ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗ್ತಿದೆ ಅಭಿಷೇಕ್‌ ಬಚ್ಚನ್‌ ಹೊಸ ಹೇರ್‌ ಸ್ಟೈಲ್‌

  • TV9 Web Team
  • Published On - 13:36 PM, 1 Sep 2020
ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗ್ತಿದೆ ಅಭಿಷೇಕ್‌ ಬಚ್ಚನ್‌ ಹೊಸ ಹೇರ್‌ ಸ್ಟೈಲ್‌

ಮುಂಬೈ: ಕೊರೊನಾ ಸೋಂಕಿನಿಂದಾಗಿ ಸುದ್ದಿಯಲ್ಲಿದ್ದ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌, ಈಗ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗ್ತಿದ್ದಾರೆ. ಇದಕ್ಕೆ ಕಾರಣ ಅವರ ಲೆಟೆಸ್ಟ್‌ ಹೇರ್‌ ಸ್ಟೈಲ್‌.

ಹೌದು ಕೊರೊನಾದಿಂದಾಗಿ ಆಸ್ಪತ್ರೆ ಸೇರಿದ್ದ ಬಿಗ್‌ ಪುತ್ರ ಅಭಿಷೇಕ್‌ ಬಚ್ಚನ್‌, ಈಗ ಮತ್ತೆ ಶೂಟಿಂಗ್‌ ಶುರು ಹಚ್ಕೊಂಡಿದ್ದಾರೆ. ಅದಕ್ಕಾಗಿ ತಮ್ಮ ಉದ್ದನೆಯ ಕೂದಲುಗಳನ್ನ ಟ್ರಿಮ್‌ ಮಾಡಿಕೊಂಡಿದ್ದು, ತಮ್ಮ ಚಿತ್ರಗಳ ಶೂಟಿಂಗ್‌ ಆರಂಭಿಸಿದ್ದಾರೆ. ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಲುಕ್‌ನ್ನು ಪೋಸ್ಟ್‌ ಮಾಡಿರುವ ಛೋಟಾ ಬಿ, ‘ಬಿಫೋರ್‌ ಌಂಡ್‌ ಆಫ್ಟರ್!‌ ಟೈಮ್‌ ಟು ಗೆಟ್‌ ಬ್ಯಾಕ್‌ ಟು ವರ್ಕ್‌’ ಅಂತಾ ಕ್ಯಾಪ್ಸನ್‌ ಕೊಟ್ಟಿದ್ದಾರೆ.

ಐಶ್ವರ್ಯ ರೈ-ಬಚ್ಚನ್‌ ಪತಿಯ ಈ ನ್ಯೂಲುಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ ಆಗ್ತಿದೆ. ಅಭಿಷೇಕ್‌ ಬಚ್ಚನ್‌ ಗೆಳೆಯ ಹೃತೀಕ್‌ ರೋಷನ್‌ ವ್ಹಾ ‘ಕ್ಯಾ ಬಾತ್‌’ ಅಂತಾ ಕಾಮೆಂಟ್‌ ಮಾಡಿದ್ದಾರೆ. ಇವರಲ್ಲದೇ ಮತ್ತೊಬ್ಬ ಬಾಲಿವುಡ್‌ ನಟ ಅನುಪಮ್‌ ಖೇರ್‌ ಕೂಡಾ ಕಾಮೆಂಟ್‌ ಮಾಡಿದ್ದು, ನನಗೂ ಹೇರ್‌ ಕಟಿಂಗ್‌ಗಿಂತ ಮೊದಲು ಮತ್ತು ನಂತರ ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆನಿಸುತ್ತಿದೆ ಎಂದಿದ್ದಾರೆ.

ಅಂದ ಹಾಗೆ ಇತ್ತೀಚೆಗಷ್ಟೇ ಪ್ರಸಾರವಾದ ಬ್ರೀಥ್‌: ‘ಇನ್‌ಟೂ ದಿ ಶ್ಯಾಡೋ’ ವೆಬ್‌ ಸಿರೀಸ್‌ ಮುಗಿಸಿರುವ ಅಭಿಷೇಕ್‌, ತಮ್ಮ ಮುಂದಿನ ಚಿತ್ರಗಳಾದ ‘ ದಿ ಬಿಗ್‌ ಬುಲ್‌’, ಪತ್ನಿ ಐಶ್ವರ್ಯ ರೈ-ಬಚ್ಚನ್‌ ಜತೆಗಿನ ‘ಗುಲಾಬ್‌ ಜಾಮೂನ್‌’ ಹಾಗೂ ‘ಲುಡೋ’ ಚಿತ್ರಗಳತ್ತ ಗಮನ ಹರಿಸಿದ್ದು, ಶೀಘ್ರದಲ್ಲಿಯೇ ತೆರೆ ಕಾಣಲಿವೆ.

https://www.instagram.com/p/CEjKnaKpjfK/?utm_source=ig_embed