ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ಆರೋಪ; ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ
ಜಿಸಸ್ ರಕ್ತ ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮಹಿಳೆಗೆ ಪ್ರಜ್ಞೆ ತಪ್ಪಿಸಿದ್ದಾರಂತೆ. ನಂತರ ಆರೋಪಿ ಖಾಸಗಿ ಅಂಗಗಳನ್ನ ಮುಟ್ಟಿ ಮೊಬೈಲ್ನಲ್ಲಿ ವಿಡಿಯೋ ಮಾಡಿ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಂತ ಮಹಿಳೆ ಆರೋಪಿಸಿದ್ದಾರೆ.
ಬೆಂಗಳೂರು: ಮಹಿಳೆಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಲೈಂಗಿಕ ಕಿರುಕುಳ ನೀಡಿದ ವಿಷಯ ಬೇರೆಯವರಿಗೆ ತಿಳಿಸಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸುತ್ತಿರುವ ಮಹಿಳೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಮಹಿಳೆ ಪಾದ್ರಿ ಅಲ್ಬರ್ಟ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. 2 ವರ್ಷದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಅಂತ ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಜಿಸಸ್ ರಕ್ತ ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮಹಿಳೆಗೆ ಪ್ರಜ್ಞೆ ತಪ್ಪಿಸಿದ್ದಾರಂತೆ. ನಂತರ ಆರೋಪಿ ಖಾಸಗಿ ಅಂಗಗಳನ್ನ ಮುಟ್ಟಿ ಮೊಬೈಲ್ನಲ್ಲಿ ವಿಡಿಯೋ ಮಾಡಿ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಅಂತ ಮಹಿಳೆ ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಾದ್ರಿ ಅಲ್ಬರ್ಟ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ ಭೇದಿಸಿದ ಪೊಲೀಸರು ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಂಗಳೂರಿನ ಉರ್ವಾದ ಕೋಡಿಕಲ್, ಕಾವೂರು, ಪಣಂಬೂರು ಎಂಬಲ್ಲಿ ನಾಗ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದ್ದರು. ಸರಣಿ ನಾಗದೇವರ ಮೂರ್ತಿಗಳ ಧ್ವಂಸ ಪ್ರಕರಣಗಳು ಮಂಗಳೂರು ಪೊಲೀಸರಿಗೆ ಸವಾಲಾಗಿತ್ತು. ಆದರೆ ಮಹತ್ವದ ಕಾರ್ಯಾಚರಣೆಯಲ್ಲಿ 8 ಮಂದಿ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಕಾವೂರು ನಿವಾಸಿ ಸಫ್ವಾನ್, ಮೊಹಮ್ಮದ್ ಸುಹೈಲ್, ಪ್ರವೀಣ್ ಅನಿಲ್ ಮೊಂತೆರೊ, ನಿಖಿಲೇಶ್, ಸುರತ್ಕಲ್ನ ಜಯಂತ್ ಕುಮಾರ್, ಬಂಟ್ವಾಳದ ಪ್ರತೀಕ್, ಕೂಳೂರಿನ ಮಂಜುನಾಥ್, ಹಾಸನ ನಿವಾಸಿ ನೌಷಾದ್ ಬಂಧಿತ ಆರೋಪಿಗಳು.
ಇದನ್ನೂ ಓದಿ
ಬಿಜೆಪಿಗೆ ಬೆಂಬಲ ನೀಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ: ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ