ರೈತರ ಹಣ ಬಿಡುಗಡೆ ಮಾಡಲು ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ

|

Updated on: Dec 17, 2019 | 6:30 PM

ಚಿಕ್ಕಬಳ್ಳಾಪುರ: ರೈತರಿಗೆ ಡ್ರಿಪ್ ಇರಿಗೇಷನ್ ಆಳವಡಿಸಿದ್ದ ಹಣ‌ ಬಿಡುಗಡೆಗೆ ಅನುಮತಿ‌ ನೀಡಲು ಲಂಚಕ್ಕೆ ಕೈಯೊಡ್ಡಿದ್ದ ಕೃಷಿ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರಯ್ಯ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿ. ಡ್ರಿಪ್ ಇರಿಗೇಷನ್ ಆಳವಡಿಸಿದ್ದ ಹಣ‌ ಬಿಡುಗಡೆಗೆ ಅನುಮತಿ‌ ನೀಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಗರುಡಾದ್ರಿ ಡ್ರಿಪ್ ಇರಿಗೇಷನ್ ಎಂಟರ್ ಪ್ರೈಸರ್ಸ್ ಮಾಲೀಕ ಲಕ್ಷ್ಮೀನರಸಿಂಹ ಎಂಬುವರ ಬಳಿ ಮುಂಗಡವಾಗಿ 50 ಸಾವಿರ […]

ರೈತರ ಹಣ ಬಿಡುಗಡೆ ಮಾಡಲು ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ
Follow us on

ಚಿಕ್ಕಬಳ್ಳಾಪುರ: ರೈತರಿಗೆ ಡ್ರಿಪ್ ಇರಿಗೇಷನ್ ಆಳವಡಿಸಿದ್ದ ಹಣ‌ ಬಿಡುಗಡೆಗೆ ಅನುಮತಿ‌ ನೀಡಲು ಲಂಚಕ್ಕೆ ಕೈಯೊಡ್ಡಿದ್ದ ಕೃಷಿ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರಯ್ಯ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿ.

ಡ್ರಿಪ್ ಇರಿಗೇಷನ್ ಆಳವಡಿಸಿದ್ದ ಹಣ‌ ಬಿಡುಗಡೆಗೆ ಅನುಮತಿ‌ ನೀಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಗರುಡಾದ್ರಿ ಡ್ರಿಪ್ ಇರಿಗೇಷನ್ ಎಂಟರ್ ಪ್ರೈಸರ್ಸ್ ಮಾಲೀಕ ಲಕ್ಷ್ಮೀನರಸಿಂಹ ಎಂಬುವರ ಬಳಿ ಮುಂಗಡವಾಗಿ 50 ಸಾವಿರ ರೂಪಾಯಿ ಪಡೆದಿದ್ದರು. ಇಂದು ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಶೇಖರಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.