನ ಕಲ್ಲಿನ ಸಮೀಪ ಇಟ್ಟು ಪೂಜಿಸಲಾಗುತ್ತೆ. ಇಲ್ಲಿ ಮುರಿ ಸೇವೆಯನ್ನು ಒಪ್ಪಿಸಿದ ಅದೆಷ್ಟೋ ಜನರ ಕಾಯಿಲೆಗಳು, ಸಂಕಷ್ಟಗಳು ದೂರವಾಗಿವೆ ಎಂಬುದು ಸ್ಥಳೀಯರ ನಂಬಿಕೆ.

ಆಧುನಿಕತೆಯಲ್ಲೂ ಮೂಲತನ ಉಳಿಸಿಕೊಂಡಿರುವ ನಾಗಬನ ಅಧುನಿಕತೆ ಬೆಳೆದಂತೆ ನಾಗನ ಅರಾಧನ ಕ್ರಮ ವೈದಿಕ ಪದ್ದತಿಯಂತೆ ನಡೆಯುತ್ತಿದೆ. ನಾಗಮಂಡಲದ ಸ್ವರೂಪ ಪಡೆದುಕೊಂಡು ವೈದಿಕರು ವೈಭವದಿಂದ ನಡೆಸಿಕೊಂಡು ಬಂದರೂ, ಮೂಗೇರ ಜನಾಂಗ ಮಾತ್ರ ಮೂಲ ಅಚರಣೆಯನ್ನು ಉಳಿಸಿಕೊಂಡಿದೆ. ಇಂದಿನ ದಿನಗಳಲ್ಲಿ ಪ್ರಾಕೃತಿಕ ಬನಗಳೇ ಮಾಯವಾಗಿವೆ. ನಾಗ ಮತ್ತು ಪ್ರಕೃತಿಯ ಸಂಯೋಗದ ವಿಶಿಷ್ಟ ಆರಾಧನಾ ತಾಣ ಬನ. ಆಧುನಿಕರಣದ ಭರದಲ್ಲಿ ಬನಗಳು ಕಾಣದಾಗಿವೆ. ಇಂಥ ಸಂದರ್ಭದಲ್ಲಿ ಪ್ರಕೃತಿಯ ಮಡಿಲಲ್ಲಿರುವ ಕುತ್ಯಾರಿನ ಈ ನಾಗಬನದ ವಿಶಿಷ್ಟ ರೀತಿಯ ಹರಕೆ ಮತ್ತು ಆರಾಧನಾ ಪದ್ಧತಿ ವಿಶೇಷವಾಗಿದೆ. – ಹರೀಶ್ ಪಾಲೆಚ್ಚಾರ್

Follow Us
Guru
Guru
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ