‘ನಮಗೆ ರೈಸ್, ದಾಲ್ ಗೊತ್ತು: ಆದರೆ ಅದರ ಬಗ್ಗೆ ಗೊತ್ತಿಲ್ಲ’
ತುಮಕೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿನ ಆರೋಪಗಳು ಕೇಳಿಬಂದಿರುವ ಬಗ್ಗೆ ಸ್ಯಾಂಡಲ್ವುಡ್ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ನಮಗೆ ರೈಸ್, ದಾಲ್ ಗೊತ್ತು. ಇದರ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಗೊತ್ತಿರದ ಬಗ್ಗೆ ಅಂತೆ ಕಂತೆಗಳ ಮೇಲೆ ಹೇಳಿಕೆ ಬೇಡ ಅಂತಾ ಸುದೀಪ್ ಹೇಳಿದ್ದಾರೆ. ಅದೊಂದು ಚಿಕ್ಕ ವಿಚಾರ ನನಗೆ ಇದರ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ. ನನಗೆ ಗೊತ್ತಿರದ ವಿಚಾರದ ಬಗ್ಗೆ ಮಾತಾಡುವುದು ಸರಿಯಲ್ಲ.ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದ ಚಿತ್ರರಂಗವನ್ನು ದೂಷಿಸೋದು […]

ತುಮಕೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿನ ಆರೋಪಗಳು ಕೇಳಿಬಂದಿರುವ ಬಗ್ಗೆ ಸ್ಯಾಂಡಲ್ವುಡ್ ನಟ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ನಮಗೆ ರೈಸ್, ದಾಲ್ ಗೊತ್ತು. ಇದರ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಗೊತ್ತಿರದ ಬಗ್ಗೆ ಅಂತೆ ಕಂತೆಗಳ ಮೇಲೆ ಹೇಳಿಕೆ ಬೇಡ ಅಂತಾ ಸುದೀಪ್ ಹೇಳಿದ್ದಾರೆ.
ಅದೊಂದು ಚಿಕ್ಕ ವಿಚಾರ ನನಗೆ ಇದರ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ. ನನಗೆ ಗೊತ್ತಿರದ ವಿಚಾರದ ಬಗ್ಗೆ ಮಾತಾಡುವುದು ಸರಿಯಲ್ಲ.ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದ ಚಿತ್ರರಂಗವನ್ನು ದೂಷಿಸೋದು ಬೇಡ. ಚಿಕ್ಕ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ಅಂತಾ ಹೇಳುವುದು ತಪ್ಪು ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಜೀವನದಲ್ಲಿ ಎಲ್ಲರಿಗೂ ಸುಗಮ ಹಾದಿ ಇರುವುದಿಲ್ಲ. ಎದುರಾಗುವ ಎಲ್ಲ ಸಂಕಷ್ಟ ಎದುರಿಸಿ ಸಾಗಬೇಕಾಗಿದೆ. ಕನ್ನಡ ಚಿತ್ರರಂಗಕ್ಕೆ ಆಗಾಗ ಪೆಟ್ಟು ಬೀಳುತ್ತಲೇ ಇರುತ್ತದೆ. ಆದರೆ ಎಲ್ಲವನ್ನೂ ಎದುರಿಸಿ ನಮ್ಮ ಚಿತ್ರರಂಗ ನಿಂತಿದೆ ಎಂದು ಸುದೀಪ್ ಹೇಳಿದ್ದಾರೆ.
ಕೊರೊನಾ ಬಗ್ಗೆ 3 ತಿಂಗಳ ಹಿಂದೆ ಇದ್ದ ಭಯ ಈಗ ಇಲ್ಲ. ಏಕೆಂದರೆ ಏನೇ ಬಂದರೂ ಎದುರಿಸೋಣ ಎಂಬ ಧೈರ್ಯ ಬಂದಿದೆ. ನಿನ್ನೆಯ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುತೂಹಲ ಕೆರಳಿಸಿದ ಸುದೀಪ್-ಇಂದ್ರಜಿತ್ ಸಿದ್ಧಗಂಗಾ ಮಠ ದಿಢೀರ್ ಭೇಟಿ
Published On - 2:01 pm, Tue, 1 September 20



