ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್​ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್​

ಕರ್ನಾಟದಲ್ಲೇ ಕನ್ನಡ ಹಾಡುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರದ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಆದರೆ ಪರಭಾಷೆ ನಟರಿಗೂ ನಮ್ಮ ಕನ್ನಡದ ಸಿನಿಮಾ ಗೀತೆಗಳು ಇಷ್ಟ ಎಂಬುದನ್ನು ಇದು ಬೆಸ್ಟ್​ ಉದಾಹರಣೆ.

ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್​ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್​
ಹರ್ಷಿಕಾ ಪೂಣಚ್ಚ - ಗೋವಿಂದ

Updated on: Mar 23, 2021 | 12:32 PM

ಬಾಲಿವುಡ್​ ನಟ ಗೋವಿಂದ ಅವರು ಕನ್ನಡದ ಒಂದು ಫೇಮಸ್​ ಹಾಡನ್ನು ಹೇಳಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಹಾಗೆ ಕನ್ನಡ ಸಾಂಗ್ ಗುನುಗಲು ಕಾರಣ ಆಗಿರುವುದು ನಟಿ ಹರ್ಷಿಕಾ ಪೂಣಚ್ಚ ಎಂಬುದು ವಿಶೇಷ. ಇತ್ತೀಚೆಗೆ ಹರ್ಷಿಕಾ ಮತ್ತು ಗೋವಿಂದ ಭೇಟಿ ಆಗಿದ್ದಾರೆ. ಆ ಸಂದರ್ಭದಲ್ಲಿ ಒಂದು ಕನ್ನಡ ಹಾಡು ಹೇಳುವಂತೆ ಗೋವಿಂದ ಬಳಿ ಹರ್ಷಿಕಾ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಗೋವಿಂದಾ ಅವರು ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ…’ ಗೀತೆ ಹಾಡಿದ್ದಾರೆ.

ಡಾ. ರಾಜ್​ಕುಮಾರ್​​ ಅಭಿನಯದ ‘ಎರಡು ಕನಸು’ ಚಿತ್ರದ ಈ ಎವರ್​ಗ್ರೀನ್​ ಗೀತೆ ಈಗಲೂ ಕೇಳುಗರ ಫೇವರಿಟ್​ ಲಿಸ್ಟ್​ನಲ್ಲಿ ಇದೆ. ನಟ ಗೋವಿಂದ ಕೂಡ ಈ ಹಾಡಿಗೆ ಬಹುಕಾಲದಿಂದ ಫ್ಯಾನ್​ ಆಗಿದ್ದಾರೆ. ಹರ್ಷಿಕಾ ಪೂಣಚ್ಚ ಜೊತೆಗೂಡಿ ಅವರು ಈ ಗೀತೆಯನ್ನು ಗುನುಗಿದ್ದಾರೆ. ಆ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹರ್ಷಿಕಾ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ. ಬಾಲಿವುಡ್​ ನಟನ ಕನ್ನಡ ಪ್ರೀತಿ ಕಂಡು ಕನ್ನಡಿಗರು ಫಿದಾ ಆಗಿದ್ದಾರೆ.

ಅಂದಹಾಗೆ, ಗೋವಿಂದ ಈ ಹಾಡನ್ನು ಹೇಳಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೇ ಕಿರುತೆರೆಯ ‘ಡ್ಯಾನ್ಸ್​ ಇಂಡಿಯಾ ಡ್ಯಾನ್ಸ್​ ಸೂಪರ್​ ಮಾಮ್ಸ್​’ ಕಾರ್ಯಕ್ರಮದಲ್ಲಿ ಗೋವಿಂದ ಈ ಗೀತೆಯನ್ನು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆ ರಿಯಾಲಿಟಿ ಶೋನಲ್ಲಿ ಕರ್ನಾಟಕದ ಸೌಮ್ಯಶ್ರೀ ಭಾಗವಹಿಸಿದ್ದರು. ಅವರನ್ನು ಖುಷಿ ಪಡಿಸುವ ಸಲುವಾಗಿ ಗೋವಿಂದ ಒಂದು ಕನ್ನಡ ಹಾಡನ್ನು ಗುನುಗಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇನ್ನು, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಗೋವಿಂದ ಅವರು ತಮ್ಮ ಖಾಸಗಿ ಜೀವನದ ಕೆಲವು ವಿವರಗಳನ್ನು ಹಂಚಿಕೊಂಡಿದ್ದರು. ಸಿನಿಮಾ ರಂಗ ತೊರೆದ ನಂತರ ಗೋವಿಂದ ಅಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದಾರೆಯೇ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ಹಳೆಯ ಗೋವಿಂದ ಧರ್ಮನಿಷ್ಠೆ ಉಳ್ಳವನಾಗಿದ್ದ. ಆದರೆ ಈ ಗೋವಿಂದ ಭ್ರಷ್ಟನಾಗಿದ್ದಾನೆ. ನಾನು ಪಾರ್ಟಿ ಮಾಡುತ್ತೇನೆ. ಧೂಮಪಾನ- ಕುಡಿತ ಹೆಚ್ಚಾಗಿದೆ. ನಾನು ಮೊದಲೆಲ್ಲ ಭಾವುಕನಾಗುತ್ತಿದೆ. ಆದರೆ, ಈಗ ಭಾವುಕನಾಗುವುದೇ ಇಲ್ಲ’ ಎಂದು ಅವರು ತುಂಬ ಮುಕ್ತವಾಗಿ ಉತ್ತರ ನೀಡಿದ್ದರು. ಈ ಮೂಲಕ ಜೀವನದಲ್ಲಿ ಸಾಕಷ್ಟು ಬದಲಾಗಿದೆ ಎಂಬುದನ್ನು ಅವರು ಹೇಳಿದ್ದರು.

ಇದನ್ನೂ ಓದಿ: ಧರ್ಮದ ಬಗ್ಗೆ ನಿಷ್ಠೆ ಇಲ್ಲ, ಕುಡಿತ ಹೆಚ್ಚಾಗಿದೆ, ನಾನು ಭ್ರಷ್ಟನಾಗಿದ್ದೇನೆ; ನಟ ಗೋವಿಂದ ಹೀಗಾಗಿದ್ದೇಕೆ?

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!